ಈ ಸರ್ಕಾರ ಅವಧಿ ಪೂರ್ಣಗೊಳಿಸುವುದು ಡೌಟ್: ಸಿದ್ದರಾಮಯ್ಯ

author img

By

Published : Aug 14, 2021, 4:06 PM IST

ಸಿದ್ದರಾಮಯ್ಯ

ಬಿಜೆಪಿಯಲ್ಲಿ ಶಾಸಕರೇ ಸ್ವಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದು, ಈ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಬೆಂಗಳೂರು: ಈ ಸರ್ಕಾರ ಅವಧಿ ಪೂರ್ಣಗೊಳಿಸುವುದು ಡೌಟ್ ಯಾವ ಟೈಮನಲ್ಲಿ ಬೇಕಿದ್ದರೂ ಬೀಳಬಹುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

‘ಸರ್ಕಾರ ಹೆಚ್ಚು ದಿನ ಉಳಿಯಲ್ಲ’
ಬೆಂಗಳೂರಿನ ಶಿವಾನಂದ ವೃತ್ತದ ಬಳಿಯಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಗೊಂದಲ ಮುಂದುವರೆದಿದೆ. ಆಡಳಿತ ಪಕ್ಷದ ಶಾಸಕರು ಅಸಮಾಧಾನ ಹೊರಹಾಕಿ ಪ್ರತಿಭಟನೆ ಮಾಡುತ್ತಿದ್ದಾರೆ. ಯತ್ನಾಳ್, ಯೋಗೇಶ್ವರ್, ಬೆಲ್ಲದ್, ರಾಮದಾಸ್ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಹೀಗಾಗಿ ಗೊಂದಲವಿದ್ದು, ಈ ಸರ್ಕಾರ ಹೆಚ್ಚು ದಿನ ಇರುವುದಿಲ್ಲ ಎಂದರು.

‘ಸ್ವಾತಂತ್ರ್ಯದ ಫಲಾನುಭವಿಗಳು ನಾವು’

ನಾಳೆ 75 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ. ಅನೇಕ ಜನರ ಹೋರಾಟದ ಫಲದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು, ನಾವು ಸ್ವಾತಂತ್ರ್ಯದ ಫಲಾನುಭವಿಗಳಾಗಿದ್ದೇವೆ. ಮಹಾತ್ಮ ಗಾಂಧೀಜಿ, ಮೌಲಾನಾ, ಸುಭಾಶ್ಚಂದ್ರ ಬೋಸ್, ತಿಲಕರು ಸೇರಿದಂತೆ ಹಲವಾರು ಜನರು ಯಾವುದೇ ಅಧಿಕಾರದ ಆಸೆಯಿಲ್ಲದೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಅವರೆಲ್ಲರಿಗೂ ನಾನು ನಮನಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

‘ಸಂವಿಧಾನದ ಆಶಯ ಈಡೇರಿಲ್ಲ’

ಸಂವಿಧಾನದ ಆಶಯಗಳು ಇನ್ನೂ ಈಡೇರಿಲ್ಲ. ದೇಶಕ್ಕೆ ನಮ್ಮನ್ನು ನಾವು ಅರ್ಪಣೆ ಮಾಡಿಕೊಳ್ಳುವ ಸಮಯ ಬಂದಿದೆ. ದೇಶವನ್ನು ಪ್ರೀತಿಸುವ ಎಲ್ಲರನ್ನೂ ಒಂದೇ ರೀತಿ ನೋಡಬೇಕು. ಜನತೆಗೆ 75 ನೇ ಸ್ವಾತಂತ್ರ್ಯೋತ್ಸವ ದಿನದ ಶುಭಾಶಯಗಳನ್ನು ಕೋರಿದರು.

‘6 ವರ್ಷ ಮೇಲ್ಪಟ್ಟ ಮಕ್ಕಳಿಗೆ ವ್ಯಾಕ್ಸಿನ್ ಕೊಡಿ’

ಸರ್ಕಾರ ಎಲ್ಲರಿಗೂ ಕಡ್ಡಾಯವಾಗಿ ವ್ಯಾಕ್ಸಿನೇಷನ್‌ ಕೊಡಬೇಕು. ಆರು ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೂ ಲಸಿಕೆ ಹಾಕಬೇಕು. ವ್ಯಾಕ್ಸಿನ್ ಒಂದೇ ಕೊರೊನಾ ವಿರುದ್ಧ ಹೋರಾಡಲು ಇರುವ ಅಸ್ತ್ರ. ವ್ಯಾಕ್ಸಿನ್ ಕೊಡದೇ ಬರಿ ಮೀಟಿಂಗ್ ಮಾಡುವುದರಿಂದ ಪ್ರಯೋಜನವಿಲ್ಲ ಎಂದು ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕುಟುಕಿದರು.

‘ಗಡಿಯಲ್ಲಿ ಬಿಗಿ ಕ್ರಮ ಕೈಗೊಳ್ಳಿ’

ಕೊಡುಗು, ದಕ್ಷಿಣ ಕನ್ನಡ, ಮೈಸೂರು ಸೇರಿದಂತೆ ಗಡಿ ಭಾಗದ ಜಿಲ್ಲೆಗಳಲ್ಲಿ ಬಿಗಿಯಾದ ಕ್ರಮಗಳನ್ನ ಕೈಗೊಳ್ಳಬೇಕು. ಕೇರಳದಲ್ಲಿ ಇನ್ನೂ ಕೇಸ್ ಪ್ರಮಾಣ ಹೆಚ್ಚಾಗುತ್ತಿದೆ. ಮೂರನೇ ಅಲೆ ಬಾರದ ರೀತಿಯಲ್ಲಿ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ವಿಕೇಂಡ್ ಲಾಕ್​ಡೌನ್ ಘೋಷಣೆ ಮಾಡಿದರೆ ಸಾಲದು. ಕಟ್ಟುನಿಟ್ಟಿನ ನಿಯಮ ಜಾರಿ ಮಾಡಬೇಕು. ಇನ್ನೂ ಜನರಿಗೆ ಸೋಂಕಿನ ಬಗ್ಗೆ ಅರಿವು ಬಂದಿಲ್ಲ. ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಬೇಕು. ವ್ಯಾಕ್ಸಿನೇಷನ್‌ ಕೊರತೆ ಹೆಚ್ಚಿದೆ. ರಾಜ್ಯದಲ್ಲಿ ವ್ಯಾಕ್ಸಿನ್ ಕೊಡಿಸುವ ಜವಾಬ್ದಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರದ್ದು ಎಂದರು.

‘ಶಾಲೆ ತೆರೆಯುವುದು ಬೇಡ’

ಕೊರೊನಾ ನಿಯಂತ್ರಣಕ್ಕೆ ಬಾರದಿದ್ದರೆ ಶಾಲೆ ಓಪನ್ ಮಾಡುವುದು ಬೇಡ. ಕೊರೊನಾ ಕಡಿಮೆ ಆದರೆ ಶಾಲೆ ಓಪನ್ ಮಾಡಿ, ಇಲ್ಲದಿದ್ದರೆ ಬೇಡ. ಗುಂಪು ಸೇರುವ ಕಾರ್ಯಕ್ರಮಗಳಿಗೆ ಅನುಮತಿ ಕೊಡಬೇಡಿ. ಹಬ್ಬ - ಜಾತ್ರೆಗಳನ್ನ ಒಂದು ವರ್ಷ ಮಾಡದಿದ್ದರೆ ಏನು ಸಮಸ್ಯೆ ಆಗಲ್ಲ. ಈ ಬಾರಿ ಮನೆಯಲ್ಲಿಯೇ ಗಣಪತಿ ಕೂರಿಸಿ, ಹಬ್ಬ ಆಚರಿಸಿ ಎಂದು ಜನತೆಗೆ ಸಲಹೆ ನೀಡಿದರು.

‘ಈಶ್ವರಪ್ಪ ಜಾತಿಗಣತಿ ವರದಿ ಸ್ವೀಕರಿಸಲಿ’

ನನ್ನ ಅವಧಿಯಲ್ಲಿ ಜಾತಿ ಜನಗಣತಿ ವರದಿ ಬಂದಿರಲಿಲ್ಲ. ಕುಮಾರಸ್ವಾಮಿ ಕಾಲದಲ್ಲಿ ಬಂತು. ಆದರೆ, ಆಗ ಸ್ವೀಕರಿಸಲಿಲ್ಲ. ಈಗ ಈಶ್ವರಪ್ಪ ಸಚಿವರಾಗಿದ್ದಾರೆ. ಇವರು ಕುರುಬರಿಗೆ ಎಸ್​ಟಿ ಮೀಸಲಾತಿ ಹೋರಾಟ ಮಾಡಿದ್ರು. ಈಗ ಜಾತಿ ಜನಗಣತಿ ವರದಿ ಸ್ವೀಕಾರ ಮಾಡಲಿ. ನಾನು ಸಮ್ಮಿಶ್ರ ಸರ್ಕಾರದಲ್ಲಿ ಸಚಿವನಾಗಿದ್ನಾ? ಈಗ ಈಶ್ವರಪ್ಪ ಸಚಿವನಾಗಿದ್ದು, ಒತ್ತಾಯ ಮಾಡಲಿ ಎಂದು ಹೇಳಿದರು.

‘ಬಿಜೆಪಿಗರ ಜತೆ ರಾಜಕೀಯ ಚರ್ಚೆ ಇಲ್ಲ’

ನಾನು ಎಂಟಿಬಿ ನಾಗರಾಜ್ ಒಂದೇ ಕಾರ್ಯಕ್ರಮಕ್ಕೆ ಹೋಗಿದ್ವಿ. ಶರತ್ ಬಚ್ಚೇಗೌಡ, ವೀರಪ್ಪ ಮೊಯ್ಲಿ ಎಲ್ಲರೂ ಇದ್ರು. ಬಿಜೆಪಿಯವರ ಜತೆ ರಾಜಕೀಯ ಚರ್ಚೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Video: ಗುಬ್ಬಿ ಶಾಸಕ ಶ್ರೀನಿವಾಸ್​-ತುಮಕೂರು ಸಂಸದ ಬಸವರಾಜು ಜಟಾಪಟಿ..ಸಾರ್ವಜನಿಕ ಕಾರ್ಯಕ್ರಮದಲ್ಲೇ ಜೋರು ಜಗಳ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.