ETV Bharat / state

ಕೊಳ್ಳೇಗಾಲಕ್ಕೆ ಡಾಲಿ ಧನಂಜಯ್ ಭೇಟಿ.. 'ಬಡವ ರಾಸ್ಕಲ್​' ನೋಡಲು ಮುಗಿಬಿದ್ದ ಫ್ಯಾನ್ಸ್​

author img

By

Published : Dec 26, 2021, 5:48 PM IST

Updated : Dec 26, 2021, 6:12 PM IST

Actor Dolly Dhananjay visited Kollegalla
ಕೊಳ್ಳೇಗಾಲಕ್ಕೆ ಡಾಲಿ ಧನಂಜಯ್ ಭೇಟಿ

'ಬಡವ ರಾಸ್ಕಲ್' ಸಿನಿಮಾ ಪ್ರಚಾರಕ್ಕೆ ನಟ ಡಾಲಿ ಧನಂಜಯ್ ಕೊಳ್ಳೇಗಾಲಕ್ಕೆ ಇಂದು ಭೇಟಿ ನೀಡಿದ್ದರು.

ಕೊಳ್ಳೇಗಾಲ(ಚಾಮರಾಜನಗರ): ರಾಜ್ಯಾದ್ಯಂತ ಬಿಡುಗಡೆಗೊಂಡಿರುವ 'ಬಡವ ರಾಸ್ಕಲ್' ಸಿನಿಮಾ ಪ್ರಚಾರಕ್ಕೆ ನಟ ಡಾಲಿ ಧನಂಜಯ್ ಕೊಳ್ಳೇಗಾಲಕ್ಕೆ ಇಂದು ಭೇಟಿ ನೀಡಿದ್ದರು. ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು.

ನಟ ಡಾಲಿ ಧನಂಜಯ್ ಕಾರು ಬರುತ್ತಿದ್ದಂತೆ ಅಭಿಮಾನಿಗಳು ಸುತ್ತುವರೆದು ಹೂವಿನ ಮಳೆಗರೆದು, ಪಟಾಕಿ ಸಿಡಿಸಿ ಸಿಳ್ಳೆ, ಚಪ್ಪಾಳೆ ಹೊಡೆಯುವ ಮೂಲಕ ಮೆಚ್ಚಿನ ನಟನನ್ನು ಬರಮಾಡಿಕೊಂಡರು.

ಕೊಳ್ಳೇಗಾಲಕ್ಕೆ ಡಾಲಿ ಧನಂಜಯ್ ಭೇಟಿ

ಪಟ್ಟಣದ ಕೃಷ್ಣ ಚಿತ್ರ ಮಂದಿರದಲ್ಲಿ ಡಿ.24ರಂದು ತೆರೆಕಂಡ 'ಬಡವ ರಾಸ್ಕಲ್' ಚಿತ್ರವನ್ನು ನೋಡಿ ಆಶೀರ್ವದಿಸಬೇಕೆಂದು ಡಾಲಿ ಮನವಿ ಮಾಡಿದರು. ಈ ವೇಳೆ ಅಭಿಮಾನಿಗಳು ಡಾಲಿ, ಡಾಲಿ ಎಂದು ಹರ್ಷೋದ್ಘಾರ ಮೊಳಗಿಸಿದರು. ನಟ ಧನಂಜಯ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ನಾ ಮುಂದು, ತಾ ಮುಂದು ಎಂದು ಅಭಿಮಾನಿಗಳು ಮುಗಿಬಿದ್ದರು. ಅವರನ್ನು‌ ನಿಯಂತ್ರಿಸಲು ಪೊಲೀಸರು‌ ಹರಸಾಹಸ ಪಡಬೇಕಾಯಿತು.

ಇದನ್ನೂ ಓದಿ: ರೈಡರ್ ಸಿನಿಮಾ ಪೈರಸಿ: ಭಾವುಕರಾದ ನಿಖಿಲ್ ಕುಮಾರಸ್ವಾಮಿ

Last Updated :Dec 26, 2021, 6:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.