ETV Bharat / state

ಪೊಲೀಸ್ ಕೇಸ್​ಗೆ ಹೆದರಿ ತಾಳಿ ಕಟ್ಟಿದವನು ರಿಜಿಸ್ಟರ್ ಮ್ಯಾರೇಜ್ ಮಾಡ್ಕೋ ಎಂದಾಗ ನಾಪತ್ತೆ!

author img

By

Published : Mar 7, 2023, 12:25 PM IST

ಯುವಕನೊಬ್ಬ ಮದುವೆ ಆಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.

Cheating a young lady in the name of love
ಪ್ರೀತಿ ಹೆಸರಿನಲ್ಲಿ ಯುವತಿಗೆ ವಂಚನೆ

ಬೆಂಗಳೂರು : ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಭಯಕ್ಕೆ ಪ್ರಿಯಕರನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿಗೆ ಒಲ್ಲದ ಮನಸ್ಸಿನಿಂದ ತಾಳಿ ಕಟ್ಟಿದ್ದ. ಆ ಬಳಿಕ ಯುವತಿ ರಿಜಿಸ್ಟರ್ ಮದುವೆ ಆಗುವಂತೆ ಒತ್ತಾಯಿಸಿದಾಗ ನಾಪತ್ತೆಯಾಗಿದ್ದಾನೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿವರ: ಲ್ಯಾಬ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಅದೇ ಲ್ಯಾಬ್‌ನಲ್ಲಿ ಸಿಸ್ಟಮ್ ವರ್ಕ್ ಮಾಡಿಕೊಂಡಿದ್ದ ಆರೋಪಿ ಸಾಗರ್​ನ ಪರಿಚಯವಾಗಿತ್ತು. ಯುವತಿಯನ್ನು ಪ್ರೀತಿಸುವ ನೆಪದಲ್ಲಿ ಆರೋಪಿ ಹಲವು ಬಾರಿ ಲೈಂಗಿಕವಾಗಿಯೂ ಬಳಸಿಕೊಂಡಿದ್ದಾನೆ. ಇದರಿಂದಾಗಿ 7 ತಿಂಗಳ ಗರ್ಭಿಣಿಯಾಗಿದ್ದಳು. ಈ ಮಧ್ಯೆ ಆರೋಪಿ ಗರ್ಭಪಾತ ಮಾತ್ರೆ ನುಂಗಿಸಿದ್ದು ಭ್ರೂಣ ಸಾವನ್ನಪ್ಪಿತ್ತು. ವಿಷಯ ತಿಳಿದ ಯುವತಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ರಾಜಿ ಮಾಡಿಕೊಂಡಿದ್ದ ಆರೋಪಿ ಯುವತಿಗೆ ಆಕೆಯ ಪೋಷಕರ ಸಮ್ಮುಖದಲ್ಲಿ ತಾಳಿ ಕಟ್ಟಿದ್ದಾನೆ. ಬಳಿಕ, ರಿಜಿಸ್ಟರ್ ಮದುವೆ ಆಗುವಂತೆ ಹೇಳಿದಾಗ ಫೋನ್ ಸ್ವಿಚ್ ಆಫ್ ಮಾಡಿಕೊಂಡಿವ ಆರೋಪಿ ಪರಾರಿಯಾಗಿದ್ದಾನೆ. ಸೋಲದೇವನಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೃದ್ಧನ ಕೊಲೆ: ಆನೇಕಲ್‌ನಲ್ಲಿ ಮಾ.5ರ ರಾತ್ರಿ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ವೃದ್ದನೋರ್ವನನ್ನು ಯುವಕರ ತಂಡ ಸೈಜು ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆವರಣಕ್ಕೆ ಹೊಂದಿಕೊಂಡಿರುವ ಕಾಲೋನಿಯ ವಿಷ್ಣುವರ್ಧನ್ ಎಂಬವರ ಮನೆ ಮುಂದೆ 58 ವರ್ಷದ ದೊಡ್ಡ ಮಾದಯ್ಯನ ದೇಹ ಕೊಲೆಯಾದ ಸ್ಥಿತಿಯಲ್ಲಿ ಭಾನುವಾರ ಬೆಳಗ್ಗೆ ಪತ್ತೆಯಾಗಿತ್ತು. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

ಇದನ್ನೂ ಓದಿ: ಪ್ರಿಂಟಿಂಗ್ ಪ್ರೆಸ್ ಮಾಲೀಕ ಹತ್ಯೆ ಪ್ರಕರಣ: ಆರೋಪಿ ಜೊತೆಗಿದ್ದ ಸಲಿಂಗಕಾಮವೇ ಹತ್ಯೆಗೆ ಕಾರಣವಾಯ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.