ETV Bharat / state

ರಾಜ್ಯದಲ್ಲಿ ಹಂತ ಹಂತವಾಗಿ ಅನ್​ಲಾಕ್​ ಮಾಡುವುದು ಸೂಕ್ತ: ಡಿಸಿಎಂ ಲಕ್ಷ್ಮಣ ಸವದಿ..‌

author img

By

Published : Jun 1, 2021, 5:34 PM IST

ಅನ್​ಲಾಕ್​ ಬಗ್ಗೆ ತಜ್ಞರ ಜತೆ ನಾಳೆ ಸಮಾಲೋಚನೆ ಮಾಡಲಾಗುವುದು. ಅವರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

covid vaccine
ಕೋವಿಡ್ ಲಸಿಕೆ ಹಾಕುತ್ತಿರುವುದು

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮದ ( ಬಿಎಂಟಿಸಿ) ವತಿಯಿಂದ ಇಂದು ಶಾಂತಿನಗರದ ಬಿಎಂಟಿಸಿ ಘಟಕ 2 ರಲ್ಲಿ ಸಾರಿಗೆ ಸಿಬ್ಬಂದಿಗೆ ಎರಡನೆಯ ಹಂತದಲ್ಲಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುವ ಆಂದೋಲನಕ್ಕೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಬಿಬಿಎಂಪಿ ಮೂಲಕ‌ ಚಾಲಕರು - ನಿರ್ವಾಹಕರ ಹಾಗೂ ಸಿಬ್ಬಂದಿಗೆ ಲಸಿಕೆ ನೀಡಲಾಗ್ತಿದ್ದು, 31 ಸಾವಿರ ಬಿಎಂಟಿಸಿ ನೌಕರರಿಗೆ ‌ಕೊರೊನಾ ವ್ಯಾಕ್ಸಿನೇಷನ್‌ ನೀಡಲಾಗುತ್ತಿದೆ. ಬಿಎಂಟಿಸಿ, ಕೆಎಸ್ಆರ್​ಟಿಸಿ ಸೇರಿದಂತೆ ನಾಲ್ಕು ನಿಗಮಗಳಿಂದ ಶೇಕಡಾ 70 ನೌಕರರಿಗೆ ವ್ಯಾಕ್ಸಿನ್ ನೀಡಲಾಗಿದೆ.‌ ಇದೀಗ 2ನೇ ಡೋಸ್ ಆರಂಭವಾಗಿದ್ದು, ಸೆಕೆಂಡ್ ಡೋಸ್ ಪಡೆದ ನಂತರವೇ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು. ಊರುಗಳಿಗೆ ತೆರಳಿರುವ ಸಾರಿಗೆ ನೌಕರರಿಗೆ ಆಯಾ ಜಿಲ್ಲೆಗಳಲ್ಲೇ ವ್ಯಾಕ್ಸಿನ್​ ಹಂಚಿಕೆ ಮಾಡಲಾಗಿದೆ ಅಂದರು.

ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿದರು

ಹಂತ ಹಂತವಾಗಿ ಅನ್​ಲಾಕ್: ರಾಜ್ಯದಲ್ಲಿ ಅನ್​ಲಾಕ್​ ವಿಚಾರವಾಗಿ ಮಾತನಾಡಿದ ಅವರು, ನಾಳೆ ಈ ಬಗ್ಗೆ ಅಂತಿಮ ತೀರ್ಮಾನವಾಗಲಿದೆ. ಏಕ ಕಾಲಕ್ಕೆ ಅನ್​ಲಾಕ್​ ಬೇಡ ಎಂದು ಸವದಿ ಹಂತ ಹಂತವಾಗಿ ಅನ್​ಲಾಕ್​ ಮಾಡಿದರೆ ಸೂಕ್ತ ಎಂದು ತಿಳಿಸಿದರು.

ಲಾಕ್​ಡೌನ್​ ಮಾಡಿದ್ದರಿಂದಲೇ ಸೋಂಕು ಕಡಿಮೆಯಾಗಿದೆ. ಅನ್​ಲಾಕ್​ ಬಗ್ಗೆ ತಜ್ಞರ ಜತೆ ನಾಳೆ ಸಮಾಲೋಚನೆ ಮಾಡಲಾಗುವುದು. ಅವರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.‌ ಜೂನ್ 7 ರೊಳಗೆ ಸೋಂಕಿನ ಪ್ರಮಾಣ 5 ಸಾವಿರದ ಒಳಗೆ ಬಂದರೆ ಮಾತ್ರ ಅನ್​ಲಾಕ್​ ಮಾಡಲಾಗುತ್ತೆ. ಸೋಂಕು ಕಡಿಮೆ ಆಗಲಿಲ್ಲ ಅಂದ್ರೆ ಅನ್​ಲಾಕ್​ ಇಲ್ಲ ಎಂದರು.

ಎಲ್ಲರಿಗೂ ಪರಿಹಾರ ನೀಡಲು ಸರ್ಕಾರ ಸಿದ್ದವಿದೆ: ಕೊರೊನಾ ಟೈಮಲ್ಲಿ ಸಾವನ್ನಪ್ಪಿದ ಸಿಬ್ಬಂದಿ ಪರಿಹಾರ ವಿಚಾರವಾಗಿ ಮಾತನಾಡಿದ ಸಚಿವರು, ಎಲ್ಲರಿಗೂ ಪರಿಹಾರ ನೀಡಲು ಸರ್ಕಾರ ಸಿದ್ದವಿದೆ. ಸದ್ಯಕ್ಕೆ ಆರ್ಥಿಕ ಸಮಸ್ಯೆ ಇದ್ದು, ಕೊರೊನಾದಿಂದ ಸಾವನ್ನಪ್ಪಿರುವ ಸಿಬ್ಬಂದಿ ‌ಕುಟುಂಬಕ್ಕೆ‌ ಪರಿಹಾರ ನೀಡಲಾಗುತ್ತದೆ ಅಂದರು. ಈ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ಎಂಡಿ ಶಿಖಾ ಉಪಸ್ಥಿತರಿದ್ದರು.

ಓದಿ: ಆಕ್ಸಿಜನ್ ಸಾಂದ್ರಕಗಳಿಗೆ IGST: ದೆಹಲಿ ನ್ಯಾಯಾಲಯದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.