ಪೊಲೀಸರಿಗಿಲ್ಲ ಶಿಕ್ಷೆ ಪ್ರಶ್ನಿಸುವ ಹಕ್ಕು: ಶಿಸ್ತು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ಅಧಿಕಾರ ಮೊಟಕು?!

author img

By

Published : Sep 19, 2022, 1:57 PM IST

KSP DP Amendment Rules 2022  police no right to question the punishment  KSP DP Amendment Rules change  ಪೊಲೀಸರಿಗಿಲ್ಲ ಶಿಕ್ಷೆ ಪ್ರಶ್ನಿಸುವ ಹಕ್ಕು  ಶಿಸ್ತು ಪ್ರಾಧಿಕಾರಕ್ಕೆ ಮೇಲ್ಮನವಿ  ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟ  ಪೊಲೀಸರ ಪ್ರಶ್ನಿಸುವ ಅಧಿಕಾರ ಮೊಟಕು  ನೈಸರ್ಗಿಕ ನ್ಯಾಯ ತತ್ವದ ನಿಯಮಗಳಿಗೆ ವಿರುದ್ಧ

KSP (DP) Amendment Rules 2022 ಕರಡನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದ್ದು, ಇದರಿಂದ ಇಲಾಖೆಯಲ್ಲಿ ನೀಡಲಾದ ಶಿಕ್ಷೆ ಪ್ರಶ್ನಿಸುವ ಹಕ್ಕನ್ನು ಕಸಿದುಕೊಂಡಂತಾಗುತ್ತದೆ.

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್​ನಿಂದ ಹಿಡಿದು ಎಸಿಪಿ ದರ್ಜೆಯವರೆಗಿನ ಅಧಿಕಾರಿಗಳ ದನಿಯನ್ನು ಧಮನ ಮಾಡುವತ್ತ ಇಲಾಖೆ ಕುರುಡು ಹೆಜ್ಜೆ ಇರಿಸಿದೆ‌. ಇದೇ ತಿಂಗಳ 7 ರಂದು ಗೃಹ ಇಲಾಖೆಯ ಅಧೀನ ಕಾರ್ಯದರ್ಶಿಗಳು KSP (DP) ನಿಯಮಗಳಿಗೆ ತಿದ್ದುಪಡಿ ಮಾಡುವ ಬಗ್ಗೆ KSP (DP) Amendment Rules 2022 ಕರಡನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು. ಇದಕ್ಕೆ ಕೇವಲ 15 ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿತ್ತು. ಈ ತಿದ್ದುಪಡಿಯಿಂದ ಪೊಲೀಸರಿಗೆ ಶಿಕ್ಷೆ ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆಯಾ ಎಂಬ ಅನುಮಾನಗಳು ಕಾಡಿವೆ.

ಇಷ್ಟಕ್ಕೂ ಈ ತಿದ್ದುಪಡಿಯನ್ನು ಗಮನಿಸಿದಾಗ ಸಂಪೂರ್ಣವಾಗಿ ಪೊಲೀಸರನ್ನು ಪ್ರಶ್ನಿಸುವ ಅಧಿಕಾರ ಮೊಟಕುಗೊಳಿಸುವ ಯತ್ನ ಎನ್ನುವುದು ಸ್ಪಷ್ಟವಾಗುತ್ತಿದೆ. ಹೊಸ ತಿದ್ದುಪಡಿಯ ಪ್ರಕಾರ ಇನ್ಮುಂದೆ ಹಿರಿಯ ಅಧಿಕಾರಿಗಳು ಕೆಳ ಹಂತದ ಅಧಿಕಾರಿ/ಸಿಬ್ಬಂದಿ ಮೇಲೆ ಶಿಸ್ತುಕ್ರಮಕ್ಕೆ ಮುಂದಾದ್ರೆ ಅದನ್ನು ಯಾರೂ ಪ್ರಶ್ನಿಸುವ ಅಧಿಕಾರವಿರುವುದಿಲ್ಲ. ಈ ಹಿಂದೆ ಶಿಸ್ತು ಕ್ರಮಗಳನ್ನ‌ ಪ್ರಶ್ನಿಸಿ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಹಿರಿಯ ಅಧಿಕಾರಿಗಳ ಅಥವಾ ನ್ಯಾಯಾಲಯದ ಮೊರೆಹೋಗಬಹುದಿತ್ತು. ಆದ್ರೆ ಹೊಸ ತಿದ್ದುಪಡಿಯಲ್ಲಿ ಅದಕ್ಕೆ ಅವಕಾಶವೇ ಇರುವುದಿಲ್ಲ. ಆಪಾದಿತ ಅಧಿಕಾರಿ/ಸಿಬ್ಬಂದಿ ತಮ್ಮ ಭತ್ಯೆ ಅಥವಾ ಪ್ರಮೋಷನ್ ತಡೆ ಹಿಡಿದರೂ ಸಹ ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲದಂತಾಗುತ್ತದೆ.

KSP DP Amendment Rules 2022  police no right to question the punishment  KSP DP Amendment Rules change  ಪೊಲೀಸರಿಗಿಲ್ಲ ಶಿಕ್ಷೆ ಪ್ರಶ್ನಿಸುವ ಹಕ್ಕು  ಶಿಸ್ತು ಪ್ರಾಧಿಕಾರಕ್ಕೆ ಮೇಲ್ಮನವಿ  ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟ  ಪೊಲೀಸರ ಪ್ರಶ್ನಿಸುವ ಅಧಿಕಾರ ಮೊಟಕು  ನೈಸರ್ಗಿಕ ನ್ಯಾಯ ತತ್ವದ ನಿಯಮಗಳಿಗೆ ವಿರುದ್ಧ
ಕರ್ನಾಟಕ ರಾಜ್ಯ ಪ್ರತ್ರ

ಈ ನಿಯಮವು ನೈಸರ್ಗಿಕ ನ್ಯಾಯ ತತ್ವದ ನಿಯಮಗಳಿಗೆ ವಿರುದ್ಧವಾಗಿದ್ದು ವ್ಯಕ್ತಿಯ ಮೂಲಭೂತ ಹಕ್ಕನ್ನೆ ಕಸಿದುಕೊಂಡಂತಾಗಿದೆ. ಶಿಸ್ತು ಪ್ರಾಧಿಕಾರಗಳು ಕೆಲವೊಮ್ಮೆ ತಮ್ಮ ಅಧಿಕಾರ ಚಲಾವಣೆ ಮಾಡುವಾಗ ತಮ್ಮ ವಿವೇಚನೆ ಬಳಸದೇ ಅನಿಯಂತ್ರಿತ ಮತ್ತು ನಿರಂಕುಶ ಆದೇಶಗಳನ್ನ ಮಾಡುತ್ತಿರುತ್ತಾರೆ. ಅಂತಹ ಆದೇಶದ ಮೇಲೆ ತೊಂದರೆಗೀಡಾದ ಅಧಿಕಾರಿ ಅಥವಾ ಸಿಬ್ಬಂದಿ ಇಲಾಖಾ ಮೇಲಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿ ತಮ್ಮ ಕುಂದು ಕೊರತೆ ಮತ್ತು ತಮ್ಮ ಪರವಾದ ವಾದವನ್ನು ಮಂಡಿಸಲು ಅವಕಾಶವಿತ್ತು. ಈ ತಿದ್ದುಪಡಿಯಲ್ಲಿ ಈ ನಿಯಮ ಇಲ್ಲದಿರುವುದು ಪೊಲೀಸರನ್ನ ಸಾಕಷ್ಟು ಆತಂಕಕ್ಕೆ ದೂಡಿದೆ.

ಓದಿ: ಕ್ರಿಕೆಟ್ ಬೆಟ್ಟಿಂಗ್​​: ಹಣ ವಸೂಲಿಗಿಳಿದ್ರಾ ಸದಾಶಿವನಗರ ಪೊಲೀಸ್ ಕಾನ್ಸ್​ಟೇಬಲ್?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.