ETV Bharat / state

ಅಸ್ಪೃಶ್ಯತೆ ನಿವಾರಣೆಗೆ 'ವಿನಯ ಸಾಮರಸ್ಯ ' ಯೋಜನೆ : ಸಚಿವ ಕೋಟ ಶ್ರೀನಿವಾಸ್ ಪೂಜಾರಿ

author img

By

Published : Mar 28, 2022, 7:41 PM IST

ಕೊಪ್ಪಳದಲ್ಲಿ 2 ವರ್ಷದ ಬಾಲಕನೊಬ್ಬ ದೇವಸ್ಥಾನ ಪ್ರವೇಶ ಮಾಡಿದ ಎಂಬ ಒಂದೇ ಕಾರಣಕ್ಕೆ ಆತನ ಪೋಷಕರಿಗೆ ದಂಡ ವಿಧಿಸಲಾಗಿತ್ತು. ಇದನ್ನು ನಮ್ಮ ಇಲಾಖೆ ಗಂಭೀರವಾಗಿ ಪರಿಗಣಿಸಿ ಅಸ್ಪಶ್ಯತೆ ವಿರುದ್ಧ ಸಾಮರಸ್ಯ ಕಾಪಾಡಲು 'ವಿನಯ ಸಾಮರಸ್ಯ' ಎಂಬ ಯೋಜನೆಯನ್ನು ಆತನ ಹೆಸರಿನಲ್ಲೇ ಪ್ರಾರಂಭಿಸುತ್ತೇವೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ವಿಧಾನಸಭೆಯಲ್ಲಿ ಹೇಳಿದರು..

Minister Kota Srinivas Poojary
ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ

ಬೆಂಗಳೂರು : ಸಮಾಜದಲ್ಲಿರುವ ಅಸ್ಪಶ್ಯತೆಯನ್ನು ನಿವಾರಿಸಿ ಸಾಮರಸ್ಯ ಕಾಪಾಡಲು 'ವಿನಯ ಸಾಮರಸ್ಯ' ಎಂಬ ವಿನೂತನ ಯೋಜನೆಯನ್ನು ಪ್ರಾರಂಭಿಸುವುದಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ವಿಧಾನಸಭೆಯಲ್ಲಿ ಇ‌ಂದು ತಿಳಿಸಿದ್ದಾರೆ. 2022-23ನೇ ಸಾಲಿನ ಬಜೆಟ್‍ನ ಅನುದಾನದ ಬೇಡಿಕೆ ಮೇಲೆ ನಡೆದ ಚರ್ಚೆಗೆ ಸಚಿವರು ಉತ್ತರಿಸಿದರು.

ಸದನದಲ್ಲಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿರುವುದು..

ಕೊಪ್ಪಳದಲ್ಲಿ 2 ವರ್ಷದ ಬಾಲಕನೊಬ್ಬ ದೇವಸ್ಥಾನ ಪ್ರವೇಶ ಮಾಡಿದ ಎಂಬ ಒಂದೇ ಕಾರಣಕ್ಕೆ ಆತನ ಪೋಷಕರಿಗೆ ದಂಡ ವಿಧಿಸಲಾಗಿತ್ತು. ಇದನ್ನು ನಮ್ಮ ಇಲಾಖೆ ಗಂಭೀರವಾಗಿ ಪರಿಗಣಿಸಿ ಅಸ್ಪಶ್ಯತೆ ವಿರುದ್ಧ ಸಾಮರಸ್ಯ ಕಾಪಾಡಲು 'ವಿನಯ ಸಾಮರಸ್ಯ' ಎಂಬ ಯೋಜನೆಯನ್ನು ಆತನ ಹೆಸರಿನಲ್ಲೇ ಪ್ರಾರಂಭಿಸುತ್ತೇವೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಈ ಕುರಿತಂತೆ ಚರ್ಚಿಸಿ ಸದ್ಯದಲ್ಲೇ ಯೋಜನೆ ಉದ್ಘಾಟನೆ ಮಾಡಲಿದ್ದೇವೆ. ರಾಜ್ಯದಲ್ಲಿರುವ 6020 ಗ್ರಾಮ ಪಂಚಾಯತ್‌ಗಳು ಅಶ್ಪಶ್ಯತೆ ವಿರುದ್ದ ಸಾಮಾಜಿಕ ಸಾಮಾರಸ್ಯ ಕಾಪಾಡಲು ಸದಸ್ಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಸ್ಪಶ್ಯತೆ ಮುಕ್ತ ಗ್ರಾಮ ಪಂಚಾಯತ್‌ಗೆ ಹೆಚ್ಚಿನ ಅನುದಾನವನ್ನು ಸರ್ಕಾರ ನೀಡಲಿದೆ ಎಂದರು.

ಜನಸಂಖ್ಯೆಗೆ ಅನುಗುಣವಾಗಿ ಅನುದಾನ : ಎಸ್‍ಸಿಪಿಟಿಎಸ್​​ಪಿ ಯೋಜನೆಯಡಿ ಪರಿಶಿಷ್ಟ ಜಾತಿ, ವರ್ಗದವರಿಗೆ ಹೆಚ್ಚಿನ ಅನುದಾನ ಒದಗಿಸಿ ಪ್ರೋತ್ಸಾಹಿಸಿ ಈ ಯೋಜನೆಯಡಿ ರಸ್ತೆ, ಚರಂಡಿ, ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಇನ್ನು ಮುಂದೆ ಈ ಯೋಜನೆಯಡಿ ಜಿಲ್ಲಾಧಿಕಾರಿಗಳ ಖಾತೆಗೆ ನೇರವಾಗಿ ಹಣ ವರ್ಗಾಯಿಸಲಾಗುವುದು. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಬೇಕು. ಶಾಸಕರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅನುದಾನವನ್ನು ಪಡೆಯಬೇಕು ಎಂದರು.

ಜನರ ಕಲ್ಯಾಣಕ್ಕಾಗಿ ಕೆಲಸ : ಇಲಾಖೆ ವತಿಯಿಂದ ಅನೇಕ ರೀತಿಯ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ವಸತಿ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡಿದ 14 ವಿದ್ಯಾರ್ಥಿಗಳಲ್ಲಿ 11 ಮಂದಿ ಐಐಟಿ, 3 ವಿದ್ಯಾರ್ಥಿಗಳು ಎನ್‍ಐಟಿಗೆ ಆಯ್ಕೆಯಾಗಿದ್ದಾರೆ. 764 ವಸತಿ ಶಾಲೆಗಳ ಪೈಕಿ 1.20 ಲಕ್ಷ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡುತ್ತಿದ್ದೇವೆ. ಹೀಗೆ ಇಲಾಖೆ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಮಲ ಹೊರುವ ಪದ್ಧತಿ ಸಂಪೂರ್ಣ ನಿಷೇಧ : ರಾಜ್ಯದಲ್ಲಿ ಮಲ ಹೊರುವ ಪದ್ದತಿ ಸಂಪೂರ್ಣವಾಗಿ ನಿಷೇಧ ಮಾಡಲು ಸರ್ಕಾರ ಬದ್ದವಾಗಿದೆ. ಇದೊಂದು ಸಾಮಾಜಿಕ ಪಿಡುಗಾಗಿದ್ದು ಇದನ್ನು ಪಕ್ಷಬೇಧ ಮರೆತು ಕೊನೆಗೊಳಿಸಬೇಕು ಎಂದರು. ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ತರಬೇತಿಯಲ್ಲಿ ದೆಹಲಿ, ಬೆಂಗಳೂರು, ಚೈನ್ನೈ, ಹೈದರಾಬಾದ್ ಸೇರಿದಂತೆ ಅತ್ಯುತ್ತಮ ಸಂಸ್ಥೆಗಳಲ್ಲಿ ತರಬೇತಿ ಕೊಡಿಸುತ್ತಿದ್ದೇವೆ. ಅಲ್ಲದೆ ಶಿಷ್ಯ ವೇತನವನ್ನು ಹೆಚ್ಚಳ ಮಾಡಲಾಗಿದೆ.

ಹೀಗೆ ನಮ್ಮ ಇಲಾಖೆ ಶೈಕ್ಷಣಿಕ ಸಾಮಾಜಿಕ, ಆರ್ಥಿಕವಾಗಿ ಸಬಲೀಕರಣಗೊಳಿಸಲು ಶಕ್ತಿ ಮೀರಿ ಪ್ರಯತ್ನ ಮಾಡುವುದಾಗಿ ಹೇಳಿದರು. ಅನೇಕ ಸದಸ್ಯರು 7ಡಿ ಕಾಯ್ದೆಯನ್ನು ರದ್ದುಪಡಿಸಬೇಕೆಂದು ಸಲಹೆ ನೀಡಿದ್ದಾರೆ. ಇದನ್ನು ರದ್ದುಪಡಿಸಬೇಕಾದರೆ ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಬೇಕು. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಸಚಿವರು ಹೇಳಿದರು.

ಪರಿಶಿಷ್ಟ ಜಾತಿ/ವರ್ಗದ ನಿಗಮಗಳಿಗೆ ಹೆಚ್ಚುವರಿ ಅನುದಾನವನ್ನು ಸರ್ಕಾರ ಒದಗಿಸಿದೆ. ನಿಗಮಗಳ ಮೂಲಕ ಅನೇಕ ರೀತಿಯ ಜನಪಯೋಗಿ ಕೆಲಸಗಳನ್ನು ಮಾಡುತ್ತಿದ್ದೇವೆ. ಪ್ರತಿಯೊಬ್ಬನಿಗೂ ಉತ್ತಮವಾದ ಕೆಲಸ ಮಾಡುವುದೇ ನಮ್ಮ ಸರ್ಕಾರದ ಗುರಿ . ಪೌರಕಾರ್ಮಿಕರಿಗೆ ಕಾಲಕಾಲಕ್ಕೆ ವೇತನ ಬಿಡುಗಡೆ ಮಾಡಲಾಗುತ್ತಿದೆ. ಕೆಲವರಿಂದ ಪೌರಕಾರ್ಮಿಕರನ್ನು ಖಾಯಂ ಮಾಡಬೇಕೆಂಬ ಸಲಹೆ ಬಂದಿದೆ. ಅದು ಅಷ್ಟು ಸುಲಭವಲ್ಲ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ದೇವೇಗೌಡರ ಪತ್ನಿ ಚೆನ್ನಮ್ಮಗೆ ಐಟಿ ನೋಟಿಸ್​: ಇದು ಬಿಜೆಪಿಯ ರಾಜಕೀಯ ಸೇಡು- ರೇವಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.