ETV Bharat / state

ಹಿಂದೂ ಧರ್ಮದ ಬಗ್ಗೆ ಮಾತನಾಡಲು ಬಹಿರಂಗ ಚರ್ಚೆಗೆ ಬನ್ನಿ: ಚಕ್ರವರ್ತಿ ಸೂಲಿಬೆಲೆ ಸವಾಲು

author img

By

Published : Nov 17, 2022, 7:58 AM IST

'ನನ್ನ ಜಾತಿಯ ಬಗ್ಗೆ ಮಾತನಾಡಿದರೆ ಸುಮ್ಮನಿರುತ್ತೇನೆ. ನನ್ನನ್ನು ವೈಯಕ್ತಿಕವಾಗಿ ಬೈದರೆ ಸುಮ್ಮನಿರುತ್ತೇನೆ. ಆದರೆ ನನ್ನ ತಾಯಿ ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ಸುಮ್ಮನಿರುವುದಿಲ್ಲ'- ಚಕ್ರವರ್ತಿ ಸೂಲಿಬೆಲೆ

Hindu Orator Chakraborty Ransom
ಹಿಂದೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ

ಅಥಣಿ: ಹಿಂದೂ ಧರ್ಮದ ಬಗ್ಗೆ ವಿವಾದಿತ ಹೇಳಿಕೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು, ಬಹಿರಂಗವಾಗಿ ಚರ್ಚೆಗೆ ಬರುವಂತೆ ಹಿಂದೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸವಾಲು ಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ಯಮಕರಮಡಿ ಗ್ರಾಮದಲ್ಲಿ 'ನಾನು ಹಿಂದೂ' ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ

ನನ್ನ ಜಾತಿಯ ಬಗ್ಗೆ ಮಾತನಾಡಿದರೆ ಸುಮ್ಮನಿರುತ್ತೇನೆ. ನನ್ನನ್ನು ವೈಯಕ್ತಿಕವಾಗಿ ಬೈದರೂ ಸುಮ್ಮನಿರುವೆ. ಆದರೆ ನನ್ನ ತಾಯಿ ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ಸುಮ್ಮನೆ ಬಿಡುವುದಿಲ್ಲ. ಹಿಂದೂ ಧರ್ಮದ ಬಗ್ಗೆ ಮಾತನಾಡುವುದಕ್ಕಾಗಿ ನಾನು ಬಹಿರಂಗವಾಗಿ ಚರ್ಚೆಗೆ ಕರೆಯುತ್ತೇನೆ, ಬನ್ನಿ ಸಾಹುಕಾರೇ. ಯಾವಾಗ ಹೇಳುತ್ತೀರಿ ಆವಾಗ ನಾನು ಬರುತ್ತೇನೆ ಎಂದು ಸೂಲಿಬೆಲೆ ಹೇಳಿದರು. ಬೂಟ್ ಪಾಲಿಶ್ ಮಾಡಿ ಬದುಕಬೇಕು, ಬೂಟ್ ನೆಕ್ಕಿ ಜೀವನ ಮಾಡಬಾರದು ಎಂದು ಇದೇ ವೇಳೆ ಖಾರವಾಗಿ ನುಡಿದರು.

ಮತದಾನ ಸಮಯದಲ್ಲಿ ಹಿಂದೂ ಪದ ಅಶ್ಲೀಲ ಎಂದು ಹೇಳಿರುವುದು, ಲವ್ ಜಿಹಾದ್ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡು ಮತದಾನ ಮಾಡುವಂತೆ ಯಮಕರಮಡಿ ಮತಕ್ಷೇತ್ರ ಜನರಿಗೆ ಚಕ್ರವರ್ತಿ ಸೂಲಿಬೆಲೆ ಇದೇ ವೇಳೆ ಕರೆ ಕೊಟ್ಟರು.

ಇದನ್ನೂ ಓದಿ: ಕಾಂಗ್ರೆಸ್​ ಪಕ್ಷಕ್ಕೆ ಹಾನಿ ತಡೆಯಲು ನನ್ನ ಹೇಳಿಕೆ ವಾಪಸ್ ಪಡೆದಿದ್ದೇನೆ‌: ಸತೀಶ್ ಜಾರಕಿಹೊಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.