ETV Bharat / state

ಗ್ರಾಪಂ ಅಧ್ಯಕ್ಷ ಚುನಾವಣೆ ಮುಂದೂಡಲು ದುಷ್ಕರ್ಮಿಗಳಿಂದ ಕಲ್ಲು ತೂರಾಟ!

author img

By

Published : Feb 4, 2021, 8:24 PM IST

ಔರಾದ್ ತಾಲೂಕಿನ ನಾಗರಮಾರಪಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವೇಳೆಯಲ್ಲಿ ಪಂಚಾಯಿತಿಗೆ ಕ್ರೂಸರ್ ಜೀಪ್​ನಲ್ಲಿ ಆಗಮಿಸಿದ್ದ ಕರಂಜಿ ಗ್ರಾಮದ ಸದಸ್ಯೆ ಅಹಲ್ಯಾಬಾಯಿ ರೆಡ್ಡಿ ಎಂಬಾತರ ವಾಹನದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ.

accused-attack-on-gram-panchayth-members-at-bidar
ಪಂಚಾಯಿತಿ ಅಧ್ಯಕ್ಷ ಚುನಾವಣೆ ಮುಂದೂಡಲು ಮುಂದಾದ ದುಷ್ಕರ್ಮಿಗಳಿಂದ ಕಲ್ಲು ತೂರಾಟ!

ಬೀದರ್: ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಮುಂದೂಡುವ ದುರುದ್ಧೇಶದಿಂದ ಸದಸ್ಯರು ಸಂಚರಿಸುತ್ತಿದ್ದ ಜೀಪ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿರುವ ಘಟನೆ ನಡೆದಿದೆ.

ಪಂಚಾಯಿತಿ ಅಧ್ಯಕ್ಷ ಚುನಾವಣೆ ಮುಂದೂಡಲು ಮುಂದಾದ ದುಷ್ಕರ್ಮಿಗಳಿಂದ ಕಲ್ಲು ತೂರಾಟ!

ಜಿಲ್ಲೆಯ ಔರಾದ್ ತಾಲೂಕಿನ ನಾಗರಮಾರಪಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ಪಂಚಾಯಿತಿಗೆ ಕ್ರೂಸರ್ ಜೀಪ್​ನಲ್ಲಿ ಆಗಮಿಸಿದ್ದ ಕರಂಜಿ ಗ್ರಾಮದ ಸದಸ್ಯೆ ಅಹಲ್ಯಾಬಾಯಿ ರೆಡ್ಡಿ ಎಂಬುವರ ವಾಹನದ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.

ಓದಿ: ಏರೋ ಇಂಡಿಯಾ 2021: ಎಲ್ಲರ ಗಮನ ಸೆಳೆದ 'ರಫೆಲ್ ಏರ್ ಕ್ರಾಫ್ಟ್'

ಬಸವರಾಜ್ ಹೆಬ್ಬಾಳೆ ಹಾಗೂ ಸಂಗಪ್ಪ ಘಾಟೆ ಎಂಬುವರ ಬೆಂಬಲಿಗರು ಚುನಾವಣೆ ಮುಂದೂಡುವ ದುರುದ್ದೇಶದಿಂದ ಈ ದುಷ್ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಚಿಂತಾಕಿ ಪೊಲೀಸರ ರಕ್ಷಣೆಯಲ್ಲಿ ಅಹಲ್ಯಾಬಾಯಿ ಮತ ಚಲಾವಣೆ ಮಾಡಿದ್ದು, ನಾಗಮಾರಪಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅಂಜಮ್ಮ ರಾಯಪಳ್ಳಿ ಆಯ್ಕೆಯಾಗಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.