ETV Bharat / state

ನಾಮಪತ್ರ ಸಲ್ಲಿಸಿದ ಜನಾರ್ದನ ರೆಡ್ಡಿ ಪತ್ನಿ.. ಅರುಣಾ ಲಕ್ಷ್ಮೀ ಆಸ್ತಿ ಮೌಲ್ಯವೆಷ್ಟು ಗೊತ್ತಾ?

author img

By

Published : Apr 18, 2023, 9:11 AM IST

ಜನಾರ್ದನರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಅವರು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದು, ಆಸ್ತಿ ವಿವರವನ್ನು ಸಲ್ಲಿಸಿದ್ದಾರೆ.

ಲಕ್ಷ್ಮೀ ಅರುಣಾ ಆಸ್ತಿ ವಿವರ
ಲಕ್ಷ್ಮೀ ಅರುಣಾ ಆಸ್ತಿ ವಿವರ

ಬಳ್ಳಾರಿ: ಮಾಜಿ ಸಚಿವ, ಕೆಆರ್​ಪಿಪಿ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಪತ್ನಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕೆಆರ್​ಪಿಪಿ ಅಭ್ಯರ್ಥಿಯೂ ಆಗಿರುವ ಗಾಲಿ ಲಕ್ಷ್ಮೀ ಅರುಣಾ ಅವರು ಚುನಾವಣೆ ನಾಮಪತ್ರ ಸಲ್ಲಿಕೆ ಮಾಡಿದ್ದು ಅವರ ಆಸ್ತಿ ವಿವರವನ್ನು ಸಲ್ಲಿಸಿದ್ದಾರೆ. ಲಕ್ಷ್ಮೀ ಅರುಣಾ ಅವರು 1.76 ಲಕ್ಷ ರೂ. ನಗದು ಹೊಂದಿದ್ದರೆ, ಅವರ ಪತಿ 1.33 ಲಕ್ಷ ರೂ. ಹೊಂದಿದ್ದಾರೆ. ಚರಾಸ್ತಿ ಮೌಲ್ಯ 96.23 ಕೋಟಿ ರೂ.ಗಳು ಇದ್ದರೆ, ಜನಾರ್ದನ ರೆಡ್ಡಿ 29.20 ಕೋಟಿ ರೂ.ಗಳ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಇನ್ನು ಮಗ ಕಿರೀಟಿ ರೆಡ್ಡಿ 7.24 ಕೋಟಿ ರೂ.ಗಳ ಚರಾಸ್ತಿ ಹೊಂದಿದ್ದಾರೆ. ಲಕ್ಷ್ಮೀ ಅರುಣಾ 104.38 ಕೋಟಿ ರೂ.ಗಳ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಪತಿ ಜನಾರ್ದನ ರೆಡ್ಡಿ ಹೆಸರಿನಲ್ಲಿ 8 ಕೋಟಿ ರೂ.ಗಳ ಮೌಲ್ಯದ ಸ್ಥಿರಾಸ್ತಿ ಇದೆ. ಮಗ ಕಿರೀಟಿ 1.24 ಕೋಟಿ ರೂ.ಗಳ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಅಫಿಡವಿಟ್‍ನಲ್ಲಿ ಮಾಹಿತಿ ಲಭ್ಯವಾಗಿದೆ.

ಕಂಪನಿಗಳಲ್ಲಿ ಹೂಡಿಕೆ: ಲಕ್ಷ್ಮೀ ಅರುಣಾ ವಿವಿಧ ಕಂಪನಿಗಳಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿದ್ದಾರೆ. ಓಬಳಾಪುರಂ ಮೈನಿಂಗ್ ಕಂಪನಿಯಲ್ಲಿ 29.55 ಕೋಟಿ ರೂ., ಬ್ರಾಹ್ಮಣಿ ಇಂಡಸ್ಟ್ರೀಸ್‍ನಲ್ಲಿ 25.08 ಕೋಟಿ ರೂ., ಮುದಿತಾ ಪ್ರಾಪರ್ಟಿಸ್‍ನಲ್ಲಿ 18.27 ಕೋಟಿ ರೂ., ಟುಲ್ಲರ್ ರಿವಿಟ್ಸ್ ಕಂಪನಿಯಲ್ಲಿ 1 ಕೋಟಿ ರೂ., ಕಿರೀಟಿ ಏವಿಯೇಷನ್ ಪ್ರೈ.ಲಿ. ನಲ್ಲಿ 1 ಕೋಟಿ ರೂ., ಓಡಿಸ್ಸಿ ಕಾರ್ಪೋರೇಷನ್ ಲಿಮಿಟೆಡ್‍ನಲ್ಲಿ 3.42 ಕೋಟಿ ರೂ., ಆದಿತ್ಯ ಬಿರ್ಲಾ ವಿಮಾ ಕಂಪನಿಯಲ್ಲಿ 44 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಇನ್ನು ಮಗ ಕಿರೀಟಿ ರೆಡ್ಡಿ ಹೆಸರಿನಲ್ಲಿ ಎಸ್‍ಬಿಐ ಮ್ಯುಚುವಲ್ ಫಂಡ್‍ನಲ್ಲಿ 2 ಕೋಟಿ ರೂ., ಬೇರೆ ಷೇರು ಮತ್ತು ಬಾಂಡ್‍ಗಳಲ್ಲಿ 5 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ.

ಲಕ್ಷ್ಮೀ ಅರುಣಾ ಅವರು 77.20 ಲಕ್ಷ ರೂ. ಬೆಳ್ಳಿ, 16. 44 ಕೋಟಿ ರೂ. ಚಿನ್ನ ಹಾಗೂ ಡೈಮಂಡ್ ಹೊಂದಿದ್ದಾರೆ. ಜನಾರ್ದನ ರೆಡ್ಡಿ ಅವರು 32.18 ಲಕ್ಷ ರೂ. ಮೌಲ್ಯದ ಬೆಳ್ಳಿ, 7.93 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ಡೈಮಂಡ್ ಹೊಂದಿದ್ದಾರೆ. ಜನಾರ್ದನ ರೆಡ್ಡಿ ಕೂಡ ಓಬಳಾಪುರಂ ಮೈನಿಂಗ್ ಕಂಪನಿಯಲ್ಲಿ 19.58 ಕೋಟಿ ರೂ.ಗಳನ್ನು ವ್ಯಯಿಸಿದ್ದಾರೆ. ಲಕ್ಷ್ಮೀ ಅರುಣಾ ಆಕ್ಸಿಜನ್ ಕೋ.ಪ್ರೈ.ಲಿ. ನಲ್ಲಿ 2.50 ಲಕ್ಷ ರೂ.ಗಳು, ಕಿರೀಟಿ ಪವರ್ ಕಾರ್ಪೋರೇಷನ್​ ಲಿ.ನಲ್ಲಿ 2.50 ಲಕ್ಷ ರೂ.ಗಳು, ಕಿರೀಟಿ ಏವಿಯೇಷನ್ ಪ್ರೈ.ಲಿ.ನಲ್ಲಿ 1 ಕೋಟಿ ರೂ. ಹೀಗೆ ವಿವಿಧ ಕಂಪನಿಗಳಲ್ಲಿ ಹಣವನ್ನು ವ್ಯಯಿಸಿದ್ದಾರೆ. ಲಕ್ಷ್ಮೀ ಅರುಣಾ ಅವರು ಚರಾಸ್ತಿ ಮೇಲೆ 96.23 ಕೋಟಿ ರೂ, ಮತ್ತು ಸ್ಥಿರಾಸ್ತಿ ಮೇಲೆ 74.89 ಕೋಟಿ ರೂ. ಸಾಲ ಹೊಂದಿದ್ದಾರೆ. ಜನಾರ್ದನ ರೆಡ್ಡಿ ಒಟ್ಟು 34.61 ಕೋಟಿ ರೂ., ಮಗ ಕಿರೀಟಿ ರೆಡ್ಡಿ 7.66 ಕೋಟಿ ರೂ.ಗಳ ಸಾಲ ಹೊಂದಿದ್ದಾರೆ.

ಇದನ್ನೂ ಓದಿ: ಡಿ ಕೆ ಶಿವಕುಮಾರ್ ₹1,414 ಕೋಟಿ ಮೌಲ್ಯದ ಆಸ್ತಿ ಒಡೆಯ..​ ಹೆಚ್​ ಡಿ ಕುಮಾರಸ್ವಾಮಿ ಒಟ್ಟು ಆಸ್ತಿ ಎಷ್ಟು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.