ETV Bharat / state

ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು, ಭಾವೈಕ್ಯತೆಗೆ ಧಕ್ಕೆ ತರಬೇಡಿ : ಮಹಾ ಸಿಎಂಗೆ ಸೋಮಣ್ಣ ಖಡಕ್ ಎಚ್ಚರಿಕೆ

author img

By

Published : Dec 19, 2021, 7:05 PM IST

somanna
ಸಚಿವ ವಿ. ಸೋಮಣ್ಣ

ಕರ್ನಾಟಕದಲ್ಲಿ 1900ಕ್ಕೂ ಹೆಚ್ಚು ಸ್ಲಂ ಪ್ರದೇಶವಿದೆ. ಸರ್ಕಾರದ ವತಿಯಿಂದ 3.5 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ..

ಬೆಂಗಳೂರು : ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರಾಗಿದ್ದಾರೆ. ಕೀಳುಮಟ್ಟದ ರಾಜಕೀಯ ಮಾಡಿ ರಾಷ್ಟೀಯ ಭಾವ್ಯಕೈತೆಗೆ ಧಕ್ಕೆ ತರುವ ಪ್ರಯತ್ನ ಮಾಡಬೇಡಿ ಎಂದು ಮಹಾರಾಷ್ಟ ಮುಖ್ಯಮಂತ್ರಿ ಉದ್ಧವ್​​ ಠಾಕ್ರೆಗೆ ಸಚಿವ ವಿ. ಸೋಮಣ್ಣ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಭಾವಿ ವಾರ್ಡ್‌ನ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ರಂಗಮಂದಿರದಲ್ಲಿ ಸಚಿವ ವಿ.ಸೋಮಣ್ಣ ಕೋವಿಡ್‌ನಿಂದ ಮೃತಪಟ್ಟ ಕುಟುಂಬದವರಿಗೆ ಪರಿಹಾರ ಧನ ಮತ್ತು ಮಂಜೂರಾತಿ ಪತ್ರ ವಿತರಣೆ ಹಾಗೂ ಸ್ಲಂ ಬೋರ್ಡ್​ನಿಂದ ಹಕ್ಕು ಪತ್ರ ವಿತರಣೆ ಮಾಡಿದರು.

ನಂತರ ಮಾತನಾಡಿದ ಸಚಿವ ಸೋಮಣ್ಣ, ಭಾಷೆ-ಭಾಷೆಗಳ ನಡುವೆ ಸ್ನೇಹ-ಸಂಬಂಧ ಇರಬೇಕು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​​ ಠಾಕ್ರೆ ಅವರು ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ.

ರಾಷ್ಟ್ರೀಯತೆ, ಭಾವ್ಯಕೈತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಮಾಡಿದವರ ಮೇಲೆ ನಮ್ಮ ಸರ್ಕಾರ ಉಗ್ರ ಕ್ರಮ ಕೈಗೊಳ್ಳಲಿದೆ. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು ಎಂದರು.

ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ದಿಟ್ಟ ಕ್ರಮ, ದೂರದೃಷ್ಟಿ ಚಿಂತನೆಯಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹತೋಟಿಯಲ್ಲಿಡಲು ಕ್ರಮಕೈಗೊಂಡರು. ರೋಗದ ಬಗ್ಗೆ ಉದಾಸೀನದಿಂದ ಸಾವಿರಾರು ಜನರು ಮೃತಪಟ್ಟರು.

ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಸರೆಯಾಗಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್​ ಬಳಕೆದಾರ ಕುಟುಂಬಗಳಿಗೆ 1.5 ಲಕ್ಷ ಮತ್ತು ಎಪಿಎಲ್​ ಕಾರ್ಡ್​ ಬಳಕೆದಾರ ಕುಟುಂಬಕ್ಕೆ 50 ಸಾವಿರ ಸಹಾಯ ಹಸ್ತ ನೀಡಿ ನಿಮ್ಮೊಂದಿಗೆ ನಾವಿದ್ದೇನೆ ಎಂಬ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದೆ. ಕರ್ನಾಟಕದಲ್ಲಿ 1900ಕ್ಕೂ ಹೆಚ್ಚು ಸ್ಲಂ ಪ್ರದೇಶವಿದೆ. ನಮ್ಮ ಸರ್ಕಾರದ ವತಿಯಿಂದ 3.5 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಓದಿ: ಡಿಕೆಶಿ ಭೇಟಿಯಾದ ಮಾಜಿ ಸಚಿವ ಎಂ ಬಿ ಪಾಟೀಲ್ : ರಾಜಕೀಯ ವಿಚಾರಗಳ ಕುರಿತು ಮಾತುಕತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.