ETV Bharat / state

20 ಸಾವಿರ ಹಣ ಇಟ್ಟಿದ್ದೇನೆ, ಅದನ್ನು ಬಳಸಿ ಅಂತ್ಯಕ್ರಿಯೆ ಮಾಡಿ: ಡೆತ್​​ ನೋಟ್ ಬಹಿರಂಗ

author img

By

Published : Oct 23, 2021, 6:54 PM IST

Updated : Oct 23, 2021, 7:02 PM IST

ಬೋರಗಲ್ ಗ್ರಾಮದಲ್ಲಿ ಒಂದೇ ಕುಟುಂಬದ ಐವರ ಸಾವು ಪ್ರಕರಣದ ಡೆತ್​ ನೋಟ್ ಲಭ್ಯವಾಗಿದ್ದು, ಅದರಲ್ಲಿ ಮೃತ ನಿವೃತ್ತ ಯೋಧ ಪತ್ರದ ಜೊತೆಗೆ 20 ಸಾವಿರ ಹಣವನ್ನು ಇಟ್ಟಿದ್ದು, ಅದನ್ನು ಬಳಸಿಕೊಂಡು ನಮ್ಮ ಅಂತ್ಯಕ್ರಿಯೆ ಮಾಡಿ ಎಂದು ಬರೆದಿದ್ದಾರೆ.

updates
ಮೃತ ವ್ಯಕ್ತಿಯ ಡೆತ್​​ ನೋಟ್

ಬೆಳಗಾವಿ: ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದಲ್ಲಿ ಒಂದೇ ಕುಟುಂಬದ ಐವರ ಸಾವು ಪ್ರಕರಣದ ಡೆತ್ ನೋಟ್ ಲಭ್ಯವಾಗಿದ್ದು, ನಮ್ಮ ಸಾವಿಗೆ ನಾವೇ ಕಾರಣ ಬೇರೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾರೆ.

ಸಂಕೇಶ್ವರ ಪಟ್ಟಣದ ಪೊಲೀಸರು ಪ್ರಾಥಮಿಕ ತನಿಖೆ ನಡೆಸುವ ವೇಳೆ ಡೆತ್ ನೋಟ್ ಪತ್ತೆಯಾಗಿದ್ದು, ನಮ್ಮ ಸಾವಿಗೆ ನಾವೇ ಕಾರಣ, ಪತ್ರದ ಜೊತೆಗೆ 20 ಸಾವಿರ ಹಣವನ್ನು ಇಟ್ಟಿದ್ದೇನೆ. ಅದನ್ನು ಬಳಸಿಕೊಂಡು ನಮ್ಮ ಅಂತ್ಯಕ್ರಿಯೆ ಮಾಡಬೇಕು. ನನ್ನ ಅಂತ್ಯಕ್ರಿಯೆ ಮಾಡಿದವರಿಗೆ ಧನ್ಯವಾದಗಳು ಎಂದು ಡೆತ್ ನೋಟ್ ಬರೆದಿಟ್ಟು ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಹುಕ್ಕೇರಿಯಲ್ಲಿ ಬ್ಲ್ಯಾಕ್ ಫಂಗಸ್​ಗೆ ಪತ್ನಿ ಬಲಿ.. ಮನನೊಂದ ವ್ಯಕ್ತಿ ನಾಲ್ವರು ಮಕ್ಕಳೊಂದಿಗೆ ಆತ್ಮಹತ್ಯೆ

Last Updated : Oct 23, 2021, 7:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.