ETV Bharat / state

ನಾನು ಉಸ್ತುವಾರಿ ಆಕಾಂಕ್ಷಿ ಅಲ್ಲ, ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ : ಸಚಿವ ಆರ್ ಅಶೋಕ್

author img

By

Published : Oct 9, 2021, 10:44 PM IST

Updated : Oct 10, 2021, 6:43 AM IST

r-ashok-statement-on-bangalore-incharge-minister
ಸಚಿವ ಆರ್ ಅಶೋಕ್

ಬೆಂಗಳೂರು ಉಸ್ತುವಾರಿ ಯಾರಾದರೇನು?. ಯಾರು ಉಸ್ತುವಾರಿ ಆಗಿ ಏನು ಆಗಬೇಕಾಗಿದೆ?. ಒಟ್ಟಾಗಿದ್ದು ಬಿಬಿಎಂಪಿ ಚುನಾವಣೆ ಗೆಲ್ಲೋದು ಮುಖ್ಯ. ಬಿಡಿಎ ಅಧ್ಯಕ್ಷ ಸ್ಥಾನ ಬದಲಾಗೋದಿಲ್ಲ. ಶಾಸಕರಲ್ಲದ ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ..

ಬೆಂಗಳೂರು : ರಾಜಧಾನಿ ಬೆಂಗಳೂರು ಉಸ್ತುವಾರಿ ಸಂಬಂಧ ಯಾರೋ ಕೆಲವರು ಗೊಂದಲವನ್ನುಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಆರೋಪಿಸಿದರು.

ಬೆಂಗಳೂರು ಉಸ್ತುವಾರಿ ಗೊಂದಲ ಕುರಿತು ಸಚಿವ ಆರ್​. ಅಶೋಕ್​ ಸ್ಪಷ್ಟನೆ ನೀಡಿರುವುದು..

ಬೆಂಗಳೂರು ಉಸ್ತುವಾರಿ ಸಂಬಂಧ ಸಚಿವ ವಿ.ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವೆಲ್ಲರೂ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಒಟ್ಟಾಗಿ ಹೋಗುತ್ತೇವೆ. ನಮ್ಮಲ್ಲಿ ಗೊಂದಲ ಇಲ್ಲ. ನಿನ್ನೆ ವಿ.ಸೋಮಣ್ಣ ಜತೆ ಹತ್ತು ನಿಮಿಷ ಮಾತಾಡಿದೀನಿ. ಎಸ್ ಆರ್ ವಿಶ್ವನಾಥ್ ಜತೆಗೂ ಮಾತಾಡಿದೀನಿ. ಎಲ್ಲವೂ ಸರಿಯಾಗಿದೆ. ಆದ್ರೆ, ಯಾರೋ ಕೆಲವರು ಗೊಂದಲ ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ನಿಗಮ ಮಂಡಳಿಯಿಂದ ತೆಗೆಯುತ್ತಾರೆ ಅಂತಾ ಗೊಂದಲ ಸೃಷ್ಟಿ : ಕಳೆದ ಎಂಟು ಒಂಬತ್ತು ತಿಂಗಳಿಂದ ನಾನು ಯಾವುದೇ ಜಿಲ್ಲೆಗೆ ಉಸ್ತುವಾರಿಯಾಗಿಲ್ಲ. ಬೆಂಗಳೂರು ಗ್ರಾಮಾಂತರ ಎಂಟಿಬಿಗೆ ಬಿಟ್ಟು ಕೊಟ್ಟಿದೀನಿ. ಸೋಮಣ್ಣ ಅವರ ಜತೆ ಯಾವುದೇ ಸಮಸ್ಯೆ ಇಲ್ಲ. ನಾನು ಕಾಂಪಿಟಿಟರ್ ಅಲ್ಲ. ನಾನು ಜಿಲ್ಲಾ ಉಸ್ತುವಾರಿಗೆ ಅಪೇಕ್ಷಿಸಿಲ್ಲ. ಒಂದೂವರೆ ವರ್ಷ ಆದ, ಶಾಸಕರಲ್ಲದ ನಿಗಮ ಮಂಡಳಿ ಅಧ್ಯಕ್ಷರನ್ನು ತೆಗೆಯಲು ಸಮಿತಿ ಮಾಡಿದಾರೆ. ಈ ಸಮಿತಿಯಲ್ಲಿ ನಾನೂ ಇದೀನಿ. ಜಿಲ್ಲಾ ಉಸ್ತುವಾರಿ ಗೊಂದಲ ಸೃಷ್ಟಿಯಾಗಿದ್ದು ಇದೇ ಹಿನ್ನೆಲೆಯಲ್ಲಿ. ನಿಗಮ ಮಂಡಳಿಗಳಿಂದ ತೆಗೆಯುತ್ತಾರೆ ಅಂತಾ ಈ ಗೊಂದಲ ಸೃಷ್ಟಿಸಲಾಗಿದೆ ಎ‌ಂದು ತಿಳಿಸಿದರು.

ಬಿಬಿಎಂಪಿ ಚುನಾವಣೆ ಮುಖ್ಯ : ಬೆಂಗಳೂರು ಉಸ್ತುವಾರಿ ಯಾರಾದರೇನು?. ಯಾರು ಉಸ್ತುವಾರಿ ಆಗಿ ಏನು ಆಗಬೇಕಾಗಿದೆ?. ಒಟ್ಟಾಗಿದ್ದು ಬಿಬಿಎಂಪಿ ಚುನಾವಣೆ ಗೆಲ್ಲೋದು ಮುಖ್ಯ. ಬಿಡಿಎ ಅಧ್ಯಕ್ಷ ಸ್ಥಾನ ಬದಲಾಗೋದಿಲ್ಲ. ಶಾಸಕರಲ್ಲದ ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ನಿಗಮ ಮಂಡಳಿಗಳ ನಿರ್ದೇಶಕರನ್ನೂ ತೆಗೆಯುವ ಪ್ರಸ್ತಾಪ ಇದೆ. ನಾವು ಪಟ್ಟಿ ಮಾಡಿ ಕೊಡ್ತೀವಿ ಅಷ್ಟೇ ಎಂದು ವಿವರಿಸಿದರು.

ಆರ್.ಅಶೋಕ್ ಪರ ಶಾಸಕ ಸತೀಶ್ ರೆಡ್ಡಿ ಬ್ಯಾಟಿಂಗ್ : ಬೆಂಗಳೂರಿನಲ್ಲಿ ನಾವೆಲ್ಲರೂ ಒಟ್ಟಿಗೆ ಇದೀವಿ. ನಮ್ಮ ಮಧ್ಯೆ ಗೊಂದಲ ಇಲ್ಲ. ಅಶೋಕ್ ಅವರು ಹಿಂದೆ ಉಸ್ತುವಾರಿ ಆಗಿದ್ರು. ಅವರಿಗೆ ಇದು ಹೊಸದೇನಲ್ಲ. ಯಾರೋ ಕೆಲವರು ಗೊಂದಲ ಮೂಡಿಸಲು ಇದೆಲ್ಲ ಮಾಡ್ತಿದಾರೆ. ಬಿಬಿಎಂಪಿ ಚುನಾವಣೆ ಮುಂದೆ ಇದೆ. ಎಲ್ರೂ ಒಟ್ಟಿಗೆ ಚುನಾವಣೆಗೆ ಹೋಗ್ತೀವಿ. ಜಿಲ್ಲಾ ಉಸ್ತುವಾರಿ ಮಾಡೋದು ಸಿಎಂ ನಿರ್ಧಾರಕ್ಕೆ ಬಿಟ್ಟಿದ್ದು. ಸುಮ್ಮನೆ ಊಹಾಪೋಹಾ ಬೇಡ ಎಂದು ಶಾಸಕ ಸತೀಶ್ ರೆಡ್ಡಿ ಆರ್​. ಅಶೋಕ್​ ಪರ ಬ್ಯಾಟ್​ ಬೀಸಿದರು.

Last Updated :Oct 10, 2021, 6:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.