ETV Bharat / state

ಡಂಪ್ ಯಾರ್ಡ್​ ಆಗಿ ಮಾರ್ಪಟ್ಟ ಖಾಲಿ ನಿವೇಶನಗಳು.. ಹೊಸಪೇಟೆಯಲ್ಲೀಗ ಸಾಂಕ್ರಾಮಿಕ ರೋಗಗಳ ಆತಂಕ

author img

By

Published : Oct 6, 2020, 6:31 PM IST

ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರಿಲ್ಲದ ಪರಿಣಾಮ ಜನರ ಸಮಸ್ಯೆಗಳನ್ನು ಆಲಿಸುವವರು ಸಹ ಇಲ್ಲದಂತಾಗಿದೆ. ಕಳೆದ 1 ವರ್ಷದಿಂದ ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದು, ನಗರದಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ಸಹ ತಲೆದೂರಿದೆ.

empty-space-turned-as-that-became-a-garbage-dump-yard-in-hospete
ಕಸ ಸುರಿಯುವ ಡಂಪ್ ಯಾರ್ಡ್​ ಆಗಿ ಮಾರ್ಪಟ್ಟ ಖಾಲಿ ನಿವೇಶನ

ಹೊಸಪೇಟೆ (ಬಳ್ಳಾರಿ): ನಗರದ ಖಾಲಿ‌ ನಿವೇಶನಗಳು ಇದೀಗ ತ್ಯಾಜ್ಯ ಸುರಿಯುವ ಸ್ಥಳಗಳಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರಿಗೆ ಸಮಸ್ಯೆ ತಂದೊಡ್ಡಿವೆ. ಇದಲ್ಲದೆ ಖಾಲಿ ಜಾಗಗಳು ಹಂದಿಗಳ ವಾಸಸ್ಥಳವಾಗಿ ಪರಿವರ್ತನೆಗೊಂಡಿವೆ.

ನಗರದ ಪಟೇಲನಗರ, ಅಮರಾವತಿ, ಬಳ್ಳಾರಿ ರಸ್ತೆ, ಚಿತ್ತವಾಡ್ಗಿ, ಡ್ಯಾಂ ರಸ್ತೆ, ಮೃತ್ಯುಂಜಯ ನಗರ, ನೆಹರೂ ಕಾಲೋನಿ, ಎಂ.ಪಿ ಪ್ರಕಾಶ ನಗರ, ಅರವಿಂದ ನಗರ ಸೇರಿದಂತೆ ನಗರದ ಪ್ರಮುಖ ಕಡೆ ಖಾಲಿ‌‌‌ ನಿವೇಶನಗಳಿದ್ದು, ಸ್ವಚ್ಛತೆ ಇಲ್ಲದಂತಾಗಿದೆ. ನಗರದಲ್ಲಿ ಸುಮಾರು 500 ಫ್ಲಾಟ್​​​ಗಳು ಖಾಲಿ ಇದ್ದು, ಜನರು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಡಂಪ್ ಯಾರ್ಡ್​ ಆಗಿ ಮಾರ್ಪಟ್ಟ ಖಾಲಿ ನಿವೇಶನ: ಪೌರಾಯುಕ್ತರ ಪ್ರತಿಕ್ರಿಯೆ

ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿವೆ. ಇದರಿಂದ ಕೀಟಗಳ ತಾಣವಾಗಿ ಬದಲಾಗಿದ್ದು, ಸುತ್ತಮುತ್ತಲಿನ ಜನರು ಭಯದಿಂದ ಜೀವನ ಸಾಗಿಸುವಂತಾಗಿದೆ. ಇನ್ನು ಖಾಲಿ ನಿವೇಶಗಳಲ್ಲಿ‌ ಜನರು ತ್ಯಾಜ್ಯವನ್ನು ತಂದು‌ ಸುರಿಯುತ್ತಿದ್ದಾರೆ. ಇದರಿಂದ ಖಾಲಿ ನಿವೇಶನಗಳು ಡಂಪ್ ಯಾರ್ಡ್​​​ಗಳಾಗಿ ಮಾರ್ಪಟ್ಟಿವೆ. ತ್ಯಾಜ್ಯವೆಲ್ಲ ಖಾಲಿ ನಿವೇಶನದಲ್ಲಿ ಶೇಖರಣೆ ಆಗುತ್ತಿರುವುದರಿಂದ ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ಹಂದಿಗಳ‌‌ ಕಾಟ: ಇದರ ಜತೆಗೆ ಖಾಲಿ ನಿವೇಶನದಲ್ಲಿರುವ ತ್ಯಾಜ್ಯದಲ್ಲಿ ಹಂದಿಗಳು ಬಂದು ಕುಳಿತುಕೊಳ್ಳುವುದಲ್ಲದೆ ಇಲ್ಲಿಯೇ ಬಿಡಾರ ಹೂಡುತ್ತಿವೆ. ಇದರಿಂದ ನರಕಯಾತನೆ ಅನುಭವಿಸಿದ್ದಾರೆ. ಮೊದಲೇ ಕೊರೊನಾ ಸಂಕಷ್ಟ ಕಾಲದಲ್ಲಿ ಹಂದಿ ಜ್ವರ ಬಂದರೆ ಏನು ಮಾಡಬೇಕು ಎನ್ನುವುದು ಸ್ಥಳೀಯ ನಿವಾಸಿಗಳ ಚಿಂತೆಯಾಗಿದೆ.

ನಗರಸಭೆಗಿಲ್ಲ ಕಾಳಜಿ: ನಗರಸಭೆ ತನ್ನ ಆಡಳಿತವೈಖರಿ ಮರೆತು ಕುಳಿತಿದೆ ಎನ್ನುವ ಆರೋಪ ಕೇಳಿ ಬಂದಿದೆ. ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರಿಲ್ಲದ ಪರಿಣಾಮ ಜನರ ಸಮಸ್ಯೆಗಳನ್ನು ಆಲಿಸುವವರು ಇಲ್ಲದಂತಾಗಿದೆ. ಕಳೆದ 1 ವರ್ಷದಿಂದ ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದು, ನಗರದಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ಸಹ ತಲೆದೂರಿದೆ. ಇದರ ಜತೆಗೆ ಪ್ರಮುಖವಾಗಿ ಖಾಲಿ ನಿವೇಶನಗಳಲ್ಲಿರುವ‌ ತ್ಯಾಜ್ಯದಿಂದ ಜನರಿಗೆ ತೊಂದರೆಯಾಗುತ್ತಿದೆ.

ಖಾಲಿ ನಿವೇಶನಗಳ ಬಿ-ಫಾರಂ ನೀಡುವ ನಗರಸಭೆ ಅಧಿಕಾರಿಗಳು ಖಾಲಿ ನಿವೇಶನಗಳ ಸ್ವಚ್ಛತೆಗೆ ಆದ್ಯತೆ ನೀಡುವುದಿಲ್ಲ. ಸ್ವಚ್ಛತೆಯಿದ್ದರೇ ಮಾತ್ರ ಬಿ-ಫಾರಂ ನೀಡುತ್ತೇವೆ ಎನ್ನಬೇಕು. ಆದರೆ ಕಠಿಣ ನಿರ್ಧಾರವನ್ನು ಅಧಿಕಾರಿಗಳು ತೆಗೆದುಕೊಳ್ಳದೇ ಇರುವುದರಿಂದ ಸಮಸ್ಯೆಯಾಗಿದೆ ಎನ್ನುತ್ತಾರೆ ಜನ.

ನಿವೇಶನದಾರಿಗೆ ದಂಡದ ಬಿಸಿ: ನಗರಸಭೆ ಅಧಿಕಾರಿಗಳು ನಿವೇಶನದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದ್ದಾರೆ.‌ ನಿವೇಶನ ಸ್ವಚ್ಛತೆಗೆ ತಗಲುವ ವೆಚ್ಚವನ್ನು ದಂಡದ ರೂಪದಲ್ಲಿ ವಸೂಲಿ ಮಾಡಲು ನಗರಸಭೆ ತೀಮಾರ್ನಿಸಿದೆ.‌ ಈ ದಂಡ ವಸೂಲಿ ಯೋಜನೆ ಕಾರ್ಯರೂಪಕ್ಕೆ ಬರಬೇಕಾಗಿದೆ.

ನಗರಸಭೆ ಪೌರಾಯುಕ್ತೆ ಜಯಲಕ್ಷ್ಮಿ ಮಾತನಾಡಿ, ನಗರದಲ್ಲಿ ಖಾಲಿ ನಿವೇಶನಗಳಿಂದ ಸ್ವಚ್ಛತೆ ಇಲ್ಲದಂತಾಗಿದೆ.‌ ಜನರು‌‌‌ ಖಾಲಿ ನಿವೇಶನಗಳಲ್ಲಿ ತ್ಯಾಜ್ಯವನ್ನು ಸುರಿಯಬಾರದು. ಸ್ವಚ್ಛತೆಯನ್ನು ಕಾಪಾಡಬೇಕು. ಅಲ್ಲದೇ ನಿವೇಶನ ಮಾಲೀಕರಿಂದ ಸ್ವಚ್ಛತೆಗೆ ತಗುಲುವ ವೆಚ್ಚವನ್ನು ದಂಡದ ರೂಪದಲ್ಲಿ ಪಡೆಯಲಾಗುವುದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.