ETV Bharat / state

ಇಸ್ರೋ ಮುಖ್ಯಸ್ಥರಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡ ಎಸ್.ಸೋಮನಾಥ್

author img

By

Published : Jan 14, 2022, 9:45 PM IST

ಇಸ್ರೋದ ಹಾಲಿ ಅಧ್ಯಕ್ಷರಾದ ಕೆ.ಶಿವನ್ ಅವರು ಶುಕ್ರವಾರ ಎಸ್.ಸೋಮನಾಥ್​​ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

S. Somanath who officially took over the charge as head of ISRO
ಇಸ್ರೋದ ಮುಖ್ಯಸ್ಥರಾಗಿ ಎಸ್. ಸೋಮನಾಥ್

ಬೆಂಗಳೂರು: ರಾಕೆಟ್‌ ವಿಜ್ಞಾನಿ ಸೋಮನಾಥ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನೂತನ ಮುಖ್ಯಸ್ಥರಾಗಿ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಕೇಂದ್ರ ಸರ್ಕಾರ ಗುರುವಾರ ನೇಮಿಸಿತ್ತು. ಇಂದು (ಶುಕ್ರವಾರ) ಇಸ್ರೋ ಅಧ್ಯಕ್ಷರಾಗಿ ಎಸ್.ಸೋಮನಾಥ್​​ ಅಧಿಕಾರವಹಿಸಿಕೊಂಡರು.

ಸೋಮನಾಥ್ ಅವರು ಕೇರಳ ಕೊಲ್ಲಂನ ಟಿ.ಕೆ.ಎಂ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ ಪದವೀಧರರಾಗಿದ್ದು, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐ.ಐ.ಎಸ್.ಸಿ)ಯಲ್ಲಿ ಇಂಜಿನಿಯರಿಂಗ್​​ನಲ್ಲಿ ಮಾಸ್ಟರ್ಸ್ ಮಾಡಿದ್ದಾರೆ. ಇವರು 1985ರಲ್ಲಿ ಇಸ್ರೋ ಸೇರಿದ್ದರು. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿ.ಎಸ್.ಎಲ್.ವಿ) ಮತ್ತು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿ.ಎಸ್.ಎಲ್.ಜಿ) ಯೋಜನೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.

ಜೂನ್ 2010 ರಿಂದ 2014 ರವರೆಗೆ ಜಿ.ಎಸ್.ಎಲ್.ವಿ-ಎಂ.ಕೆ III ನ ಯೋಜನಾ ನಿರ್ದೇಶಕರಾಗಿದ್ದರು. ಜೂನ್ 2015 ರಲ್ಲಿ ಇಸ್ರೋದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (ಎಲ್.ಪಿ.ಎಸ್.ಸಿ), ತಿರುವನಂತಪುರಂನ ನಿರ್ದೇಶಕರಾಗಿ ನೇಮಕಗೊಂಡಿದ್ದರು.

ಇದನ್ನೂ ಓದಿ: ಬೆಂಗಳೂರು: ಬ್ಯಾಂಕ್‌ ಮ್ಯಾನೇಜರ್‌ಗೆ ಚಾಕು ತೋರಿಸಿ 4 ಲಕ್ಷ ಹಣದೊಂದಿಗೆ ಪರಾರಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.