ETV Bharat / state

‌ಕೇರಳದಲ್ಲಿ ನಿಫಾ ವೈರಸ್ ಪತ್ತೆ : ಅಕ್ಟೋಬರ್ ಅಂತ್ಯದವರೆಗೆ ಕೇರಳಕ್ಕೆ ಭೇಟಿ ನೀಡುವುದನ್ನು ತಪ್ಪಿಸಲು ಆರೋಗ್ಯ ಇಲಾಖೆ ಸೂಚನೆ

author img

By

Published : Sep 7, 2021, 7:26 PM IST

Updated : Sep 7, 2021, 8:47 PM IST

ನಿಫಾ ವೈರಸ್ ಕುರಿತು ಸಾರ್ವಜನಿಕರಲ್ಲಿ ಅಗತ್ಯ ಸಾರ್ವಜನಿಕ ಜಾಗೃತಿ ಮೂಡಿಸಬೇಕು. ಒಂದು ವೇಳೆ ಶಂಕಿತರಿಂದ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳೊಂದಿಗೆ ಸೂಕ್ತ ಮಾದರಿಗಳನ್ನು ಸಂಗ್ರಹಿಸಬೇಕು..

Nifa virus
‌ಕೇರಳದಲ್ಲಿ ನಿಫಾ ವೈರಸ್ ಪತ್ತೆ

ಬೆಂಗಳೂರು : ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾಗಿರುವುದರಿಂದ ಇದೀಗ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಕೇರಳದ ಗಡಿಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡುಗು ಹಾಗೂ ಚಾಮರಾಜನಗರ ಭಾಗದ ಜಿಲ್ಲಾಧಿಕಾರಿಗಳು ವಿಶೇಷ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ಆದೇಶಿಸಿದ್ದಾರೆ.

ಕೇರಳದಿಂದ ಬರುವವರಿಗೆ ಅನಾರೋಗ್ಯ ಸಮಸ್ಯೆ ಕಂಡು ಬಂದರೆ ಅವರ ಮೇಲೆ ತೀವ್ರ ನಿಗಾವಹಿಸುವಂತೆ ಸೂಚಿಸಲಾಗಿದೆ. ಕರ್ನಾಟಕ ಸರ್ಕಾರವು ಜನರು ಅಕ್ಟೋಬರ್ ಅಂತ್ಯದವರೆಗೆ ಕೇರಳಕ್ಕೆ ಭೇಟಿ ನೀಡುವುದನ್ನು ತಪ್ಪಿಸಬೇಕು ಎಂದು ಹೇಳಿದೆ.

  • In an advisory, Karnataka Govt says people should avoid visiting Kerala till Oct end; asks administrators of educational/nursing/paramedical institutes, owners of hospitals, factories etc to instruct their wards, who haven't returned to Karnataka, to postpone return till Oct end pic.twitter.com/hNdrHJpFbU

    — ANI (@ANI) September 7, 2021 " class="align-text-top noRightClick twitterSection" data=" ">

ನಿಫಾ ವೈರಸ್ ಜ್ವರದ ಲಕ್ಷಣಗಳು:

  • ಜ್ವರ, ತಲೆ ನೋವು, ವಾಂತಿ, ತಲೆಸುತ್ತುವಿಕೆ ಬರುವುದು
  • ಪ್ರಜ್ಞಾಹೀನತೆಗೆ ಒಳಗಾಗುವುದು
  • ಅತಿಯಾದ ಜ್ವರ ಮೆದುಳಿಗೆ ವ್ಯಾಪಿಸುವುದು
  • ಮಾತುಗಳಲ್ಲಿ ತೊದಲುವಿಕೆ ಹಾಗೂ ಅಪಸ್ವರದ ಲಕ್ಷಣಗಳು ಕಾಣಿಸಿವುದು
  • ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಸಂಭವಿಸಬಹುದು
  • ಸೋಂಕಿತ ದಿನದಿಂದ 4-18ದಿನಗಳಲ್ಲಿ ನಿಪಾ ವೈರೆಸ್ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಈ ನಿಟ್ಟಿನಲ್ಲಿ ನಿಫಾ ವೈರಸ್ ಕುರಿತು ಸಾರ್ವಜನಿಕರಲ್ಲಿ ಅಗತ್ಯ ಸಾರ್ವಜನಿಕ ಜಾಗೃತಿ ಮೂಡಿಸಬೇಕು. ಒಂದು ವೇಳೆ ಶಂಕಿತರಿಂದ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳೊಂದಿಗೆ ಸೂಕ್ತ ಮಾದರಿಗಳನ್ನು ಸಂಗ್ರಹಿಸಬೇಕು.

ಅಂದಹಾಗೇ, 2001ರಲ್ಲಿ ಇದು ಮಲೇಷ್ಯಾದಲ್ಲಿ ಕಾಣಿಸಿತ್ತು. ಈ ಹಿಂದೆಯೂ ಕೇರಳದಲ್ಲಿ ಕಾಣಿಸಿಕೊಂಡಿತ್ತು. ಇದೀಗ ಮತ್ತೊಮ್ಮೆ ಪ್ರಕರಣವೊಂದು ಪತ್ತೆಯಾಗಿದೆ.‌ ಬಾವುಲಿ ಹಕ್ಕಿಗಳಿಂದ ಇದು ಹರಡಲಿದ್ದು, ಇದಕ್ಕೆ ಕಡಿವಾಣ ಹಾಕಲು ಹಲವು ಕ್ರಮಗಳಿವೆ‌.

ಮನೆಯ ಸುತ್ತಮುತ್ತ ಇರುವ ಬಾವುಲಿಗಳಿದ್ರೆ, ಅಲ್ಲಿ ಹೆಚ್ಚು ಎಚ್ಚರಿಕೆವಹಿಸಬೇಕು. ಪಕ್ಷಿ ತಿಂದಿರುವ ಹಣ್ಣು ತಿನ್ನಬಾರದು. ಹಂದಿ ಫಾರಂನಲ್ಲಿ ಕೆಲಸ ಮಾಡುವ ಹಾಗೂ ಮಾಂಸ ರವಾನೆ ಬಗ್ಗೆ ಎಚ್ಚರಿಕೆ ವಹಿಸಬೇಕು.

ಓದಿ: ಕುತೂಹಲ ಮೂಡಿಸಿದ ಸಿಎಂ ದೆಹಲಿ ಪ್ರವಾಸ.. 2 ದಿನದಲ್ಲಿ ಅವರ ಕಾರ್ಯ ಹೀಗಿರಲಿದೆ..

Last Updated : Sep 7, 2021, 8:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.