ETV Bharat / state

ಗುಂಡ್ಲುಪೇಟೆ ಶಾಲೆ ವಿರುದ್ಧ ಹಿಂಜಾವೇ ಮತಾಂತರ ಆರೋಪ.. ಪ್ರತಿಭಟನೆ, ಆಕ್ರೋಶ

author img

By

Published : Jan 16, 2023, 8:17 PM IST

ಗುಂಡ್ಲುಪೇಟೆ ಪಟ್ಟಣದಲ್ಲಿರುವ ಪಬ್ಲಿಕ್ ಶಾಲೆಯ ವಿರುದ್ಧ ಹಿಂಜಾವೇ ಮತಾಂತರಕ್ಕೆ ಪ್ರೇರೆಪಿಸುತ್ತಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್​ ಮೂಲಕ ಸಿಎಂಗೆ ಮನವಿ ಸಲ್ಲಿಸಿ ಆಕ್ರೋಶ ಹೊರಹಾಕಿದ್ದಾರೆ.

ಹಿಂದೂ ಜಾಗರಣ ವೇದಿಕೆ
ಹಿಂದೂ ಜಾಗರಣ ವೇದಿಕೆ

ದಲಿತ ಸಂಘಟನೆ ಮುಖಂಡ ಮುತ್ತಣ್ಣ ಅವರು ಮಾತನಾಡಿದರು

ಚಾಮರಾಜನಗರ: ಹಿಜಾಬ್ ಬಳಿಕ ತಣ್ಣಗಿದ್ದ ಸಂಘರ್ಷ ಮತ್ತೆ ಗುಂಡ್ಲುಪೇಟೆಯಲ್ಲಿ ಆರಂಭಗೊಂಡಿದ್ದು, ಇಲ್ಲಿನ ಖಾಸಗಿ ಶಾಲೆಯೊಂದರ ವಿರುದ್ಧ ಮತಾಂತರದ ಆರೋಪ ಕೇಳಿಬಂದಿದೆ. ಇದರ ವಿರುದ್ಧ ಹಿಂದೂ ಜಾಗರಣ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿರುವ ಪಬ್ಲಿಕ್ ಶಾಲೆಯ ವಿರುದ್ಧ ಹಿಂಜಾವೇ ಮತಾಂತರಕ್ಕೆ ಪ್ರೇರೆಪಿಸುತ್ತಿದ್ದಾರೆಂದು ಆರೋಪಿಸಿ ತಹಶೀಲ್ದಾರ್​ ಮೂಲಕ ಸಿಎಂಗೆ ಮನವಿ ಸಲ್ಲಿಸಿದೆ.

ಅಷ್ಟೇ ಅಲ್ಲ ಪ್ರತಿಭಟನೆಯನ್ನು ನಡೆಸಿ ಆಕ್ರೋಶ ಹೊರಹಾಕಿದೆ. ಅಲ್ಲದೇ, ಶಾಲೆ ನಡೆಸುವ ಪರವಾನಗಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಪತ್ರವನ್ನೂ ಕೂಡಾ ಸಂಘಟನೆಯ ಕಾರ್ಯಕರ್ತರು ರವಾನಿಸಿದ್ದಾರೆ.

ಏನಿದು ಹೊಸ ವಿವಾದ : ಸಂಕ್ರಾಂತಿ ಹಬ್ಬದ ದಿನ ಶಾಲೆ ತೆರೆದಿದ್ದರಿಂದ ಮತ್ತು ಶಾಲೆಯಲ್ಲಿ ರಾಷ್ಟ್ರ ನಾಯಕರ ಭಾವಚಿತ್ರ ಇಡದೇ ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂಬ ವಿಚಾರ ಭಾನುವಾರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಹಬ್ಬದ ದಿನವಾದ ಭಾನುವಾರ ಶಾಲೆಯು ಇಲ್ಲಿನ ಮಕ್ಕಳಿಗೆ ರಜೆ ನೀಡದೇ ಎಲ್ಲಾ ವಿದ್ಯಾರ್ಥಿಗಳನ್ನು ತರಗತಿಗೆ ಕರೆಯಿಸಿಕೊಳ್ಳಲಾಗಿದೆಯಂತೆ. ಈ ವಿಚಾರ ಹಿಂದೂ ಜಾಗರಣಾ ವೇದಿಕೆ ಮತ್ತು ದಲಿತ ಸಂಘರ್ಷ ಸಮಿತಿಯವರಿಗೆ ಗೊತ್ತಾಗಿದೆ. ಶಾಲೆಯ ಈ ನಿರ್ಧಾರವನ್ನು ಖಂಡಿಸಿ, ಶಾಲೆಗೆ ಭೇಟಿ ನೀಡಿದ ಸಂಘಟನೆಗಳ ಕಾರ್ಯಕರ್ತರು ಶಾಲಾ ಆಡಳಿತ ಮಂಡಳಿ ಮಕ್ಕಳಿಗೆ ರಜೆ ನೀಡದೇ, ರಜಾ ದಿನದಂದು ತರಗತಿಗಳನ್ನು ನಡೆಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯಲ್ಲಿ ರಾಷ್ಟ್ರ ನಾಯಕ ಡಾ. ಬಿ. ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಬೀರುವಿನಲ್ಲಿರಿಸಲಾಗಿತ್ತು ಎಂದು ದಲಿತ ಸಂಘಟನೆ ಮುತ್ತಣ್ಣ ಎಂಬುವರು ಆರೋಪಿಸಿದ್ದಾರೆ.

ಶಾಲಾ ಶಿಕ್ಷಕರು ನೀಡಿದ ಸ್ಪಷ್ಟನೆ ಏನು?: ಶಾಲಾ ವಾರ್ಷಿಕೋತ್ಸವ ಸಂಬಂಧ ಡ್ಯಾನ್ಸ್ ಪ್ರಾಕ್ಟೀಸ್​ಗಾಗಿ ಮಕ್ಕಳನ್ನು ಭಾನುವಾರ ಕರೆಸಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಕರು ಸ್ಪಷ್ಟನೆ ನೀಡಿದ್ದಾರೆ. ಈ ನಡುವೆ ರಜಾ ದಿನದಲ್ಲಿ ಶಾಲೆ ತೆರೆದಿರುವ ಬಗ್ಗೆ ಸ್ಪಷ್ಟನೆ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್​ ಸಿ ಶಿವಮೂರ್ತಿ, ರಜಾ ದಿನ ತರಗತಿ ನಡೆಸುವ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಸಂಬಂಧ ಅನುಮತಿ ಪಡೆದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಸಂಘಟನೆಗಳ ಕಾರ್ಯಕರ್ತರು ಖಾಸಗಿ ಶಾಲೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಬಿಇಒ ಹಾಗೂ ತಹಶೀಲ್ದಾರ್​ಗೆ ದೂರು ನೀಡಿದ್ದಾರೆ. ಈ ಬಗ್ಗೆ ಇಲಾಖೆ ಹಾಗೂ ತಹಶೀಲ್ದಾರ್​ ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.

ಪಾನಮತ್ತ ಸವಾರನ ಎಡವಟ್ಟು: ಎರಡು ಬೈಕ್​ಗಳ ನಡುವೆ ಡಿಕ್ಕಿಯಾಗಿ ಮೂವರು ಗಾಯಗೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಕಾವುದವಾಡಿ ಬಳಿ ನಡೆದಿದೆ. ಚೂರನಹಳ್ಳಿ ಗ್ರಾಮದ ಮಹೇಶ್ ಹಾಗೂ ಹೊಸಪೋಡು ಗ್ರಾಮದ ಮಹದೇವ, ರಂಗಸ್ವಾಮಿ ಗಾಯಗೊಂಡವರು. ಪಾನಮತ್ತ ಸವಾರನಿಂದ ಈ ಅಪಘಾತ ಸಂಭವಿಸಿದ್ದು, ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂತೇಮರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಓದಿ: ಬಲವಂತದ ಧಾರ್ಮಿಕ ಮತಾಂತರ: ಅಟಾರ್ನಿ ಜನರಲ್​ ಸಲಹೆ ಕೋರಿದ ಸುಪ್ರೀಂಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.