ETV Bharat / state

ಖಾತೆ ಬದಲಾವಣೆಗಾಗಿ ದೆಹಲಿಗೆ ಹೋಗುವುದಿಲ್ಲ: ಸಚಿವ ಆನಂದ ಸಿಂಗ್ ಸ್ಪಷ್ಟನೆ

author img

By

Published : Aug 13, 2021, 4:38 PM IST

ಬೇಡಿಕೆಗಳನ್ನು ನಾಯಕರು ಪೂರೈಸಿದ್ದಾರೆ. ಬೆಂಗಳೂರು ಮುಖಂಡರ ಆಶೀರ್ವಾದ ಪಡೆಯಲು ಹೋಗಿದ್ದೆ. ದೆಹಲಿಗೆ ಹೋಗುವ ಕುರಿತು ಮಾಧ್ಯಮದವರ ಮುಂದೆ ಎಂದೂ ಮಾತನಾಡಿಲ್ಲ ಎಂದು ಸಚಿವ ಆನಂದ ಸಿಂಗ್ ಹೇಳಿದರು.

Minister Ananad Singh statement about Delhi Visit
ಸಚಿವ ಆನಂದ ಸಿಂಗ್

ಹೊಸಪೇಟೆ (ವಿಜಯನಗರ): ದೆಹಲಿಗೆ ಹೋಗುವ ಕುರಿತು ಮಾಧ್ಯಮದವರ ಮುಂದೆ ಎಂದೂ ಮಾತನಾಡಿಲ್ಲ. ಹಾಗಾಗಿ ದೆಹಲಿಗೆ ಹೋಗುವುದಿಲ್ಲ ಎಂದು ಸಚಿವ ಆನಂದ ಸಿಂಗ್ ಹೇಳಿದರು.

ನಗರದ ವೇಣುಗೋಪಾಲ ದೇವಸ್ಥಾನದಲ್ಲಿ ಮಾತನಾಡಿದ ಅವರು, ಬೇಡಿಕೆಗಳನ್ನು ನಾಯಕರು ಪೂರೈಸಿದ್ದಾರೆ. ಬೆಂಗಳೂರು ಮುಖಂಡರ ಆಶೀರ್ವಾದ ಪಡೆಯಲು ಹೋಗಿದ್ದೆ. ಬಿ.ಎಸ್.ಯಡಿಯೂರಪ್ಪ ಮುಂದೆ ಖಾತೆ ಬದಲಾವಣೆ ಮಾಡಿಸುವ ಕುರಿತು ಮಾತನಾಡಿಲ್ಲ ಎಂದು ಹೇಳಿದರು.

ಸಚಿವ ಆನಂದ ಸಿಂಗ್

ಖಾತೆ ಕುರಿತು ಹೇಳುವ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡಿದ್ದೇನೆ. ಬಿ.ಎಸ್.ಯಡಿಯೂರಪ್ಪ ಅವರ ಮುಂದೆ ಏನೂ ಹೇಳಿಲ್ಲ. ಆದರೆ, ದುಡಿಕಿನ ನಿರ್ಧಾರ ತಗೆದುಕೊಳ್ಳಬಾರದು ಎಂದು ಯಡಿಯೂರಪ್ಪ ಅವರು ಸಲಹೆ ನೀಡಿದ್ದಾರೆ. ಅಲ್ಲದೇ, ಸಮಸ್ಯೆ ಪರಿಹರಿಸುವ ಕುರಿತು ಕಾದು ನೋಡುವೆ ಎಂದರು.

ಆ.15 ರಂದು ಧ್ವಜಾರೋಹಣವನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯ ಮುನ್ಸಿಪಲ್ ಮೈದಾನದಲ್ಲಿ ಮಾಡಲಾಗುವುದು.‌ ಉಳಿದ ರೋಟರಿ ಹಾಗೂ ಜೋಳದರಾಶಿ ಗುಡ್ಡದಲ್ಲಿ ಮುಖಂಡರು ಧ್ವಜಾರೋಹಣ ಮಾಡಲಿದ್ದಾರೆ. ಬಳಿಕ ಬೆಂಗಳೂರಿಗೆ ಹೋಗುವೆ. ಬಳ್ಳಾರಿ ನಗರದಲ್ಲಿ ಜಿಲ್ಲಾಧಿಕಾರಿ ದ್ವಜಾರೋಹಣ ಮಾಡಲಿದ್ದಾರೆ ಎಂದು ತಿಳಿಸಿದರು.

ಓದಿ: ಬೆಂಗಳೂರಿನಲ್ಲಿ‌ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ್ದೇ ಬಿಜೆಪಿಯವರು.. ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.