ETV Bharat / state

ಡಬಲ್​ ಮಾಸ್ಟರ್ಸ್, ಉನ್ನತ ಕಂಪನಿಗಳಲ್ಲಿ ಹುದ್ದೆ: ಉಗ್ರರ ನೆರವಿಗೆ ನಿಂತ ಸ್ವಾತಿ ಶೇಷಾದ್ರಿ ಕಹಾನಿ

author img

By

Published : Oct 30, 2020, 10:45 AM IST

ಉಗ್ರರ ನೆರವಿಗೆ ನಿಂತ ಸ್ವಾತಿ ಶೇಷಾದ್ರಿ ಕಹಾನಿ
ಉಗ್ರರ ನೆರವಿಗೆ ನಿಂತ ಸ್ವಾತಿ ಶೇಷಾದ್ರಿ ಕಹಾನಿ

ಮೂಲತಃ ಮುಂಬೈ ನಿವಾಸಿಯಾಗಿರುವ ಸ್ವಾತಿ, ಎರಡು ಮಾಸ್ಟರ್ ಡಿಗ್ರಿಗಳನ್ನು ಮಾಡಿದ್ದಾರೆ. ಬ್ಯಾಂಕಿಂಗ್ ಫೈನಾನ್ಸ್​ನಲ್ಲಿ ಎಂ.ಕಾಂ ಮತ್ತು ಸಮಾಜ ಶಾಸ್ತ್ರದಲ್ಲಿ ಎಂ.ಎ ಮಾಡಿ 1999 ರ ವೇಳೆ ಕೆಲಸಕ್ಕೆ ಸೇರಿದ್ದರು. ಇದೀಗ ಈಕೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು: ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಜೆಕೆಸಿಸಿಎಸ್ ಮುಖ್ಯಸ್ಥ ಕುರಂ ಪರ್ವೇಶ್ ಶಿಷ್ಯೆ ಸ್ವಾತಿ ಶೇಷಾದ್ರಿ ಮನೆ ಮೇಲೆ ಕೇಂದ್ರ ತನಿಖಾ ದಳ (ಎನ್​ಐಎ) ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ಈಕೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಮೂಲತಃ ಮುಂಬೈನ ನಿವಾಸಿಯಾಗಿರುವ ಸ್ವಾತಿ, ಎರಡು ಮಾಸ್ಟರ್ ಡಿಗ್ರಿಗಳನ್ನು ಮಾಡಿದ್ದಾರೆ. ಬ್ಯಾಂಕಿಂಗ್ ಫೈನಾನ್ಸ್​ನಲ್ಲಿ ಎಂ.ಕಾಂ ಮತ್ತು ಸಮಾಜ ಶಾಸ್ತ್ರದಲ್ಲಿ ಎಂ.ಎ ಮಾಡಿ 1999 ರ ವೇಳೆ ಕೆಲಸಕ್ಕೆ ಸೇರಿದ್ದರು. ಮೊದಲು ಮುಂಬೈನಲ್ಲಿನ ಇಕ್ವಿಟಿ ರಿಸರ್ಚ್ ಅನಾಲಿಸ್ಟ್, ಆ ನಂತರ ಟ್ರೈನಿ ಥೆರಪಿಸ್ಟ್ ಆತ್ಮ ಶಕ್ತಿ ವಿದ್ಯಾಲಯ, ಆಶಾಗ್ರಾಮ್ ಟ್ರಸ್ಟ್‌ನಲ್ಲಿ ಪ್ರೋಗ್ರಾಂ ಆಫೀಸರ್, ಮಂಥನ್ ಅಧ್ಯಯನ ಕೇಂದ್ರದಲ್ಲಿ ರಿಸರ್ಚರ್, ಎಫ್​ಆರ್​ಎಲ್, ಎಚ್​ಟಿ ರಿಸರ್ಚರ್, ಇದಾದ ಬಳಿಕ ಬೆಂಗಳೂರು ಕ್ರೈಸ್ಟ್ ಕಾಲೇಜ್‌ನಲ್ಲಿ ವಿಸಿಟಿಂಗ್ ಲೆಕ್ಚರರ್​, ಕಮ್ಯೂನಿಟಿ ಆರ್ಗನೈಸೇಷನ್, ರೂರಲ್ ಡೆವಲ್ಪೆಂಟ್ ಟೀಚಿಂಗ್, ಆ ನಂತರ ಬೆಂಗಳೂರು ವಿವಿಯಲ್ಲಿ ಕೆಲಕಾಲ ಕೆಲಸ ಮಾಡಿದ್ದಾಳಂತೆ.

ಇದನ್ನೂ ಓದಿ: ಜೆಕೆಸಿಸಿಎಸ್ ಮುಖ್ಯಸ್ಥ ಕುರಂ ಪರ್ವೇಶ್ ಶಿಷ್ಯೆ ಮನೆ ಮೇಲೆ ಎನ್‌ಐಎ ದಾಳಿ

ಸದ್ಯ ಬೆಂಗಳೂರಿನಲ್ಲಿ 2010ರಿಂದ ಇಕ್ವೆಷನ್ಸ್ ಕಂಪನಿಯ ಏರಿಯಾ ಕೋ ಆರ್ಡಿನೇಟರ್ ಜೊತೆಗೆ ಶೇಷಾದ್ರಿ ಜೆಕೆಸಿಸಿಎಸ್‌ನಲ್ಲಿ ರಿಸರ್ಚ್ ಕೋ ಆರ್ಡಿನೇಟರ್ ಆಗಿದ್ದಳು. ಇಲ್ಲಿಂದ ಕಾಶ್ಮೀರ ಪ್ರತ್ಯೇಕವಾದಿಗಳಿಗೆ ಹಣ ಸಂಗ್ರಹ ಮಾಡಿ ಕಳುಹಿಸಿದ ಆರೋಪ ಕೂಡ ಕೇಳಿಬಂದಿದೆಯಂತೆ. ಹಾಗೆಯೇ ಬೆಂಗಳೂರಿನಲ್ಲಿ ವಿಚಾರವಾದಿಯಾಗಿ ಗುರುತಿಸಿಕೊಂಡಿದ್ದಳಂತೆ. ಸಿಎಎ, ಎನ್​ಆರ್​ಸಿ, 370 ರದ್ದು ವಿರೋಧಿಸಿ ಪ್ರತಿಭಟನೆ ಕೂಡ ಮಾಡಿರುವ ಅಂಶ ಬೆಳಕಿಗೆ ಬಂದಿದೆ.

ಸ್ವಾತಿ ಶೇಷಾದ್ರಿ ಬೆಂಗಳೂರು ಎನ್​ಜಿಒಗೆ ದುಬೈನಿಂದ ಹಣ ವರ್ಗಾವಣೆ ಮಾಡಿಸಿರುವ ವಿಚಾರ ತನಿಖೆ ವೇಳೆ ಬಯಲಾಗಿದೆ. ಈ ಕುರಿತು ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.