ETV Bharat / state

ಶ್ರೀರಾಮುಲುಗೆ ಡಿಸಿಎಂ ಪಟ್ಟಕ್ಕೆ ಆಗ್ರಹ: ಅಭಿಮಾನಿಗಳಿಂದ ಪ್ರತಿಭಟನೆ

author img

By

Published : Aug 27, 2019, 11:37 PM IST

ಸಚಿವ ಶ್ರೀರಾಮುಲುಗೆ ಡಿಸಿಎಂ ಪಟ್ಟಕ್ಕೆ ಆಗ್ರಹಿಸಿ ಪ್ರತಿಭಟನೆ

ಉಪ ಮುಖ್ಯಮಂತ್ರಿ ಪಟ್ಟ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಶ್ರೀರಾಮುಲು ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.

ಬಳ್ಳಾರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲುಗೆ ಉಪ ಮುಖ್ಯಮಂತ್ರಿ ಪಟ್ಟ ನೀಡಬೇಕೆಂದು ಆಗ್ರಹಿಸಿ ಬಳ್ಳಾರಿಯಲ್ಲಿಂದು ಪ್ರತಿಭಟನೆ ನಡೆಸಲಾಯ್ತು.

ಸಚಿವ ಶ್ರೀರಾಮುಲುಗೆ ಡಿಸಿಎಂ ಪಟ್ಟಕ್ಕೆ ಆಗ್ರಹಿಸಿ ಪ್ರತಿಭಟನೆ

ಬಳ್ಳಾರಿಯ ಎಪಿಎಂಸಿ ಮಾರುಕಟ್ಟೆ ವೃತ್ತದಲ್ಲಿಂದು ಪಾಲಿಕೆಯ ಸದಸ್ಯ ಎಂ.ಗೋವಿಂದರಾಜಲು ನೇತೃತ್ವದ ಅಭಿಮಾನಿ ಬಳಗದ ಕಾರ್ಯಕರ್ತರು ಸೇರಿಕೊಂಡು ಬಿಜೆಪಿ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿದರು. ಬಳಿಕ ಬೇಕೇಬೇಕು ಡಿಸಿಎಂ ಪಟ್ಟ ಎಂದು ಜೈಕಾರ ಹಾಕಿದ್ದಾರೆ. ಬಿ.ಶ್ರೀರಾಮುಲು ವಾಲ್ಮೀಕಿ ಸಮುದಾಯದ ಪ್ರಬಲ ನಾಯಕರಾಗಿದ್ದು, ಉತ್ತರ ಕರ್ನಾಟಕ, ಹೈ-​ಕ ಭಾಗದಲ್ಲಿ ಜನಮನ್ನಣೆ ಗಳಿಸಿದ್ದಾರೆ. ಕೇವಲ ದಕ್ಷಿಣ ಕರ್ನಾಟಕ ಭಾಗದ ಜನಪ್ರತಿನಿಧಿಗಳಿಗೆ ಮಾತ್ರ ಸಿಎಂ, ಡಿಸಿಎಂ ಹುದ್ದೆಗಳಾದ್ರೆ, ಈ ಭಾಗದ ಜನಪ್ರತಿನಿಧಿಗಳಿಗೆ ಕೇವಲ ಸಚಿವ ಸ್ಥಾನಕ್ಕೆ ಸೀಮಿತಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro:ಸಚಿವ ಶ್ರೀರಾಮುಲುಗೆ ಡಿಸಿಎಂ ಪಟ್ಟ ನೀಡಲು ಆಗ್ರಹಿಸಿ ಬಳ್ಳಾರಿಯಲ್ಲಿ ಶ್ರೀರಾಮುಲು ಅಭಿಮಾನಿಗಳಿಂದ ಪ್ರತಿಭಟನೆ
ಬಳ್ಳಾರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಪಟ್ಟ ನೀಡಬೇಕೆಂದು ಆಗ್ರಹಿಸಿ ಬಳ್ಳಾರಿಯಲ್ಲಿಂದು ಪ್ರತಿಭಟನೆ ನಡೆಸಿದರು.
ಬಳ್ಳಾರಿಯ ಎಪಿಎಂಸಿ ಮಾರುಕಟ್ಟೆ ವೃತ್ತದಲ್ಲಿಂದು ಪಾಲಿಕೆಯ
ಸದಸ್ಯ ಎಂ.ಗೋವಿಂದರಾಜಲು ನೇತೃತ್ವದ ಅಭಿಮಾನಿ ಬಳಗದ ಕಾರ್ಯಕರ್ತರು ಸೇರಿಕೊಂಡು ಕೆಲಕಾಲ ಬಿಜೆಪಿ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿದರು. ಬಳಿಕ, ಬೇಕೇಬೇಕು ಡಿಸಿಎಂ
ಪಟ್ಟ ಎಂದು ಜೈಕಾರ ಹಾಕಿದ್ದಾರೆ.
ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಬಿ.ಶ್ರೀರಾಮುಲು ಅವರಾಗಿದ್ದು. ಉತ್ತರ ಕರ್ನಾಟಕ, ಹೈದರಾಬಾದ ಕರ್ನಾಟಕ ಭಾಗದಲ್ಲಿ ಜನಮನ್ನಣೆಯನ್ನು ಗಳಿಸಿದ್ದಾರೆ. ಕೇವಲ ದಕ್ಷಿಣ ಕರ್ನಾಟಕ ಭಾಗದ ಜನಪ್ರತಿನಿಧಿಗಳಿಗೆ ಮಾತ್ರ ಸಿಎಂ, ಡಿಸಿಎಂ ಹುದ್ದೆಗಳಾದ್ರೆ ಈ ಭಾಗದ ಜನಪ್ರತಿನಿಧಿಗಳಿಗೆ ಕೇವಲ ಸಚಿವ ಸ್ಥಾನಗಳಿಗೆ ಸೀಮಿತಗೊಳಿಸಿದ್ದಾರೆ.
Body:ಪಾಲಿಕೆ ಸದಸ್ಯ ಎಂ.ಗೋವಿಂದರಾಜಲು ಮಾತನಾಡಿ, ಕಳೆದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲಿ ರಾಜ್ಯ ನಾಯಕರಾದ ಶ್ರೀರಾಮುಲು ಅವರಿಗೆ ಡಿಸಿಎಂ ಪಟ್ಟ ನೀಡೋ ದಾಗಿ ಬಿಜೆಪಿ ಹೈಕಮಾಂಡ್ ಭರವಸೆ ನೀಡಿತ್ತಾದರೂ, ಆದರೀಗ ಡಿಸಿಎಂ ಪಟ್ಟ ನೀಡದೇ ವಚನ ಭ್ರಷ್ಟವಾಗಿದೆ.‌ ಸಿಎಂ ಬಿಎಸ್ ವೈ ನಂತ್ರ ಕಾಲಿಗೆ ಟೊಂಕಕಟ್ಟಿಕೊಂಡು ಇಡೀ ರಾಜ್ಯವನ್ನೇ ಸುತ್ತಾಡಿದವ್ರು ಸಚಿವ ಶ್ರೀರಾಮುಲು. ಅಂಥ ಮಹಾನ್ ನಾಯಕರನ್ನೇ ಈ ಸರ್ಕಾರದಲ್ಲಿ ಕಡೆಗಣಿಸಲಾಗಿದೆ. ಇನ್ಮುಂದೆಯಾದ್ರೂ ಡಿಸಿಎಂ ಪಟ್ಟ ನೀಡೇ ತೀರಬೇಕು ಎಂದು ಪಟ್ಟು ಹಿಡಿದಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_MINISTER_RAMULU_FLOWERS_DEMAND_DCM_PROTEST_7203310

KN_BLY_3d_DCM_BYTE_NAME_GOVINDRAJULU_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.