ETV Bharat / state

ಬೆಂಗಳೂರು :ಸ್ಟಾರ್ಟ್‌ ಅಪ್‌ ಸಂಸ್ಕೃತಿಯನ್ನು ಬೆಳೆಸುವಲ್ಲಿ ರಾಜ್ಯ ಸರ್ಕಾರದ ಸಾಧನೆ ಮೇಲುಗೈ... ಶ್ಲಾಘಿಸಿದ ವಿಜ್ಞಾನಿಗಳು

author img

By ETV Bharat Karnataka Team

Published : Dec 1, 2023, 3:25 PM IST

Updated : Dec 1, 2023, 3:36 PM IST

ಬೆಂಗಳೂರು ಟೆಕ್‌ ಸಮಿಟ್‌-2023 ಕಾರ್ಯಾಗಾರ
ಬೆಂಗಳೂರು ಟೆಕ್‌ ಸಮಿಟ್‌-2023 ಕಾರ್ಯಾಗಾರ

ಈಗಾಗಲೇ ಕರ್ನಾಟಕವು ಸ್ಟಾರ್ಟ್‌ಅಪ್‌ ಹಬ್‌ ಆಗಿದ್ದು, ಹೊಸ ಚಿಂತನೆ ಹೊಂದಿರುವವರಿಗೆ ವೇದಿಕೆ ಮಾಡಿಕೊಡುತ್ತಿದೆ ಎಂದು ಡಾ. ಆರ್‌.ಎ. ಮಶೇಲ್ಕರ್‌ ಹೇಳಿದ್ದಾರೆ.

ಬೆಂಗಳೂರು : ಕರ್ನಾಟಕವು ಸ್ಟಾರ್ಟ್-ಅಪ್ ಸಂಸ್ಕೃತಿಯಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿದ್ದು, ಹೊಸಬರಿಗೆ ಉತ್ತಮ ವೇದಿಕೆಯಾಗಿದೆ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋದನಾ ಮಂಡಳಿಯ (ಸಿಎಸ್‌ಐಆರ್‌) ಮಾಜಿ ಮಹಾ ನಿರ್ದೇಶಕ ಡಾ. ಆರ್‌.ಎ. ಮಶೇಲ್ಕರ್‌ ಅಭಿಪ್ರಾಯ ಪಟ್ಟರು.

ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್‌ ಸಮಿಟ್‌-2023 ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕರ್ನಾಟದ ನಾವಿನ್ಯತೆಗೆ ಹೆಸರುವಾಸಿಯಾಗಿದ್ದು, ಹೊಸ ಹೊಸ ಚಿಂತನೆ ಹೊಂದಿದ ಪ್ರತಿಭೆಗಳು ಇಲ್ಲಿ ಸ್ಟಾರ್ಟ್‌ಅಪ್‌ ಸ್ಥಾಪಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಈ ಪೈಕಿ ಪ್ರತಿಶತ 40ರಷ್ಟು ಪ್ರತಿಭೆಗಳು ಕರ್ನಾಟಕದಲ್ಲಿಯೇ ನೆಲೆಯೂರಿದ್ದು, ಐಟಿ ಸೇರಿದಂತೆ ಹಲವು ಕ್ಷೇತ್ರವನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುತ್ತಿದ್ದಾರೆ. ರಾಜ್ಯ ಸರ್ಕಾರವು ಸ್ಟಾರ್ಟ್‌ಅಪ್‌ ಕ್ಷೇತ್ರಕ್ಕೆ ಇನ್ನಷ್ಟು ಆದ್ಯತೆ ನೀಡಲು ಐಪಿ ಪಾಲಿಸಿಯಲ್ಲಿ ಒಂದಷ್ಟು ಬದಲಾವಣೆ ತಂದು, ಎಸ್‌ಎಂಇಎಸ್‌ನಲ್ಲಿ ಹೊಸ ಚಿಂತನೆ ನೀಡುವವರಿಗೆ ಸಬ್ಸಿಡಿ ನೀಡುವ ಯೋಜನೆಯನ್ನೂ ಜಾರಿಗೆ ತರುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಈಗಾಗಲೇ ಕರ್ನಾಟಕವು ಸ್ಟಾರ್ಟ್‌ಅಪ್‌ ಹಬ್‌ ಆಗಿದ್ದು, ಹೊಸ ಚಿಂತನೆ ಹೊಂದಿರುವವರಿಗೆ ವೇದಿಕೆ ಮಾಡಿಕೊಡುತ್ತಿದೆ, ಈ ಬೆಳವಣಿಗೆ ಇನ್ನಷ್ಟು ವೇಗ ಪಡೆದುಕೊಳ್ಳುವ ಅನಿವಾರ್ಯತೆ ಇದ್ದು, ಈ ಮೂಲಕ ಹೊಸಬರಿಗೆ ಮತ್ತಷ್ಟು ಉತ್ತೇಜನ ನೀಡಬೇಕಿದೆ, ಸ್ಟಾರ್ಟ್‌ಅಪ್‌ ಸಂಸ್ಕೃತಿಗೆ ಬಲ ನೀಡಲು ಇದರ ನೀತಿಗಳ ಬದಲಾವಣೆಯ ಅವಶ್ಯಕತೆ ಇದೆ ಎಂದು ಹೇಳಿದರು.

ಇನ್ನು, ರಾಜ್ಯದಲ್ಲಿ ಸ್ಟಾರ್ಟ್‌ಅಪ್‌ ಬೆಳವಣಿಗೆಗೆ ಉತ್ತಮ ಪರಿಸರವಿದೆ, ಆದರೆ, ಸ್ಟಾರ್ಟ್‌ಅಪ್‌ ಯೋಜನೆ ಹೊಂದಿರುವವರು ತಮ್ಮ ಧ್ಯೇಯವಾಕ್ಯ ಬ್ರೇಕಿಂಗ್‌ ಬೌಂಡರೀಸ್‌" ಎನ್ನುವುದರ ಜೊತೆಗೆ, ತಮ್ಮ ಮನಸ್ಸಿನಲ್ಲಿಯೂ ಆ ಕಿಚ್ಚು ಹೊಂದಿರಬೇಕು, ಉತ್ಕೃಷ್ಟತೆಯ ಏಣಿಗೆ ಯಾವುದೇ ಮಿತಿಗಳಿಲ್ಲ, ಕಂಪನಿಗಳು ಒಂದೇ ಬಾರಿಗೆ ಯಶಸ್ಸು ಕಾಣಬೇಕು ಎಂಬ ಹಂಬಲ ಹೊಂದಿರುವುದಕ್ಕಿಂತ, ಹಂತ ಹಂತವಾಗಿ ಮುನ್ನಡೆಯುವುದನ್ನು ಕಲಿಯಬೇಕು ಎಂದು ಕಿವಿ ಮಾತು ಹೇಳಿದರು.

ನಮ್ಮ ದೇಶವು ಅತ್ಯಧಿಕ ಬೌದ್ಧಿಕ ಬಂಡವಾಳವನ್ನು ಹೊಂದಿದೆ, ವಿದೇಶಿಗಳಿಗೆ ಹೋಲಿಸಿದರೆ ಭಾರತದಲ್ಲಿನ ಸಂಪನ್ಮೂಲ ಅತ್ಯಧಿಕವಾಗಿದ್ದು, ಇದರ ಬಳಕೆ ಸರಿಯಾದ ರೀತಿಯಲ್ಲಾಗಬೇಕು, ನಮ್ಮವರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಾಕಷ್ಟುಉದಾಹರಣೆಗಳಿವೆ, ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯವು ಒಂದು ವರ್ಷದೊಳಗೆ ಇಂಟರ್‌ ನ್ಯಾಷನಲ್ ಕನ್ಸಲ್ಟಿಂಗ್ ಆರ್ಗನೈಸೇಶನ್ ಆಗಿರುವ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಅಷ್ಟೇ ಏಕೆ, ನಮ್ಮ ದೇಶದಲ್ಲಿ ಆನ್‌ಲೈನ್‌ ವಹಿವಾಟು ಯುಪಿಐ ಆವಿಷ್ಕಾರದ ಬಳಿಕ 2022 ರಲ್ಲಿ 74.05 ಶತಕೋಟಿ ವಹಿವಾಟುಗಳನ್ನು ನಡೆದಿದೆ, ಇದು ವಿಶ್ವದ ವಹಿವಾಟಿನ ಶೇ.46ರಷ್ಟಿದೆ. ನಮ್ಮಲ್ಲಿನ ಸಾಧನೆಯಿಂದಾಗಿ ಇದೀಗ ನಮ್ಮ ಯುಪಿಐ ಭೂತಾನ್ ಮತ್ತು ಸಿಂಗಾಪುರದಲ್ಲಿ ಅಂಗೀಕರಿಸಲ್ಪಟ್ಟಿದೆ, ಇದು ನಮ್ಮ ದೇಶದ ಸಾಧನೆ ಎಂದು ತಿಳಿಸಿದರು.

ಸ್ಟಾರ್ಟ್‌ಅಪ್ಸ್‌ಗಳು ಯಶಸ್ಸಿನ ಹಾದಿ ಕಾಣಬೇಕಿದ್ದರೆ ಆರು ತತ್ವಗಳನ್ನು ಎಂದಿಗೂ ಮರೆಯಬಾರದು, ಸುಲಭವಾಗಿ ಕೈಗೆಟುಕುವ ಕೊಡುಗೆಗಳನ್ನು ಯೋಜಿಸಿ, ವ್ಯವಹಾರ ಸುಸ್ಥಿರವಾಗಿರಿಸಿ, ನೀಡುವ ಉತ್ಪನ್ನ ಅಥವಾ ಸೇವೆಯು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟಿರಲಿ, ಉತ್ತಮ ಮಾರುಕಟ್ಟೆ ಸ್ಟಾರ್ಟರ್ಜಿ ಹೊಂದಿರಲಿ, ವಿಭಿನ್ನ ವ್ಯಾಪಾರ ಕಲ್ಪನೆಯನ್ನು ಹೊಂದಿದೆ ಎಂದು ಶ್ಲಾಘಿಸಿದರು.

ಇದನ್ನೂ ಓದಿ : 2030ರ ವೇಳೆಗೆ ಇಂಗಾಲ ಹೊರಸೂಸುವಿಕೆ ಶೇ. 45ರಷ್ಟು ತಗ್ಗಿಸುವ ಗುರಿ: ಡಾ. ಎಜಿಲ್ ಸುಬ್ಬಿಯಾನ್

Last Updated :Dec 1, 2023, 3:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.