ETV Bharat / state

BSNLನಿಂದ Jioಗೆ ಪೋರ್ಟ್​ ಆಗುವಂತೆ ಪೊಲೀಸ್​ ಇಲಾಖೆಗೆ ರಾಜ್ಯ ಸರ್ಕಾರ ಆದೇಶ

author img

By

Published : Feb 22, 2023, 9:44 PM IST

ಪೊಲೀಸ್​ ಇಲಾಖೆಯಲ್ಲಿರುವ ಬಿಎಸ್​ಎನ್​ಎಲ್​ ನಂಬರ್​ಗಳನ್ನು ಹಂತ ಹಂತವಾಗಿ ರಿಲಾಯನ್ಸ್​ ಜಿಯೋಗೆ ಪೋರ್ಟ್​ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪೊಲೀಸ್​ ಇಲಾಖೆಗೆ ರಾಜ್ಯ ಸರ್ಕಾರ ಆದೇಶ
ಪೊಲೀಸ್​ ಇಲಾಖೆಗೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ದಶಕಗಳಿಂದ ಬಳಸುತ್ತಿರುವ ಬಿಎಸ್​ಎನ್​ಎಲ್‌ ಸೇವೆಯಿಂದ ಇದೀಗ ರಿಲಾಯನ್ಸ್​ ಜಿಯೋಗೆ ಪೋರ್ಟ್​ ಆಗುವಂತೆ ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ರಾಜ್ಯದೆಲ್ಲೆಡೆ‌ ಸರಿಯಾಗಿ ನೆಟ್​ವರ್ಕ್ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮಹತ್ವದ ನಿರ್ಧಾರ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಈ ವಿಷಯ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಯಿದೆ.

ಪೊಲೀಸ್ ಇಲಾಖೆಯಲ್ಲಿ ಒಟ್ಟು 38,347 ಬಿಎಸ್ಎನ್​ಎಲ್‌ ನಂಬರ್ ಬಳಸಲಾಗುತ್ತಿದೆ.‌ ಪೋರ್ಟ್ ಮಾಡುವ ಮುನ್ನ‌ ಕೆಲವು ಷರತ್ತುಗಳನ್ನು ಪಾಲಿಸಬೇಕೆಂದು‌ ಹೇಳಲಾಗಿದೆ. ಹಂತಹಂತವಾಗಿ ಜಿಯೊ ನಂಬರ್​ಗಳಿಗೆ ಪೋರ್ಟ್ ಮಾಡಬೇಕು.‌ ಅಲ್ಲದೇ, ಬಾಕಿಯಿರುವ ಹಣ ಪಾವತಿಸಬೇಕು. ಈ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ತಿಳಿಸಲಾಗಿದೆ.

ಇನ್ಸ್​ಪೆಕ್ಟರ್‌ ರಿಂದ ಹಿಡಿದು ಡಿಜಿವರೆಗೂ ಎಲ್ಲಾ ಹಂತದ ಪೊಲೀಸರು ಸರ್ಕಾರ ನೀಡಿದ್ದ ಬಿಎಸ್​ಎನ್​ಎಲ್ ಸಿಮ್ ಅನ್ನೇ ದಶಕಗಳಿಂದ ಉಪಯೋಗ ಮಾಡುತ್ತಿದ್ದರು. ಸದ್ಯ ಸರಿಯಾದ ನಿರ್ವಹಣೆ ಇಲ್ಲದೇ ಬಿಎಸ್​ಎನ್ಎಲ್ ಮೂಲೆಗುಂಪಾಗಿದ್ದು ಇದೇ ಕಾರಣಕ್ಕೆ ಸರ್ಕಾರ ತಮ್ಮ‌ ಸಿಮ್‌ಗಳನ್ನು ಬಿಎಸ್ಎನ್ಎಲ್ ಬಿಟ್ಟು ಜಿಯೊಗೆ ಪೋರ್ಟ್ ಆಗಲು ಮುಂದಾಗಿದೆ.

ಇದನ್ನೂ ಓದಿ: ಬೇಲೂರು ಸಕಲೇಶಪುರ ರೈಲ್ವೆ ಮಾರ್ಗ ಕೈಬಿಟ್ಟಿರುವ ಕ್ರಮ ಪ್ರಶ್ನಿಸಿದ್ದ ಸಾರ್ವಜನಿಕ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.