ETV Bharat / state

ರಸ್ತೆ ಬದಿ ಹೊಂಚು ಹಾಕುತ್ತಿದ್ದ ಚಿರತೆ.. ವಿಡಿಯೋ ಸೆರೆಹಿಡಿದ ಯುವಕರ ಗುಂಪು

author img

By

Published : Dec 17, 2022, 12:30 PM IST

ತೆರಕಣಾಂಬಿ ಸಮೀಪದ ಹುಲಗಿನ ವೆಂಕಟರಮಣ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಇದನ್ನು ಕಾರಿನಲ್ಲಿ ಹೋಗುತ್ತಿದ್ದ ಕೆಲವರು ಮೊಬೈಲ್​ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

A leopard in road side
ರಸ್ತೆ ಬದಿಯಲ್ಲಿ ಹೊಂಚು ಹಾಕುತ್ತಿದ್ದ ಚಿರತೆ

ರಸ್ತೆ ಬದಿಯಲ್ಲಿದ್ದ ಚಿರತೆಯ ವಿಡಿಯೋ ಸೆರೆ ಹಿಡಿದ ಯುವಕರು

ಚಾಮರಾಜನಗರ: ರಸ್ತೆ ಬದಿ ಚಿರತೆಯೊಂದು ಹೊಂಚು ಹಾಕಿ ಕುಳಿತಿದ್ದ ವೇಳೆ ಯುವಕರು ಅಣತಿ ದೂರದಿಂದಲೇ ಮೊಬೈಲ್​ ಕ್ಯಾಮರಾದ ಮೂಲಕ ವಿಡಿಯೋ ಸೆರೆಹಿಡಿದು ಹುಚ್ಚುತನ ಪ್ರದರ್ಶನ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹುಲುಗನಮುರುಡಿ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ.

ತೆರಕಣಾಂಬಿ ಸಮೀಪದ ಹುಲಗಿನ ವೆಂಕಟರಮಣ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಇದನ್ನು ಕಾರಿನಲ್ಲಿ ಹೋಗುತ್ತಿದ್ದ ಕೆಲವರು ಮೊಬೈಲ್​ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

ವೆಂಕಟರಮಣ ಸ್ವಾಮಿ ಬೆಟ್ಟದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಓಡಾಡುತ್ತಿದ್ದು, ಶುಕ್ರವಾರ ಸಂಜೆ ಕಣ್ಣಿಗೆ ಕಾಣಿಸಿಕೊಂಡಿದೆ. ದನಗಾಹಿಗಳು ಬೆಟ್ಟದ ತಪ್ಪಲಿಗೆ ತಮ್ಮ ಜಾನುವಾರುಗಳನ್ನು ಕರೆದೊಯ್ಯಲು ಹಿಂದೇಟು ಹಾಕುತ್ತಿದ್ದಾರೆ. ಮುಂಜಾನೆ ಹಾಗೂ ಸಂಜೆ ವೇಳೆ ಬೆಟ್ಟಕ್ಕೆ ಭಕ್ತರು ಹೋಗುತ್ತಿದ್ದು, ಈಗ ಅವರು ಕೂಡ ಭಯಬಿದ್ದಿದ್ದಾರೆ.

ಇದನ್ನೂ ಓದಿ: ಹಾವೇರಿ: ರಸ್ತೆ ಬದಿಯಲ್ಲಿ ಚಿರತೆ ಪ್ರತ್ಯಕ್ಷ.. ಭೀತಿಗೊಳಗಾದ ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.