ETV Bharat / state

ಐನಾಪುರ ಕೃಷಿ ಮೇಳ: ಸಕ್ರಿಯವಾಗಿ ಪಾಲ್ಗೊಂಡ ಮಾಹಿತಿ ಪಡೆದ ರೈತರು

author img

By

Published : Jan 18, 2023, 6:30 PM IST

ಬೆಳಗಾವಿ ಜಿಲ್ಲೆಯ ಐನಾಪುರ ಕೃಷಿ ಮೇಳ - ಸಿದ್ದೇಶ್ವರ ಜಾತ್ರೆ ನಿಮಿತ್ತ ರಾಜು ಕಾಗೆ ಅಭಿಮಾನಿಗ ಬಳಗದಿಂದ 30ನೇ ಕೃಷಿ ಮೇಳ ಆಯೋಜನೆ.

Ainapur Agricultural Fair in chikkodi
ಐನಾಪುರ ಕೃಷಿ ಮೇಳ: ಸಕ್ರಿಯವಾಗಿ ಪಾಲ್ಗೋಂಡು ಮಾಹಿತಿ ಪಡೆದ ರೈತರು

ಯುವ ರೈತ ಲಕ್ಷ್ಮಣ್ ಕೋಳಿ

ಚಿಕ್ಕೋಡಿ: ಉತ್ತರ ಕರ್ನಾಟಕ ಭಾಗದಲ್ಲಿ ಧಾರವಾಡ ಕೃಷಿ ಮೇಳ ಬಿಟ್ಟರೆ, ಬೆಳಗಾವಿ ಜಿಲ್ಲೆಯ ಐನಾಪುರ ಕೃಷಿ ಮೇಳದಲ್ಲಿ ಹೆಸರು ವಾಸಿಯಾಗಿದೆ. ಈ ಬಾರಿ ಸಿದ್ದೇಶ್ವರ ಜಾತ್ರೆ ನಿಮಿತ್ತ ರಾಜು ಕಾಗೆ ಅಭಿಮಾನಿಗ ಬಳಗದಿಂದ 30ನೇ ಕೃಷಿ ಮೇಳ ಆಯೋಸಿದ ಹಿನ್ನೆಲೆ ಬಾರಿ ಸಂಖ್ಯೆಯಲ್ಲಿ ರೈತರು ಕೃಷಿ ಮೇಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ರೈತರ ಹಬ್ಬ ಎಂದು ಕರೆಯಲಪಡುವ ಕೃಷಿ ಮೇಳವನ್ನು ಈ ಬಾರಿ ಐನಾಪುರ ಸಿದ್ದೇಶ್ವರ ಜಾತ್ರೆ ನಿಮಿತ್ತವಾಗಿ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

ಕಳೆದ ಮೂರು ವರ್ಷಗಳಿಂದ ಕೊರೊನಾ ಸೊಂಕು ಉಲ್ಬಣ ಮುನ್ನೆಚ್ಚರಿಕೆ ಕ್ರಮವಾಗಿ ಕೃಷಿ ಮೇಳ ಆಯೋಜನೆ ಮಾಡದಿರುವುದರಿಂದ ಈ ವರ್ಷ ಕೃಷಿ ಮೇಳ ಸಂಭ್ರಮದಿಂದ ಕಳೆದ ಮೂರು ದಿನದಿಂದ ಜರುಗುತ್ತಿದೆ.

ಬಗೆ ಬಗೆಯ ಹಣ್ಣುಗಳ ಬಗ್ಗೆ ರೈತರಿಗೆ ಮಾಹಿತಿ: ವಿವಿಧ ಬಗೆಯ ಹೊಸ ತಳಿಗಳು ತರಕಾರಿಗಳನ್ನು ಸ್ಥಳೀಯ ರೈತರಿಗೆ ಪರಿಚಯಿಸಲಾಗುತ್ತಿದೆ. ಬಗೆ ಬಗೆಯ ಹಣ್ಣುಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿ ಆ ಬಗ್ಗೆ ರೈತರು ಕೂಡ ಹಣ್ಣಿನ ಗಿಡಗಳ ಬಗ್ಗೆ ಒಲವು ಮೂಡಿಸೋ ಕೆಲಸವನ್ನು ಮಾಡಲಾಗುತ್ತಿದೆ. ರೈತಾಪಿ ಜನರ ಕೃಷಿ ಚಟುವಟಿಕೆಗಳು, ರೈತರ ಉತ್ಪಾದನೆಗಳು, ಕೃಷಿಕರರ ಕಾರ್ಯಸಾಧನೆ ಬಗ್ಗೆ ತಿಳಿದುಕೊಳ್ಳಲು ಇದು ಮಹತ್ವದ ವೇದಿಕೆಯಾಗಿದೆ. ಇದೇ ಕಾರಣಕ್ಕೆ ರೈತ ಕುಟುಂಬಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರ ದಂಡು ಕೃಷಿ ಮೇಳದತ್ತ ಹರಿದು ಬರುತ್ತಿದೆ.

ಕೃಷಿ ತಂತ್ರಜ್ಣಾನ ಹಾಗೂ ವಿಜ್ಞಾನದ ಬಗ್ಗೆ ತಜ್ಞರಿಂದ ಮಾಹಿತಿ:ಕೃಷಿ ಮೇಳ ಆಯೋಜನೆ ಮಾಡಿರುವುದು ನಮಗೆ ಖುಷಿ ಆಗಿದೆ, ಹೈಟೆಕ್ ಸ್ಟಾಲ್​ಗಳ ಪ್ರದರ್ಶನ ಕೊಟ್ಟಿದ್ದೇವೆ, ಬಂದಿರೋ ರೈತರು ಇದನ್ನು ನೋಡಿ ಖುಷಿ ಪಡುತ್ತಿದ್ದರು. ರೈತರು ಈ ಕೃಷಿ ಮೇಳದಲ್ಲಿ ಕೇವಲ ವಸ್ತು ಪ್ರದರ್ಶನ ನೋಡಿದಲ್ಲದೇ, ಮಳಿಗಗಳಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿ ಪಡೆಯುತ್ತಿದ್ದಾರೆ. ಇಲ್ಲಿ ಕೃಷಿ ತಂತ್ರಜ್ಣಾನ ಹಾಗೂ ವಿಜ್ಞಾನದ ಬಗ್ಗೆ ತಜ್ಞರಿಂದ ಮಾಹಿತಿ ನೀಡಲಾಗುತ್ತಿದೆ. ಯಾವೆಲ್ಲಾ ಕೀಟಗಳು ಯಾವೆಲ್ಲ ಬೆಳೆಗಳ ಮೇಲೆ ಏನೆಲ್ಲಾ ಹಾನಿಯಾಗುತ್ತೆ. ಅದನ್ನ ಹೇಗೆಲ್ಲಾ ನಿಯಂತ್ರಿಸಬೇಕು ಅನ್ನೋದರ ಬಗ್ಗೆ ರೈತರಿಗೆ ವಿಜ್ಞಾನಿಗಳಿಂದ ತಿಳಿಸಲಾಗುತ್ತಿದೆ.

ಗಮನ ಸೆಳೆದ ಶ್ವಾನ ಪ್ರದರ್ಶನ:ಕೃಷಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಾಹನಗಳು, ಉಪಕರಣಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಸ್ಟಾರ್ಟ್ ಅಪ್ ಕಂಪನಿಗಳು ಕೂಡ ಈ ಕೃಷಿ ಮೇಳದಲ್ಲಿ ಭಾಗವಹಿಸಿದ್ದವು. ಬೃಹತ ಕೃಷಿ ಮೇಳದಲ್ಲಿ ಆಯೋಜಿಸಿದ ಶ್ವಾನ ಪ್ರದರ್ಶನ ಗಮನ ಸೆಳೆಯಿತು. ರ‍್ಯಾಟವ್ಹಿಲ್ಲರ, ಪಿಗ್ , ಲೋಬರೋಡರ ಜರ್ಮನ ಶಾಪರ್ಡ, ಗ್ರೇಟ್ ಡ್ವಾನಿ, ಲಂಬೋದರ, ಪುಗ್ ಹೌಂಡ್ಸ್​​, ಪಿರಬುಲಬಿಗ್ಲ, ಬ್ಲಾಕಮೀಸಿಪ ಸೇರಿದಂತೆ 65ಕ್ಕೊ ಹೆಚ್ಚು ವಿವಿದ ತಳಿಯ ಶ್ವಾನ ತಳಿಗಳು ಪ್ರದರ್ಶನದಲ್ಲಿ ಭಾಗವಹಿಸಿದವು. ವಿಜಯಪೂರ, ಮಹಾರಾಷ್ಟ್ರದ ಸಾಂಗಲಿ, ಇಂಚಲಕಂಜಿ, ಜಯಸಿಂಗಪೂರದ ಶ್ವಾನಗಳು ಭಾಗವಹಿಸಿದ್ದವು.

ರೈತಾಪಿ ಜನರಿಗಾಗಿಯೇ ಆಯೋಜಿಸಲಾಗಿರೊ ಕೃಷಿ ಮೇಳದ ಲಾಭವನ್ನ ಸ್ಥಳೀಯ ರೈತರು ಪಡೆದುಕೊಳ್ಳುತ್ತಿದ್ದಾರೆ. ದೂರದ ಧಾರವಾಡ ಕೃಷಿ ಮೇಳದ ಬಿಟ್ಟರೆ ಐನಾಪುರ ಕೃಷಿ ಮೇಳ ರೈತರನ್ನು ಕೈಬಿಸಿ ಕರಿಯುತ್ತಿದೆ. ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿ ಇದೊಂದು ಉತ್ತಮ ಕೃಷಿ ಮೇಳ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಸಿದ್ಧೇಶ್ವರ ಜಾತ್ರಾ ಮಹೋತ್ಸವ: ಭಂಡಾರ ಎರಚಿ ಭಕ್ತರ ಸಂಭ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.