ETV Bharat / state

ರೈಸ್ ಪುಲ್ಲಿಂಗ್ ದಂಧೆಗೂ ಬಂತು ಹೈಟೆಕ್ ಸ್ಪರ್ಶ: ಐವರು ಆರೋಪಿಗಳನ್ನು ಬಂಧಿಸಿದ ಸಿಸಿಬಿ

author img

By

Published : Jul 21, 2022, 3:18 PM IST

ಕಳೆದ ಎರಡ್ಮೂರು ವರ್ಷಗಳಿಂದ ರೈಸ್​​ ಪುಲ್ಲಿಂಗ್​​ ದಂಧೆ ನಡೆಸುತ್ತಿದ್ದ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ ರೈಸ್ ಪುಲ್ಲಿಂಗ್‌ ಮಿಷನ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ.

The accused were running rice pulling business for two or three years
ರೈಸ್ ಪುಲ್ಲಿಂಗ್ ದಂಧೆಗೂ ಬಂತು ಹೈಟೆಕ್ ಸ್ಪರ್ಶ

ಬೆಂಗಳೂರು: ಬಯೋಮೆಟ್ರಿಕ್ ಸಿಸ್ಟಂ‌ ಅಳವಡಿಸಿ ವ್ಯವಸ್ಥಿತವಾಗಿ ಪ್ಯಾಕ್ ಮಾಡಿ ಹೈಟೆಕ್ ಮಾದರಿಯಲ್ಲಿ ರೈಸ್ ಪುಲ್ಲಿಂಗ್ ದಂಧೆ ನಡೆಸುತ್ತಿದ್ದ, ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜನರ ಮೂಢನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಕಳೆದ ಎರಡು - ಮೂರು ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದರು ಎನ್ನಲಾಗ್ತಿದೆ. ಆರೋಪಿಗಳಾದ ವಂಶಿ ಸಾಯಿ, ರಾಮ್ ಸಾಯಿ ನಾಯ್ಡು, ವರುಣ್, ಕೃಷ್ಣ ಹಾಗೂ ಅಶೋಕ್ ಬಂಧಿತರು.

ಇವರಿಂದ ರೈಸ್ ಪುಲ್ಲಿಂಗ್‌ ಮಿಷನ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ ಎಂದು ನಗರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದ್ದಾರೆ‌. ಆರೋಪಿಗಳೆಲ್ಲರೂ ಬಿ.ಟೆಕ್, ಏರೋನಾಟಿಕ್ ಇಂಜಿನಿಯರ್ ಹಾಗೂ ಡಿಪ್ಲೋಮಾ ವ್ಯಾಸಂಗ ಮಾಡಿದ್ದಾರೆ.

ಕೆಲಸ ಸಿಗದೇ ನಿರುದ್ಯೋಗಿಗಳಾಗಿದ್ದ ಆರೋಪಿಗಳು ಸುಲಭವಾಗಿ ಹಣ ಸಂಪಾದನೆ ಮಾಡಲು ಅಕ್ರಮದ ದಾರಿ ಹಿಡಿದಿದ್ದರು. ಇತ್ತೀಚೆಗೆ ಸೋಲದೇವನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಆರೋಪಿಗಳು ಸಾರ್ವಜನಿಕರನ್ನು ಸಂಪರ್ಕಿಸಿ ಅಮೆರಿಕದ ಎಲ್‌ ಅಂಡ್ ಎಂ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸುತ್ತಿದ್ದರು.

ನಗರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ

ತಮ್ಮ ಬಳಿ ಬೆಲೆಬಾಳುವ ರೈಸ್ ಪುಲ್ಲಿಂಗ್ ಮಾಡುವ ವಸ್ತುವಿದ್ದು, ಇದನ್ನ ಏರೋನಾಟಿಕ್ಸ್ ಇಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ರಾಕೆಟ್ ಉಡಾವಣೆಗೆ ಬಳಸಲಾಗುತ್ತದೆ. ಇದಕ್ಕೆ ವಿದೇಶದಲ್ಲಿ ಹೆಚ್ಚು ಡಿಮ್ಯಾಂಡ್ ಇದೆ ಎಂದು ಹೇಳಿ ಜನರನ್ನು ಯಾಮಾರಿಸುತ್ತಿದ್ದರು. ಇದೇ ರೀತಿ, ನಗರದ ಮಹಿಳೆಗೆ 35 ಲಕ್ಷ ರೂ.ಗೆ ಮಾರಾಟ ಮಾಡಲು ಡೀಲ್‌ ಕುದುರಿಸಿಕೊಂಡ ಆರೋಪಿಗಳು ಮುಂಗಡವಾಗಿ ಐದು ಲಕ್ಷ ಪಡೆದಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ ಸಿಸಿಬಿ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದೆ‌.

ಇದನ್ನೂ ಓದಿ: ಬಾರ್​ಗೆ ಬಂದು ಕಂಠಪೂರ್ತಿ ಕುಡಿದ.. ಬಿಲ್​ ಕೊಟ್ಟ ಸಪ್ಲೈಯರ್​ಗೆ ಚಾಕುವಿನಿಂದ ಇರಿದು ಕೊಂದ

ರೈಸ್ ಪುಲ್ಲಿಂಗ್ ಮಷಿನ್​​ಗೂ ಬಯೋಮೆಟ್ರಿಕ್ ಸಿಸ್ಟಂ: ರೈಸ್ ಪುಲ್ಲಿಂಗ್ ಮಾರಾಟ ಮಾಡಲು ಆರೋಪಿಗಳು ಐಡಿಯಾವೊಂದನ್ನು ಮಾಡಿದ್ದರು. ತಾಮ್ರ ಬಣ್ಣದ ರೀತಿಯ ಬಿಂದಿಗೆಯನ್ನು ಕಾರ್ಬನ್ ಬಾಕ್ಸ್​​​ನಿಂದ ವ್ಯವಸ್ಥಿತವಾಗಿ ಪ್ಯಾಕ್ ಮಾಡಿ, ದೊಡ್ಡ ಪೆಟ್ಟಿಗೆಯಲ್ಲಿ ಇಟ್ಟು ಅದಕ್ಕೆ ಬಯೋಮೆಟ್ರಿಕ್ ರೀತಿ ಫಿಂಗರ್ ಫ್ರಿಂಟ್ ಸಿಸ್ಟಂ ಅಳವಡಿಸಿದ್ದರು. ಅದಕ್ಕೆ ಪಾಸ್​​ವರ್ಡ್ ಸಹ ಇಟ್ಟುಕೊಂಡಿದ್ದರು. ರೈಸ್ ಪುಲ್ಲಿಂಗ್ ಮಿಷನ್ ನೋಡಬೇಕಾದರೆ ಮುಂಗಡವಾಗಿ ಇಂತಿಷ್ಟು ಹಣ ನೀಡಬೇಕಾಗಿತ್ತು. ಹೀಗೆ ಹೈಟೆಕ್‌ ಮಾದರಿಯಲ್ಲಿ ದಂಧೆ ನಡೆಸಿ ಆಂಧ್ರ ಹಾಗೂ ಕರ್ನಾಟಕದಲ್ಲಿ ಹಲವರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.