ETV Bharat / state

ಎಸಿಬಿ ದಾಳಿ : ಕೆಜಿಗಟ್ಟಲೆ ಬಂಗಾರ, ಕೋಟ್ಯಂತರ ಮೌಲ್ಯದ ಆಸ್ತಿ ಪತ್ರ ಕಂಡು ಬೆರಗಾದ ಎಸಿಬಿ ಅಧಿಕಾರಿಗಳು

author img

By

Published : Jun 17, 2022, 7:15 PM IST

ಬೆಳಗಾವಿ ಅಧೀಕ್ಷಕ ಬಿ. ವೈ ಪವಾರ್ ಮನೆ ಮೇಲೆ ಎಸಿಬಿ ದಾಳಿ ವೇಳೆ ಅಧಿಕಾರಿಗಳು ಮನೆಯಲ್ಲಿದ್ದ 300 ಗ್ರಾಂ ಹಾಗೂ ಲಾಕರ್‌ಗಳಲ್ಲಿದ್ದ 600 ಗ್ರಾಂಗಿಂತ ಅಧಿಕ ಚಿನ್ನಾಭರಣ ಜಪ್ತಿ ಮಾಡಿದ್ದಾರೆ..

ಬೆಳಗಾವಿ ಅಧೀಕ್ಷಕ ಬಿ. ವೈ ಪವಾರ್
ಬೆಳಗಾವಿ ಅಧೀಕ್ಷಕ ಬಿ. ವೈ ಪವಾರ್

ಬೆಳಗಾವಿ : ಲೋಕೋಪಯೋಗಿ ಇಲಾಖೆಯ ಬೆಳಗಾವಿ ಅಧೀಕ್ಷಕ ಬಿ. ವೈ ಪವಾರ್ ಮನೆ ಮೇಲೆ ಎಸಿಬಿ ದಾಳಿ ವೇಳೆ ಅಧಿಕಾರಿಗಳು ಕೋಟ್ಯಂತರ ಮೌಲ್ಯದ ಆಸ್ತಿ ಪತ್ರ, ಕೆಜಿಗಟ್ಟಲೆ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಜಕ್ಕೇರಿಹೊಂಡದ ಮನೆಯಲ್ಲಿ 300 ಗ್ರಾಂ ಹಾಗೂ ಲಾಕರ್‌ಗಳಲ್ಲಿದ್ದ 600 ಗ್ರಾಂಗಿಂತ ಅಧಿಕ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಅರ್ಧಕೋಟಿ ಮೌಲ್ಯದ ‌ಚಿನ್ನ ಹಾಗೂ ಕೋಟ್ಯಂತರ ಮೌಲ್ಯದ ಆಸ್ತಿ ಪತ್ರಗಳನ್ನು ಕಂಡು ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ಮಕ್ಕಳ ಹೆಸರಲ್ಲಿ ಏಳು ಎಕರೆ ಜಮೀನು ಖರೀದಿ ಮಾಡಲಾಗಿದೆ. ನಿಪ್ಪಾಣಿ ‌ತಾಲೂಕಿನ ಬೋರಗಾಂವ್ ಗ್ರಾಮದಲ್ಲಿ ಪುತ್ರನ ಹೆಸರಲ್ಲಿ ಜವಳಿ ಕಾರ್ಖಾನೆ ನಿರ್ಮಾಣಕ್ಕೆ ಲಕ್ಷಾಂತರ ಮೌಲ್ಯದ ಹಣ ವ್ಯಯಿಸಿದ್ದಾರೆ.

ನಿಪ್ಪಾಣಿಯಲ್ಲಿ ಹೆಂಡತಿ ಹೆಸರಲ್ಲಿ ಎರಡು ಅಂತಸ್ತಿನ ಮನೆ ನಿರ್ಮಿಸಿದ್ದಾರೆ. ಬೆಳಗಾವಿಯಲ್ಲಿ ತಮ್ಮ ಹೆಸರಿನಲ್ಲಿ ಎರಡೂವರೆ ಕೋಟಿ ಮೌಲ್ಯದ ಮನೆ ಹೊಂದಿದ್ದಾರೆ. ಬಿ.ವಿ ಪವಾರ್ ಮೂರು ಕಾರು, ಮೂರು ಬೈಕ್ ಹೊಂದಿದ್ದಾರೆ. ನಾಳೆಯೂ ಎಸಿಬಿ ಅಧಿಕಾರಿಗಳು ಪರಿಶೀಲನೆ ಮುಂದುವರೆಸುವ ಸಾಧ್ಯತೆ ಇದೆ.

ಓದಿ: ರಾಜ್ಯದಲ್ಲಿ ಗಲಭೆಯಾಗದಂತೆ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ : ಸಿಎಂ ಬೊಮ್ಮಾಯಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.