ETV Bharat / state

ಹೊಲ ಸಾಲ ಹಾಗೂ ಮಡ್ಡಿ ಜನಗಳ ಮಧ್ಯೆ ವಿಡಿಯೋ ವಾರ್:  ಸಖತ್ ವೈರಲ್

author img

By

Published : Aug 21, 2019, 11:21 AM IST

Updated : Aug 21, 2019, 12:53 PM IST

ವೈರಲ್ ವೀಡಿಯೋ

ಉತ್ತರ ಕರ್ನಾಟಕ ಭಾಗದಲ್ಲಿ ನೆಲೆಸಿರುವ ಹೊಲ ಸಾಲ ಮತ್ತು ಮಡ್ಡಿ ಸಮುದಾಯಗಳ ಜನರ ಮಧ್ಯೆ ತಮ್ಮ ತಮ್ಮ ಜೀವನ ಶೈಲಿಗೆ ಸಂಬಂಧಪಟ್ಟಂತೆ ಪರಸ್ಪರ ವಿಡಿಯೋ ಸಮರವೊಂದು ಏರ್ಪಟ್ಟಿದ್ದು, ಎರಡು ಸಮುದಾಯಗಳ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿರುವ ವಿಡಿಯೋಗಳು ಸಖತ್ ವೈರಲ್ ಆಗಿವೆ.

ಚಿಕ್ಕೋಡಿ : ಹೊಲ ಸಾಲ ಹಾಗೂ ಮಡ್ಡಿ ಸಮುದಾಯದ ಜನರ ನಡುವೆ ಜೀವನ ಶೈಲಿಯ ಬಗ್ಗೆ ವಿಡಿಯೋ ವಾರ್ ಶುರುವಾಗಿದ್ದು, ಎರಡೂ ಸಮುದಾಯದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಉತ್ತರ ಕರ್ನಾಟಕ ಭಾಗದಲ್ಲಿ ಹೊಲಸಾಲ ಅಂದರೆ, ನದಿ ತೀರದಲ್ಲಿ ವಾಸಿಸುವ ಸಮುದಾಯ, ಮಡ್ಡಿ ಅಂದರೆ ನದಿ ತೀರದಿಂದ ದೂರದಲ್ಲಿ ವಾಸಿಸುವ ಸಮುದಾಯ. ಇದೀಗ ಇವೆರಡು ಸಮುದಾಯಗಳ ಮಧ್ಯೆ ತಮ್ಮ ತಮ್ಮ ಜೀವನ ಶೈಲಿಗೆ ಸಂಬಂಧಪಟ್ಟಂತೆ ವಿಡಿಯೋ ಸಮರ ಪ್ರಾರಂಭಗೊಂಡಿದ್ದು, ಎರಡು ಸಮುದಾಯದ ಜನರು ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಣಗಳಲ್ಲಿ ಹರಿದಾಡುತ್ತಿದೆ.

ವೈರಲ್ ವೀಡಿಯೋ

ಹೇಗೆ ಪ್ರಾರಂಭವಾಯಿತು ವಿಡಿಯೋ ವಾರ್?

ಕಳೆದ ಕೆಲ ದಿನಗಳ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಕೃಷ್ಣಾ ನದಿ ಉಕ್ಕಿ ಬಂದು ನದಿ ತೀರದ ಜನರು ಪ್ರವಾಹಕ್ಕೆ ತುತ್ತಾಗಿ ಅಪಾರ ಹಾನಿಗೊಳಗಾಗಿದ್ದಾರೆ. ಇದರಿಂದ ನದಿ ತೀರದಲ್ಲಿ ವಾಸಿಸುತ್ತಿರುವ ಹೊಲ ಸಾಲ ಸಮುದಾಯದ ಜನರು ನಮ್ಮ ಮಡ್ಡಿ ಭಾಗದಲ್ಲಿ ಆಸರೆ ಪಡೆಯುತ್ತಿದ್ದೀರಿ ಎಂದು ಹೇಳುವ ವಿಡಿಯೋ ಒಂದನ್ನು ಮಾಡಿ ಮಡ್ಡಿ ಸಮುದಾಯದವರು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

ಇದಕ್ಕೆ ಪ್ರತ್ಯುತ್ತರವಾಗಿ ಹೊಲಸಾಲ ಜನರು, ಒಂದು ತಿಂಗಳು ಮಾತ್ರ ನಮಗೆ ಸಮಸ್ಯೆ ಎದುರಾಗುತ್ತದೆ. ನಮಗೆ ಯಾರ ಅವಶ್ಯಕತೆ ಇಲ್ಲ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.

ಒಟ್ಟಿನಲ್ಲಿ ಎರಡು ಸಮುದಾಯಗಳ ಮಧ್ಯೆ ಒಂದು ರೀತಿಯ ವಿಡಿಯೋ ಸಮರ ಏರ್ಪಟ್ಟಿದ್ದು, ಎರಡೂ ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ ವೈರಲ್ ಆಗಿವೆ.

Intro:ಹೊಲಸಾಲ ಹಾಗೂ ಮಡ್ಡಿ ಜನಗಳ ಮಧ್ಯ ಸಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳ ವಾರ್
Body:
ಚಿಕ್ಕೋಡಿ :

ಹೊಲಸಾಲ ಜನ ಹಾಗೂ ಮಡ್ಡಿ ಜನಗಳ ಮಧ್ಯ ತಾವು ಇರುವ ಜೀವನ ಶೈಲಿಗಳ ಬಗ್ಗೆ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ವೈರಲ್ ಆಗತ್ತಿವೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿಯ ಪ್ರವಾಹ ಬಂದು ಅತುವೃಷ್ಠಿಯಾಗಿದ್ದು ನದಿ ತೀರದ ಜನರು ಪ್ರವಾಹಕ್ಕೆ ಒಳಗಾಗಿ ಅಪಾರ ಹಾನಿಗೊಳಗಾಗಿದ್ದಾರೆ. ಇದರಿಂದ ಮಡ್ಡಿ ಜನರು ನಮ್ಮ ಮಡ್ಡಿ ಭಾಗದ ಆಸರೆ ಪಡೆಯುತ್ತಿದ್ದಿರಿ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾರೆ.

ಇದಕ್ಕೆ ಪ್ರತೂತ್ತರವಾಗಿ ಹೊಲಸಾಲ ಜನರು ಕೂಡಾ ನಮ್ಮಗೆ ಒಂದೇ ತಿಂಗಳು ಬರುತ್ತದೆ ನಮ್ಮಗೆ ಯಾರ ಅವಶ್ಯಕತೆ ಇಲ್ಲ ಎಂದು ಅವರು ಕೂಡಾ ವಿಡಿಯೋ ಮಾಡಿ ಸಾಮಾಜಿಕ ಜಾಲಲತಾಣದಲ್ಲಿ ಹರಿ ಬಿಡುತ್ತಿದ್ದಾರೆ.

ಈಗ ಒಟ್ಟಿನಲ್ಲಿ ಹೊಲಸಾಲ ಹಾಗೂ ಮಡ್ಡಿ ಜನರ ವಿಡಿಯೋಗಳು ಸಾಮಜಿಕ ಜಾಲಲತಾಣಗಳಲ್ಲಿ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ.

ವಿಡಿಯೋ 1 : ಹೊಲಸಾಲ ಜನರ ವಿಡಿಯೋ

ವಿಡಿಯೋ 2 : ಮಡ್ಡಿ ಜನರ ವಿಡಿಯೋ

Conclusion:ಸಂಜಯ ಕೌಲಗಿ
ಚಿಕ್ಕೋಡಿ
Last Updated :Aug 21, 2019, 12:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.