ETV Bharat / state

ಕೊನೆಗೂ ಸಿಂದಗಿಯತ್ತ ತೆರಳಿದ ಜಮೀರ್ ಅಹಮದ್: ಇಂದಿನಿಂದ ಪ್ರಚಾರ ಕಾರ್ಯದಲ್ಲಿ ಭಾಗಿ

author img

By

Published : Oct 23, 2021, 6:01 PM IST

ಆರೇಳು ದಿನಗಳಿಂದ ತಣ್ಣಗಾಗಿದ್ದ ಜಮೀರ್ ಇದುವರೆಗೂ ಸಿಂದಗಿ, ಹಾನಗಲ್ ಪ್ರಚಾರದಲ್ಲಿ ಭಾಗಿಯಾಗಿರಲಿಲ್ಲ. ಮುಸ್ಲಿಂ ಸಮುದಾಯದ ಮತಗಳೇ ನಿರ್ಣಾಯಕ. ಆದರೂ ಎರಡು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿರಲಿಲ್ಲ.

ಕೊನೆಗೂ ಸಿಂದಗಿಯತ್ತ ತೆರಳಿದ ಜಮೀರ್ ಅಹಮದ್
ಕೊನೆಗೂ ಸಿಂದಗಿಯತ್ತ ತೆರಳಿದ ಜಮೀರ್ ಅಹಮದ್

ಬೆಂಗಳೂರು: ಕಳೆದ ಕೆಲ ದಿನಗಳಿಂದ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದ ಮಾಜಿ ಸಚಿವ ಜಮೀರ್ ಅಹಮದ್ ರಾಜ್ಯಕ್ಕೆ ಹಿಂದಿರುಗಿದ್ದು ಇಂದಿನಿಂದ ಉಪ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

ಇಂದು ಸಿಂದಗಿ ಪ್ರಚಾರಕ್ಕೆ ತೆರಳಿದ ಜಮೀರ್, ಈ ವಾರವಿಡೀ ಹಾನಗಲ್ ಹಾಗೂ ಸಿಂದಗಿಯಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮುಸ್ಲಿಂ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಲಿದ್ದಾರೆ.

ಪ್ರಿಯಾಂಕಾ ಗಾಂಧಿ ಒಪ್ಪಿಗೆ ಪಡೆಯಲು ಯುಪಿಗೆ ತೆರಳಿದ್ದ ಜಮೀರ್

ಐಟಿ ದಾಳಿಯ ನಂತರ ತಣ್ಣಗಾಗಿದ್ದ ಮಾಜಿ ಸಚಿವ ಜಮೀರ್, ಇದರ ಜೊತೆಜೊತೆಗೆ ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಮತದಾರರನ್ನು ಸೆಳೆಯುವ ಸಲುವಾಗಿ ಪ್ರಿಯಾಂಕ ಗಾಂಧಿ ಒಪ್ಪಿಗೆ ಪಡೆಯುವುದಕ್ಕಾಗಿ ಕಳೆದ ಕೆಲ ದಿನಗಳಿಂದ ದಿಲ್ಲಿಯಲ್ಲೇ ಬೀಡುಬಿಟ್ಟಿದ್ದರು. ಇದೀಗ ಅಲ್ಲಿಂದ ಹಿಂದಿರುಗಿ ರುವ ಅವರು ತರಾತುರಿಯಲ್ಲಿ ಸಿಂದಗಿ ಯತ್ತ ಪ್ರಯಾಣ ಬೆಳೆಸಿದ್ದಾರೆ.

ಆರೇಳು ದಿನಗಳಿಂದ ತಣ್ಣಗಾಗಿದ್ದ ಜಮೀರ್ ಇದುವರೆಗೂ ಸಿಂದಗಿ, ಹಾನಗಲ್ ಪ್ರಚಾರದಲ್ಲಿ ಭಾಗಿಯಾಗಿರಲಿಲ್ಲ. ಮುಸ್ಲಿಂ ಸಮುದಾಯದ ಮತಗಳೇ ನಿರ್ಣಾಯಕ. ಆದರೂ ಎರಡು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿರಲಿಲ್ಲ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜಮೀರ್ ಅಹ್ಮದ್, ಪ್ರಚಾರದಲ್ಲಿ ಸಿದ್ದರಾಮಯ್ಯ ನಿರಂತರವಾಗಿ ತೊಡಗಿಸಿಕೊಂಡಿದ್ದರೂ, ಇವರು ಮಾತ್ರ ತೆರಳಿರಲಿಲ್ಲ. ಸಿದ್ದರಾಮಯ್ಯ ಇರುವಲ್ಲಿ ಹಾಜರಾಗ್ತಿದ್ದ ಜಮೀರ್ ಐಟಿ ದಾಳಿಯ ನಂತರ ಸೈಲೆಂಟಾಗಿದ್ದರು. ಪ್ರಚಾರಕ್ಕೆ ಕರೆದ್ರೂ ಅತ್ತ ತಲೆ ಹಾಕಿರಲಿಲ್ಲ.

ಸಿದ್ದರಾಮಯ್ಯ ಒತ್ತಡಕ್ಕೆ ಮಣಿದು ಪ್ರಚಾರದಲ್ಲಿ ಭಾಗಿ

ಅಲ್ಪಸಂಖ್ಯಾತರ ನಾಯಕನೆಂದೇ ಗುರುತಿಸಿಕೊಂಡಿದ್ದ ಜಮೀರ್, ಕೊನೆಗೂ ಸಿದ್ದರಾಮಯ್ಯ ಒತ್ತಡಕ್ಕೆ ಮಣಿದು ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳೇ ನಿರ್ಣಾಯಕ. ಈಗಾಗಲೇ ಜೆಡಿಎಸ್ ಪಕ್ಷ ಸಹ ಮುಸ್ಲಿಂ ಮತದಾರರನ್ನು ಸೆಳೆಯುವ ಉದ್ದೇಶದಿಂದ ಎರಡೂ ಕ್ಷೇತ್ರದಲ್ಲಿಯೂ ಇದೇ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಜೆಡಿಎಸ್ ವಿರುದ್ಧ ಕಾಂಗ್ರೆಸ್ ಪ್ರಬಲವಾಗಿ ನಿಲ್ಲಲು ಅದೇ ಸಮುದಾಯದ ನಾಯಕರ ಮೂಲಕ ಪ್ರಚಾರ ನಡೆಸುವ ಅನಿವಾರ್ಯ ಕಾಂಗ್ರೆಸ್​ಗೆ ಎದುರಾಗಿದೆ.

ಇದರಿಂದಲೇ ಪ್ರಚಾರಕ್ಕೆ ತೆರಳುವ ಮನಸ್ಸಿಲ್ಲದಿದ್ದರೂ ಜಮೀರ್ ಅಹ್ಮದ್ ಅವರನ್ನ ಬಲವಂತವಾಗಿ ಕರೆಸಿಕೊಳ್ಳುವ ಪ್ರಯತ್ನ ಮಾಡಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಹಾಗೂ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುವ ಕಾರ್ಯವನ್ನು ಜಮೀರ್ ಮಾಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.