ETV Bharat / state

ನಿಮ್ಹಾನ್ಸ್​ನಲ್ಲಿ 161 ನರ್ಸಿಂಗ್​​ ಹುದ್ದೆಗಳ ಭರ್ತಿ; ಅರ್ಜಿ ಸಲ್ಲಿಕೆಗೆ ಇನ್ನೆರಡೇ ದಿನ ಬಾಕಿ

author img

By ETV Bharat Karnataka Team

Published : Nov 16, 2023, 1:48 PM IST

Nimhans Recruitment: ಇನ್ನು ಅರ್ಜಿ ಸಲ್ಲಿಕೆ ಮಾಡದ ಅಭ್ಯರ್ಥಿಗಳಿಗೆ ಎರಡು ದಿನವಷ್ಟೇ ಅವಕಾಶ ಇದ್ದು, ಬೇಗ ಅರ್ಜಿ ಸಲ್ಲಿಸಬಹುದಾಗಿದೆ.

161 nursing post Recruitment from nimhans
161 nursing post Recruitment from nimhans

ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ- ನಿಮ್ಹಾನ್ಸ್ (NIMHANS)ನಲ್ಲಿ ಖಾಲಿ ಇರುವ 161 ಹುದ್ದೆ ನರ್ಸ್​​​ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದೆ. ಕಳೆದ ತಿಂಗಳು ಸಂಸ್ಥೆಯಿಂದ ಬಿಎಸ್ಸಿ ಮತ್ತು ಮಿಡ್​ವೈಫ್​ ನರ್ಸ್​​ಗಳ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ನವೆಂಬರ್​ 18 ಕಡೆಯ ದಿನ ಆಗಿದೆ. ಈ ಹುದ್ದೆ ಕುರಿತಾದ ವಿವರ ಇಲ್ಲಿದ್ದು, ಇನ್ನು ಅರ್ಜಿ ಸಲ್ಲಿಕೆ ಮಾಡದ ಅಭ್ಯರ್ಥಿಗಳಿಗೆ ಎರಡೇ ದಿನ ಬಾಕಿ ಇದ್ದು, ಬೇಗ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ಕುರಿತ ವಿವರ ಇಲ್ಲಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆ ವಿವರ: ನಿಮ್ಹಾನ್ಸ್​​ನಲ್ಲಿ ಖಾಲಿ ಇರುವ ಒಟ್ಟು 161 ನರ್ಸಿಂಗ್​ ಆಫೀಸರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಆಕಾಂಕ್ಷಿಗಳು ಅಧಿಕೃತ ನರ್ಸಿಂಗ್​ ಮಂಡಳಿಗಳಿಂದ ಬಿಎಸ್ಸಿ ನರ್ಸಿಂಗ್​ ಪದವಿ ಪಡೆದಿರಬೇಕು. ರಾಜ್ಯ ಅಥವಾ ಭಾರತೀಯ ನರ್ಸಿಂಗ್​ ಮಂಡಳಿಯಿಂದ ನರ್ಸ್​ ಅಥವಾ ಮಿಡ್​ವೈಫ್​ ನೋಂದಣಿ ಹೊಂದಿರಬೇಕು.

ಅನುಭವ: ಹುದ್ದೆ ಆಕಾಂಕ್ಷಿಗಳು 50 ಹಾಸಿಗೆಯುಳ್ಳ ಆಸ್ಪತ್ರೆಗಳಲ್ಲಿ ಎರಡು ವರ್ಷ ನರ್ಸಿಂಗ್​ ಕೆಲಸ ನಿರ್ವಹಣೆ ಮಾಡಿದ ಅನುಭವ ಹೊಂದಿರಬೇಕು.

ವೇತನ: ಈ ಹುದ್ದೆಗಳಿಗೆ 9,300 ದಿಂದ 34,800 ರೂ. ವರೆಗೆ ಮಾಸಿಕ ವೇತನ ನಿಗದಿ ಮಾಡಲಾಗಿದೆ.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ಮತ್ತು ಗರಿಷ್ಠ 35 ವರ್ಷ ವಯಸ್ಸಿನೊಳಗಿರಬೇಕು. ಕೇಂದ್ರ ಸರ್ಕಾರದ ನಿಯಮದ ಅನುಸಾರ ಮೀಸಲು ಹೊಂದಿರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮುನ್ನ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಪರಿಶೀಲಿಸಿ ಮುಂದುವರೆಯಬೇಕು. ಅಗತ್ಯ ದಾಖಲಾತಿ ಮತ್ತು ಪ್ರಮಾಣ ಪತ್ರ ಸೇರಿದಂತೆ ಮತ್ತಿತರ ವಿವರದೊಂದಿಗೆ ಅರ್ಜಿ ಶುಲ್ಕವನ್ನು ಭರಿಸಬೇಕಿದೆ.

ಈ ಹುದ್ದೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 885 ರೂ. ಅರ್ಜಿ ಶುಲ್ಕ ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 1,180 ರೂ. ಅರ್ಜಿ ಶುಲ್ಕ ಭರಿಸಬೇಕಿದೆ. ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ಅಕ್ಟೋಬರ್​ 18 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಕಡೆಯ ದಿನಾಂಕ ನವೆಂಬರ್​ 18 ಆಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು nimhans.ac.in ಈ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿದೆ ಉದ್ಯೋಗ: ವಾಕ್​ ಇನ್​ ಇಂಟರ್​ವ್ಯೂಗೆ ತಯಾರಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.