ETV Bharat / state

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಅಭಿಮಾನಿಗಳ ಪ್ರತಿಭಟನೆ

author img

By

Published : Mar 4, 2021, 6:07 PM IST

ರಮೇಶ್​ ಜಾರಕಿಹೊಳಿ ವಿಡಿಯೋ ನಕಲಿ ಎಂದು ಆರೋಪಿಸಿ ಅವರ ಅಭಿಮಾನಿ ಬಳಗದ ಹೋರಾಟ ಮುಂದುವರೆದಿದ್ದು, ಮೂಡಲಗಿ ತಾಲೂಕಿನಲ್ಲಿ ಅಭಿಮಾನಿಗಳು ಟೈರ್​​​ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಪ್ರಕರಣವನ್ನು ಸಿಬಿಐ ಅಥವಾ ಸಿಐಡಿಗೆ ವಹಿಸುವಂತೆ ಮನವಿ ಸಲ್ಲಿಸಿದ್ದಾರೆ.

Jarakiholi fans protest
ಜಾರಕಿಹೊಳಿ ಅಭಿಮಾನಿಗಳ ಪ್ರತಿಭಟನೆ

ಚಿಕ್ಕೋಡಿ (ಬೆಳಗಾವಿ): ರಮೇಶ್​​ ಜಾರಕಿಹೊಳಿ ಸಿಡಿ ಪ್ರಕರಣ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕು ಜಾರಕಿಹೊಳಿ ಅಭಿಮಾನಿ ಬಳಗದಿಂದ ಪಟ್ಟಣದ ಕಲ್ಮೇಶ್ವರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ನಕಲಿ ವಿಡಿಯೋ ಹರಿಬಿಟ್ಟಿದ್ದು, ಇದು ಜಾರಕಿಹೊಳಿ ಕುಟುಂಬದ ವಿರುದ್ಧ ಮಾಡಿರುವ ರಾಜಕೀಯ ವಿರೋಧಿಗಳ ಹುನ್ನಾರ-ಷಡ್ಯಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಡಿ ಬಗ್ಗೆ ಸಮಗ್ರ ತನಿಖೆ ನಡೆಸಲು ಪ್ರಕರಣವನ್ನು ಸಿಬಿಐ ಅಥವಾ ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಮೂಡಲಗಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಜಾರಕಿಹೊಳಿ ಅಭಿಮಾನಿಗಳ ಪ್ರತಿಭಟನೆ

ರಮೇಶ್ ಜಾರಕಿಹೊಳಿಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಎರಡು ಸ್ಥಾನವನ್ನು ಬಾಲಚಂದ್ರ ಜಾರಕಿಹೊಳಿಯವರಿಗೆ ನೀಡಿ ಜಾರಕಿಹೊಳಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ‌ ಯಾರ ಮಾತೂ ಕೇಳುವ ಸ್ಟೇಜ್‌ನಲ್ಲಿಲ್ಲ: ಸಹೋದರ ಸತೀಶ್​​ ಜಾರಕಿಹೊಳಿ‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.