ETV Bharat / state

ಗಣಿನಾಡಿನಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ : ಮಣ್ಣಿನಿಂದ ತಯಾರಿಸಿದ ಜೋಡೆತ್ತುಗಳಿಗೆ ವಿಶೇಷ ಪೂಜೆ

author img

By

Published : Jul 9, 2021, 10:15 AM IST

ಈ‌ ಮಣ್ಣೆತ್ತಿನ ಅಮವಾಸ್ಯೆ ನಿಮಿತ್ತ ಗೋಧಿ ನುಚ್ಚಿನ ಹುಗ್ಗಿ ಜೋಡೆತ್ತುಗಳಿಗೆ ನೈವೇದ್ಯ ಮಾಡುವುದು ವಾಡಿಕೆ. ಅದು ಎಲ್ಲರಿಗೂ ಪ್ರಿಯವಾದ ಸಿಹಿ ಖಾದ್ಯವಾಗಿದೆ. ಕಾರ ಹುಣ್ಣಿಮೆ ಸಂದರ್ಭದಲ್ಲಿ ಹೋಳಿಗೆ ಖಾದ್ಯ ತಯಾರಿಸಿಕೊಂಡು ಸವಿದರೆ, ಈ ಮಣ್ಣೆತ್ತಿನ ಅಮವಾಸ್ಯೆಯಂದು ಗೋಧಿ ಹುಗ್ಗಿ ತಯಾರಿಸಿ ಸವಿಯುತ್ತಾರೆ..

Farmers Celebrates Mannettina Amavasye
ಗಣಿನಾಡಿನಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ

ಬಳ್ಳಾರಿ : ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಈ ದಿನದಂದು ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ ಮೇಳೈಸಿದೆ‌. ಕಳೆದ ತಿಂಗಳಷ್ಟೇ ಖಾರ ಹುಣ್ಣಿಮೆ ಸಂಭ್ರಮ ಆಚರಿಸಿದ ಬೆನ್ನಲ್ಲೇ ಇಂದು ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ ಗ್ರಾಮಗಳಲ್ಲಿ ಮನೆ ಮಾಡಿದೆ.

ಮಣ್ಣಿನಿಂದ ತಯಾರಿಸಿದ ಜೋಡಿ ಎತ್ತುಗಳು ಹಾಗೂ ಗೋದಲಿಯನ್ನ ದೇವರ ಜಗುಲಿ ಮೇಲಿಟ್ಟು ವಿಶೇಷ ಪೂಜೆ ಸಲ್ಲಿಸುವುದು ಉಭಯ ಜಿಲ್ಲೆಗಳ ಗ್ರಾಮೀಣ ಜನರ ವಾಡಿಕೆ. ಮುಂಗಾರು ಹಂಗಾಮು ಆರಂಭವಾದ ಬಳಿಕ ಈ ಮಣ್ಣೆತ್ತಿನ ಅಮವಾಸ್ಯೆ ಗ್ರಾಮೀಣ ಭಾಗದ ಜನರ ಅಚ್ಚುಮೆಚ್ಚಿನ ಸಂಭ್ರಮದ ಹಬ್ಬವಾಗಿದೆ. ಕೆಲವರು ಮನೆಯಲ್ಲೇ ಮಣ್ಣಿನಿಂದ ಜೋಡೆತ್ತುಗಳನ್ನ ತಯಾರಿಸಿಕೊಂಡರೆ, ಉಳಿದವರು ಕುಂಬಾರಿಕೆ ಮಾಡುವವರು ತಯಾರಿಸಿದ ಜೋಡೆತ್ತುಗಳನ್ನ ಖರೀದಿಸುತ್ತಾರೆ.

ಮಹಾನಗರದಲ್ಲೂ ಸಂಭ್ರಮ : ಈ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ ಕೇವಲ ಗ್ರಾಮೀಣ ಭಾಗಕ್ಕೆ ಸೀಮಿತವಾಗಿಲ್ಲ. ರೈತ-ಎತ್ತು-ಮಣ್ಣಿನ ಸಂಬಂಧ ಸಾರುವ ಹಬ್ಬವಾಗಿದ್ದು, ಬಳ್ಳಾರಿ ಮಹಾನಗರದಲ್ಲಿಯೂ ಆಚರಿಸುತ್ತಾರೆ. ರೈತಾಪಿ ವರ್ಗದ ಹಿನ್ನೆಲೆಯಿಂದ ಬಂದಂತಹ ಪ್ರತಿಯೊಬ್ಬರ ಮನೆಯಲ್ಲಿಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಗೋಧಿ ಹುಗ್ಗಿ ಪ್ರಿಯವಾದದು : ಈ‌ ಮಣ್ಣೆತ್ತಿನ ಅಮವಾಸ್ಯೆ ನಿಮಿತ್ತ ಗೋಧಿ ನುಚ್ಚಿನ ಹುಗ್ಗಿ ಜೋಡೆತ್ತುಗಳಿಗೆ ನೈವೇದ್ಯ ಮಾಡುವುದು ವಾಡಿಕೆ. ಅದು ಎಲ್ಲರಿಗೂ ಪ್ರಿಯವಾದ ಸಿಹಿ ಖಾದ್ಯವಾಗಿದೆ. ಕಾರ ಹುಣ್ಣಿಮೆ ಸಂದರ್ಭದಲ್ಲಿ ಹೋಳಿಗೆ ಖಾದ್ಯ ತಯಾರಿಸಿಕೊಂಡು ಸವಿದರೆ, ಈ ಮಣ್ಣೆತ್ತಿನ ಅಮವಾಸ್ಯೆಯಂದು ಗೋಧಿ ಹುಗ್ಗಿ ತಯಾರಿಸಿ ಸವಿಯುತ್ತಾರೆ.

ಮಣ್ಣೆತ್ತಿನ ಅಮವಾಸ್ಯೆಗೆ ಸಪ್ತ ಋಷಿ ಮಂಡಲ ತಳಕು : ಉತ್ತರಕರ್ನಾಟಕ ಅದರಲ್ಲಿಯೂ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಆಚರಿಸಲ್ಪಡುವ ಮಣ್ಣೆತ್ತಿನ ಅಮವಾಸ್ಯೆಗೆ ಆಕಾಶದಲ್ಲಿನ ಸಪ್ತ ಋಷಿ ಮಂಡಲ (ಚೆನ್ನಮ್ಮನ ದಂಡಿ) ತಳಕು ಹಾಕಿಕೊಂಡ ಕುತೂಹಲಕಾರಿ ಕತೆಯೊಂದಿದೆ. ಹಿಂದೂ ಧರ್ಮದ ಆಚಾರ, ವಿಚಾರಗಳಲ್ಲಿ ವೈಜ್ಞಾನಿಕ ತಳಕು ಸಾಕಷ್ಟು ಸಾಮ್ಯತೆ ಹೊಂದಿವೆ. ವೈಜ್ಞಾನಿಕ ಜ್ಞಾನ ಕೊರತೆಯಿಂದ ಮೌಢ್ಯತೆ, ಸಂಪ್ರದಾಯದ ಹೆಸರಲ್ಲಿ ಕೆಲ ಹಬ್ಬ ಹರಿದಿನಗಳು ಮುಂದುವರೆದುಕೊಂಡು ಬಂದಿವೆ ಎಂಬುದು ಸಂಪ್ರದಾಯಸ್ಥರ ಅಂಬೋಣವಾಗಿದೆ. ಈ ಹಿಂದೆ ಸಾದ್ವಿ ಚೆನ್ನಮ್ಮ ಎಂಬ ರೈತ ಮಹಿಳೆಯ ಗಂಡ ಕೃಷಿ ಚಟುವಟಿಕೆ ಮಾಡುತ್ತಿದ್ದಾಗ ಮೃತಪಟ್ಟಿದ್ದ. ಪತಿಯೇ ಸರ್ವಸ್ವ ಎಂದುಕೊಂಡಿದ್ದ ಚೆನ್ನಮ್ಮ ಮಣ್ಣೆತ್ತು ಪೂಜೆ ಮಾಡಿ ಗಂಡನನ್ನು ರಕ್ಷಿಸಿದ್ದಳು.

ಆಗ ಪರಮಾತ್ಮ ಆಕಾಶ ಭೂಮಿ ಇರುವವರೆಗೆ ದಂಡೆ ರೂಪದಲ್ಲಿ (ಸಪ್ತ ಋಷಿ ಮಂಡಲ) ಅಜರಾಮರವಾಗಿರು ಎಂದು ವರ ನೀಡಿದ್ದನಂತೆ. ಈಗಲು ಆಕಾಶದಲ್ಲಿ ದಂಡಿ ಆಕಾರ ಚುಕ್ಕಿಗಳ ಗುಂಪಿಗೆ ಚೆನ್ನಮ್ಮನ ದಂಡಿ ಎಂದು ಕರೆಯುವುದು ವಾಡಿಕೆ. ಈ ಕಾರಣದಿಂದ ರೈತ ಮಹಿಳೆಯರು, ಕೃಷಿಯಲ್ಲಿ ತೊಡಗಿರುವ ಪತಿ ರಕ್ಷಣೆಯ ದ್ಯೂತಕವಾಗಿ ಈ ಅಮವಾಸ್ಯೆ ಆಚರಣೆ ಮಹತ್ವ ಪಡೆದುಕೊಂಡಿದೆ.

ಅಡ್ಡಿ- ಆತಂಕದ ನಡುವೆಯೂ ಸಾಂಪ್ರದಾಯಿಕ ಆಚರಣೆ:

ಮಹಾಮಾರಿ ಕೊರೊನಾ ಎರಡನೇಯ ಅಲೆ ಗ್ರಾಮೀಣ ಭಾಗದಲ್ಲಿ ಆವರಿಸಿಕೊಂಡು ನಾನಾ ಹಬ್ಬಗಳ ಸಂಭ್ರಮಕ್ಕೆ ಅಡ್ಡಿಯಾಗಿದೆ. ಆದರೂ ಜನರು ತಮ್ಮ ತಮ್ಮ ಮನೆಗಳಲ್ಲಿ ಹಬ್ಬ ಆಚರಿಸಿ ಸಾಂಪ್ರದಾಯಿಕ ಪದ್ಧತಿಗಳಿಂದ ಹಿಂದೆ ಸರಿಯೋಲ್ಲ ಎಂಬ ಸಂದೇಶ ಸಾರಿದ್ದಾರೆ.

ಇದನ್ನೂ ಓದಿ : ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧ.. ದೇಗುಲ ಸಂಪರ್ಕಿಸುವ ಎಲ್ಲಾ ಮಾರ್ಗಗಳು ಬಂದ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.