ETV Bharat / state

ಬೀದರ್: ಪ್ರಿಯಕರನೊಂದಿಗೆ ಸೇರಿ ಸುಪಾರಿ ಕೊಟ್ಟು ಪತಿ ಕೊಲೆ; ಪತ್ನಿ ಸೇರಿ ನಾಲ್ವರು ಅಂದರ್​

author img

By ETV Bharat Karnataka Team

Published : Dec 31, 2023, 10:09 PM IST

Updated : Dec 31, 2023, 10:50 PM IST

ಪ್ರಿಯಕರನ ಜೊತೆ ಸೇರಿಕೊಂಡು ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಪ್ರಕರಣದಲ್ಲಿ ನಾಲ್ವರನ್ನು ಬೀದರ್​ ಪೊಲೀಸರು ಬಂಧಿಸಿದ್ದಾರೆ.

Bidar Police Station
ಬೀದರ್ ಪೊಲೀಸ್ ಠಾಣೆ

ಬೀದರ್ ಎಸ್ಪಿ ಚನ್ನಬಸವಣ್ಣ ಎಸ್ ಎಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದರು.

ಬೀದರ್: ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನೇ ಕೊಲೆ ಮಾಡಿದ್ದ ಖತರ್ನಾಕ ಲೇಡಿ ಹಾಗೂ ಆಕೆಯ ಪ್ರಿಯಕರನನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ.

ನವೆಂಬರ್​ 11, 2023ರಂದು ಬೀದರ್ ತಾಲೂಕಿನ ಪೊಮಾ ತಾಂಡಾ ಸಮೀಪ ಅಲಿಯಂಬರ್ ನಡುವಿನ ರಸ್ತೆಯ ಬ್ರಿಡ್ಜ್ ಬಳಿ ಆಕೆಯ ಪತಿ ಅಮಿತ್​ನ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ ಹಿನ್ನೆಲೆ ಸ್ಥಳಕ್ಕೆ ಹೋಗಿ ಪೊಲೀಸರು ಪರಿಶೀಲನೆ ಮಾಡಿದ್ದರು. ಈ ಪ್ರಕರಣದ ಬೆನ್ನತ್ತಿದ ಪೊಲೀಸರು ಅನುಮಾನಾಸ್ಪದವಾಗಿ ಕಂಡುಬಂದ ಹಲವರನ್ನು ತನಿಖೆಗೆ ಒಳಪಡಿಸಿದ್ದರು.

ಕೊಲೆಗೆ ಸುಪಾರಿ: ಪೊಮಾ ತಾಂಡಾದ ನಿವಾಸಿ ಪ್ರಿಯಕರ ರವಿ ಪಾಟೀಲ್ ಹಾಗೂ ಪತ್ನಿ ಚೈತ್ರಾ ಸೇರಿಕೊಂಡು ವೆಂಕಟ್ ಗಿರಿಮಾಜೆ, ಆಕಾಶ ಗಿರಿಮಾಜೆಗೆ ಪತಿ ಅಮಿತ್​ ಕೊಲೆಗೆ ಸುಪಾರಿ ನೀಡಿದ್ದರು. ಫಾರ್ಮ್​ ಹೌಸ್​ಗೆ ಹೋಗಿ ದ್ವಿಚಕ್ರ ವಾಹನದ ಮೇಲೆ ವಾಪಸ್​ ಬರುತ್ತಿದ್ದ ವೇಳೆ ಅಮಿತ್​ಗೆ ರಾಡ್​ನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಪತ್ನಿ ಜನವಾಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆ ನಂತರ ಪೊಲೀಸರು ವಿಶೇಷ ತಂಡ ರಚಿಸಿ ಕೊಲೆ ಪ್ರಕರಣವನ್ನು ಗಭೀರವಾಗಿ ಪರಿಗಣಿಸಿ ತನಿಖೆ ಮಾಡಿದ್ದರು.

ಪರಿಶೀಲನೆ ಕೈಗೊಂಡ ವೇಳೆ, ಪ್ರಿಯಕರ ರವಿ ಪಾಟೀಲ್ ಎಂಬ ಆರೋಪಿ ತಮ್ಮ ಫಾರ್ಮ್​ ಹೌಸ್​ಗೆ ಅಮಿತನನ್ನು ಕರೆಯಿಸಿಕೊಂಡು, ವೆಂಕಟ್ ಗಿರಿಮಾಜೆ, ಆಕಾಶ ಗಿರಿಮಾಜೆ ಅವರಿಗೆ ಸುಪಾರಿ ಕೊಟ್ಟಿರುವ ಕುರಿತು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಎಸ್ಪಿ ಚನ್ನಬಸವಣ್ಣ ಎಸ್​ ಎಲ್ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಈ ಹಿಂದೆ ಕೂಡ ಅಮಿತ್​ ಕೊಲೆಗೆ ಯತ್ನಿಸಿ ಆರೋಪಿ ರವಿ ಪಾಟೀಲ್ ವಿಫಲಗೊಂಡಿದ್ದನು. ಆದರೆ ಎರಡನೇ ಪ್ರಯತ್ನದಲ್ಲಿ ಅಮಿತನನ್ನು ಕೊಲೆ ಮಾಡುವಲ್ಲಿ ಯಶಸ್ವಿಯಾಗಿದ್ದನು ಎಂದು ಗೊತ್ತಾಗಿದೆ. ಪತ್ನಿ ಚೈತ್ರಾ ರವಿ ಪಾಟೀಲ್ ಇಬ್ಬರ ನಡುವೆ ಅನೈತಿಕ ಸಂಬಂಧ ಇರುವುದು ಅಮಿತ್​ಗೆ ಸಂಶಯ ಬಂದು ವಿರೋಧಿಸಿದ್ದನು. ಇದರಿಂದ ಪತ್ನಿ ಚೈತ್ರಾ ಪ್ರಿಯಕರ ರವಿಗೆ ತನ್ನ ಪತಿಗೆ ಏನಾದರೂ ಮಾಡು ಎಂದಿದ್ದಕ್ಕೆ ಆರೋಪಿ ಸುಪಾರಿ ನೀಡಿ ಕೊಲೆಗೈದಿದ್ದನು ಎಂದು ಎಸ್ಪಿ ಚನ್ನಬಸವಣ್ಣ ಎಸ್ ಎಲ್ ಮಾಹಿತಿ ನೀಡಿದ್ದಾರೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಪಾಟೀಲ್​, ಪತ್ನಿ ಚೈತ್ರಾ, ಸುಪಾರಿ ಪಡೆದಿದ್ದ ವೆಂಕಟ್ ಮತ್ತು ಆಕಾಶ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂಓದಿ:ಹಾಸನ : ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಕ್ಷುಲ್ಲಕ ಕಾರಣಕ್ಕೆ ಕೊಂದ ಪತಿ

Last Updated : Dec 31, 2023, 10:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.