ETV Bharat / state

ಬೀದಿ ಬದಿಯ ಆಹಾರಗಳನ್ನು ಆನ್​ಲೈನ್​ ವ್ಯಾಪ್ತಿಗೆ ತರಲು ಮನವಿ

author img

By

Published : Dec 3, 2019, 6:32 AM IST

ಸ್ವಿಗ್ಗಿ ಹಾಗೂ ಜೊಮ್ಯಾಟೊದ ಮೂಲಕ, ಬೀದಿ ಬದಿಯ ಆಹಾರಗಳನ್ನು ಗ್ರಾಹಕರಿಗೆ ತಲುಪುವಂತೆ ಮಾಡಬೇಕೆಂದು ಬೀದಿಬದಿಯ ಆಹಾರ ವ್ಯಾಪಾರಿಗಳು ಮನವಿ ಮಾಡಿದ್ದಾರೆ

ಬೀದಿ ಬದಿಯ ಆಹಾರಗಳನ್ನು ಆನ್​ಲೈನ್​ ವ್ಯಾಪ್ತಿಗೆ ತರಲು ಮನವಿ
ಬೀದಿ ಬದಿಯ ಆಹಾರಗಳನ್ನು ಆನ್​ಲೈನ್​ ವ್ಯಾಪ್ತಿಗೆ ತರಲು ಮನವಿ

ಬೆಂಗಳೂರು: ರಾಜ್ಯದಲ್ಲಿ ಬೀದಿ ಬದಿಯಲ್ಲಿ ಮಾರಾಟ ಮಾಡುವ ಗೋಬಿ ಮಂಚೂರಿ, ದೋಸೆ, ಇಡ್ಲಿ ಸೇರಿದಂತೆ ವಿವಿಧ ಬಗೆಯ ತಿಂಡಿಗಳನ್ನು ಆನ್​ಲೈನ್ ವ್ಯಾಪಾರದ ವ್ಯಾಪ್ತಿಗೆ ತರಬೇಕೆಂಬ ಬೇಡಿಕೆ ಆರಂಭವಾಗಿದೆ.

ಸ್ವಿಗ್ಗಿ ಹಾಗೂ ಜೊಮ್ಯಾಟೊದ ಮೂಲಕ, ಬೀದಿ ಬದಿಯ ಆಹಾರಗಳನ್ನು ಗ್ರಾಹಕರಿಗೆ ತಲುಪುವಂತೆ ಮಾಡಬೇಕೆಂದು ಬೀದಿ ಬದಿಯ ಆಹಾರ ವ್ಯಾಪಾರಿಗಳು ಮನವಿ ಮಾಡಿದ್ದಾರೆ. ಆಹಾರಗಳಲ್ಲಿ ಸ್ವಚ್ಛತೆ ಕಾಪಾಡುವ ಹಾಗೂ ಅಧಿಕೃತ ಎಂದು ತಿಳಿಯಲು ಸರ್ಕಾರ ಸರ್ಟಿಫಿಕೇಟ್ ನೀಡಲಿದೆ. ಹೀಗಾಗಿ ಜನರಿಗೆ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆಯೂ ಆಗಬೇಕೆಂದು ಮನವಿ ಮಾಡಿದ್ದಾರೆ.

ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಸರ್ಕಾರ ಹಾಗೂ ಸಂಘಟನೆಗಳು ಆಯೋಜಿಸಲಾಗಿತ್ತು. ಆಹಾರ ತಯಾರಿಸುವ ವಿಧಾನ, ಕಾಪಾಡಬೇಕಾದ ಸ್ವಚ್ಛತೆ ಹಾಗೂ ನಿರ್ವಹಣೆಯ ಬಗ್ಗೆ ವಿಡಿಯೋ ಮೂಲಕ ತರಬೇತಿ ನೀಡಲಾಯಿತು.

ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ಕಾರ್ಯಕ್ರಮ

ಬೀದಿ ಬದಿಯ ವ್ಯಾಪಾರಿಗಳಿಗೆ ಐಡಿ ಕಾರ್ಡ್ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಜನವರಿಯಿಂದ ಪ್ರತಿ ಅಂಗಡಿಗಳಿಗೂ ಪ್ರಮಾಣಪತ್ರ ನೀಡಲು ಯೋಜಿಸಲಾಗಿದೆ. ಹಾಗೆಯೇ ವ್ಯಾಪಾರ ಹೆಚ್ಚು ಮಾಡುವ ಉದ್ದೇಶದಿಂದ ಆನ್ಲೈನ್ ವ್ಯಾಪ್ತಿಗೆ ತರಲು ಸರ್ಕಾರ ಅನುಕೂಲ ಮಾಡಿಕೊಡಬೇಕೆಂದು ವ್ಯಾಪಾರಸ್ಥರು ಮನವಿ ಮಾಡಿದ್ದಾರೆ.

Intro:ಬೀದಿ ಬದಿ ಆಹಾರಗಳನ್ನೂ ಸ್ವಿಗ್ಗಿ ವ್ಯಾಪ್ತಿಗೆ ತರಲು ವ್ಯಾಪಾರಿಗಳ ಮನವಿ


ಬೆಂಗಳೂರು: ರಾಜ್ಯದಲ್ಲಿ ಬೀದಿ ಬದಿ ಮಾರಾಟ ಮಾಡುವ ಗೋಬಿ ಮಂಚೂರಿ, ದೋಸೆ, ಇಡ್ಲಿ, ಊಟ ಸೇರಿದಂತೆ ವಿವಿಧ ಬಗೆಯ ತಿಂಡಿತಿನಿಸುಗಳನ್ನೂ ಆನ್ ಲೈನ್ ವ್ಯಾಪಾರದ ವ್ಯಾಪ್ತಿಗೆ ತರಬೇಕೆಂಬ ಬೇಡಿಕೆ ಆರಂಭವಾಗಿದೆ. ಸ್ವಿಗ್ಗಿ, ಝೋಮ್ಯಾಟೊ ಮೂಲಕ, ಬೀದಿ ಬದಿಯ ಆಹಾರಗಳನ್ನು ಗ್ರಾಹಕರಿಗೆ ತಲುಪುವಂತೆ ಮಾಡಬೇಕು. ಆಹಾರಗಳಲ್ಲಿ ಸ್ವಚ್ಛತೆ ಕಾಪಾಡುವ ಹಾಗೂ ಅಧಿಕೃತ ಎಂದು ತಿಳಿಯಲು ಸರ್ಕಾರ ಸರ್ಟಿಫಿಕೇಟ್ ನೀಡಲಿದೆ.. ಹೀಗಾಗಿ ಜನರಿಗೆ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆಯೂ ಆಗಬೇಕೆಂದು ಬೀದಿ ಬದಿಯ ಆಹಾರ ವ್ಯಾಪಾರಿಗಳು ಮನವಿ ಮಾಡಿದ್ದಾರೆ.
ಇಂದು ನಗರದ ಖಾಸಗಿ ಹೊಟೇಲ್ ನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಸರ್ಕಾರ ಹಾಗೂ ಸಂಘಟನೆಗಳು ಆಯೋಜಿಸಿದ್ದವು. ಆಹಾರ ತಯಾರಿಸುವ ವಿಧಾನ, ಕಾಪಾಡಬೇಕಾದ ಸ್ವಚ್ಛತೆ, ಹಾಗೂ ನಿರ್ವಹಣೆ ಬಗ್ಗೆ ವೀಡಿಯೋ ಮೂಲಕ ತರಬೇತಿ ನೀಡಲಾಯಿತು.
ಈ ವರೆಗೆ ಬೀದಿ ಬದಿ ವ್ಯಾಪಾರಿಗಳಿಗೆ ಐಡಿ ಕಾರ್ಡ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಜನವರಿಯಿಂದ ಪ್ರತೀ ಅಂಗಡಿಗಳಿಗೂ ಪ್ರಮಾಣಪತ್ರ ನೀಡಲು ಯೋಜಿಸಲಾಗಿದೆ. ಹಾಗೆಯೇ ವ್ಯಾಪಾರ ಹೆಚ್ಚು ಮಾಡುವ ಉದ್ದೇಶದಿಂದ ಆನ್ ಲೈನ್ ವ್ಯಾಪ್ತಿಗೆ ತರಲು ಸರ್ಕಾರ ಅನುಕೂಲ ಮಾಡಿಕೊಡಬೇಕೆಂಬ ಮನವಿ ಕೇಳಿಬಂದಿದೆ.


ಬೈಟ್- ರಂಗಸ್ವಾಮಿ, ಅಧ್ಯಕ್ಷ, ಬೀದಿ ಬದಿ ವ್ಯಾಪಾರಿಗಳ ಸಂಘ
ಬೈಟ್: ಕೇಶವಮೂರ್ತಿ ವ್ಯಾಪಾರಿ


ಸೌಮ್ಯ
Kn_bng_04_street_vendors_7202707
Body:.Conclusion:..

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.