ETV Bharat / state

ಬೆಂಗಳೂರಿನಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಭರ್ಜರಿ ಮತ ಪ್ರಚಾರ

author img

By

Published : May 8, 2023, 8:13 AM IST

ಬೆಂಗಳೂರಿನಲ್ಲಿ ಭಾನುವಾರ ರಾಹುಲ್​ ಗಾಂಧಿ ಹಾಗು ಪ್ರಿಯಾಂಕಾ ಗಾಂಧಿ ವಿವಿಧ ನಗರಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.

ಕಾಂಗ್ರೆಸ್​​ ಚುನಾವಣೆ ಪ್ರಚಾರ
ಕಾಂಗ್ರೆಸ್​​ ಚುನಾವಣೆ ಪ್ರಚಾರ

ಬೆಂಗಳೂರು: ಎಐಸಿಸಿ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಮತ್ತು ಸಹೋದರಿ ಪ್ರಿಯಾಂಕ ಗಾಂಧಿ ಭಾನುವಾರ ಬೆಂಗಳೂರು ನಗರದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮತ ಪ್ರಚಾರ ನಡೆಸಿದರು. ರಾಹುಲ್ ಅವರು ಆನೇಕಲ್ ಹಾಗೂ ಪುಲಕೇಶಿ ನಗರದಲ್ಲಿ ಪ್ರಚಾರ ನಡೆಸಿ ಶಿವಾಜಿನಗರಕ್ಕೆ ಆಗಮಿಸಿದರು. ಪ್ರಿಯಾಂಕ ಗಾಂಧಿ ಬೆಂಗಳೂರಿನ ಮಹದೇವಪುರ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್‌ಶೋ ಮೂಲಕ ಮತಬೇಟೆ ನಡೆಸಿದರು. ಈ ಕಾರ್ಯಕ್ರಮದ ಬಳಿಕ ಶಿವಾಜಿನಗರಕ್ಕೆ ಆಗಮಿಸಿ ರಾಹುಲ್ ಗಾಂಧಿ ಜೊತೆ ಸೇರಿ ಜಂಟಿ ಸಂವಾದದಲ್ಲಿ ಭಾಗಿಯಾದರು.

ಇಬ್ಬರು ನಾಯಕರು ರಾಜ್ಯ ಹಾಗೂ ರಾಷ್ಟ್ರೀಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ಈ ಮೂಲಕ 40% ಸರ್ಕಾರಕ್ಕೆ ಅಂತ್ಯಹಾಡಿ ಎಂದು ಕರೆಕೊಟ್ಟರು. ಪುಲಕೇಶಿನಗರದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿಯವರಲ್ಲಿ ಎಷ್ಟು ದ್ವೇಷ ಇದೆಯೋ ಅದರ ನೂರುಪಟ್ಟು ಪ್ರೀತಿ ನಮ್ಮ ಹೃದಯದಲ್ಲಿದೆ. ದ್ವೇಷವನ್ನು ದ್ವೇಷದಿಂದ ತೆಗೆಯಲು ಸಾಧ್ಯವಿಲ್ಲ, ಪ್ರೀತಿಯಿಂದ ಮಾತ್ರ ಅದು ಸಾಧ್ಯ. ದ್ವೇಷದ ಮಾರುಕಟ್ಟೆಯಲ್ಲಿ ನಾವು ಪ್ರೀತಿಯ ಅಂಗಡಿ ತೆರೆಯುತ್ತೇವೆ ಎಂದರು.

ಬಿಜೆಪಿಯ ಹಿಂಸೆಯ ರಾಜಕಾರಣ ಮಣಿಪುರದಲ್ಲಿ ಗೊತ್ತಾಗ್ತಿದೆ. ಮಣಿಪುರ ಹೊತ್ತಿ ಉರಿಯುತ್ತಿದೆ. ಆದ್ರೆ ಪ್ರಧಾನಿ ಹಾಗೂ ಗೃಹ ಸಚಿವರು ಕರ್ನಾಟಕದ ಬೀದಿಗಳಲ್ಲಿ ಮತ ಕೇಳ್ತಿದ್ದಾರೆ. ಬಿಜೆಪಿ ಎಲ್ಲೆಲ್ಲಿ ಹೋಗುತ್ತದೋ ಅಲ್ಲೆಲ್ಲ ಜನರನ್ನು ಒಡೆಯುತ್ತದೆ, ದ್ವೇಷ ಹರಡ್ತಾರೆ. ಅವರ ಕೆಲಸ ದ್ವೇಷ ಹರಡುವುದು, ನಮ್ಮ ಕೆಲಸ ಜನರನ್ನು ಜೋಡಿಸುವುದು ಎಂದರು.

ಇದನ್ನೂ ಓದಿ: ಜೆ.ಪಿ ನಡ್ದಾ ಮೇಲಿಂದ ಮೇಲೆ ಮತದಾರರಿಗೆ ಬೆದರಿಕೆ ಒಡ್ಡುತ್ತಿದ್ದಾರೆ: ಸಿದ್ದರಾಮಯ್ಯ ಆರೋಪ

ನಡ್ಡಾ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ದಾ ಅವರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸೋತರೆ ಯೋಜನೆಗಳೆಲ್ಲ ಬಂದ್ ಎಂಬ ನಡ್ಡಾ ಅವರ ಹೇಳಿಕೆ ಸ್ಪಷ್ಟವಾಗಿ ಮತದಾರರಿಗೆ ಒಡ್ಡಿರುವ ಬೆದರಿಕೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶೀರ್ವಾದ ಬೇಕಿದ್ದರೆ ರಾಜ್ಯದಲ್ಲಿ ಬಿಜೆಪಿಗೆ ಮತ ಹಾಕಿ ಎಂದು ಇತ್ತೀಚೆಗಷ್ಟೇ ಅವರು ಹೇಳಿದ್ದರು. ಈ ಕುರಿತು ಚುನಾವಣಾ ಆಯೋಗ ತಕ್ಷಣವೇ ಮಧ್ಯೆ ಪ್ರವೇಶಿಸಿ ಬಿಜೆಪಿಯ ಎಲ್ಲ ಅಭ್ಯರ್ಥಿಗಳನ್ನು ಅನರ್ಹಗೊಳಿಸುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಕರ್ನಾಟಕವನ್ನು ಭಾರತದಿಂದ ಪ್ರತ್ಯೇಕಿಸಲು ನೋಡುತ್ತಿದೆ: ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.