ETV Bharat / state

ಮುಂದಿನ ವಿಧಾನಸಭಾ ಚುನಾವಣೆಗೆ ಬಾದಾಮಿಯಿಂದಲೇ ನನ್ನ ಸ್ಪರ್ಧೆ : ಸಿದ್ದರಾಮಯ್ಯ

author img

By

Published : Jul 6, 2021, 1:35 PM IST

ಸಿದ್ದರಾಮಯ್ಯ
ಸಿದ್ದರಾಮಯ್ಯ

ನಾನು ಭಾನುವಾರ ಬಾದಾಮಿಗೆ ಬರ್ತೇನೆ. ಅಲ್ಲೇ ನಿಮ್ಮನ್ನೆಲ್ಲ ಭೇಟಿ ಮಾಡುತ್ತೇನೆ. ನೀವೇನು ಹೆದರಬೇಡಿ ಎಂದಿದ್ದೇನೆ. ನಾನು ಇವರು ಬರುವುದನ್ನು ನಿರೀಕ್ಷೆ ಮಾಡಲಿಲ್ಲ. ನಿನ್ನೆ ಗೊತ್ತಾಯ್ತು, ಪಾಪಾ ಯಾಕೆ ಬರ್ತಿದ್ದಾರೆ ಅಂತಾ ಕೇಳಿದೆ. ಇಲ್ಲ, 2023ರಲ್ಲಿ ಬಾದಾಮಿಯಿಂದಲೇ ಸ್ಪರ್ಧೆ ಮಾಡಲು ಒತ್ತಾಯ ಮಾಡಲು ಬರ್ತಿದ್ದಾರೆ ಅಂದರು. ನಾನು ಖರ್ಚು ಮಾಡಿಕೊಂಡು ಬರುವುದು ಬೇಡ ಅಂತಾ ಹೇಳಿದ್ದೆ..

ಬೆಂಗಳೂರು : ನಾನೇನಾದ್ರೂ ಬಾದಾಮಿಯಿಂದ ಚುನಾವಣೆಗೆ ಸ್ಪರ್ಧಿಸಲ್ಲ ಅಂದಿದ್ದೀನಾ? ಅಭಿಮಾನದಿಂದ ಕೆಲವರು ಬೇರೆ ಕಡೆ ಸ್ಪರ್ಧಿಸಿ ಎಂದು ಕರೆಯುತ್ತಾರೆ ಅಷ್ಟೇ.. ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಶಿವಾನಂದ ವೃತ್ತ ಸಮೀಪದ ತಮ್ಮ ಸರ್ಕಾರಿ ನಿವಾಸದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನನ್ನನ್ನು ಭೇಟಿ ಮಾಡೋಕೆ ಕ್ಷೇತ್ರದ ಜನ ಬಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧಿಸಿ ಎಂದು ಒತ್ತಡ ಹಾಕಿದ್ದಾರೆ. ನಾನು ಬೇರೆ ಕಡೆ ಸ್ಪರ್ಧಿಸಲ್ಲ ಎಂದು ಅವರಿಗೆ ಭರವಸೆ ನೀಡಿದ್ದೇನೆ.

ಕೊಪ್ಪಳ, ಕೋಲಾರ, ಚಾಮರಾಜಪೇಟೆಯಿಂದಲೂ ಸ್ಪರ್ಧಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಆದರೆ, ನಾನು ಬಾದಾಮಿಯಲ್ಲೇ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟೀಕರಣ ನೀಡಿದರು. ನಾನು ಮೈಸೂರಿನಿಂದ ಬಾದಾಮಿಗೆ ಹೋದವನು. ಅಲ್ಲಿಂದ ಜನ ನನ್ನನ್ನು ಆರಿಸಿ ಕಳಿಸಿದ್ದಾರೆ. ನಾನು ನಾಮಪತ್ರ ಸಲ್ಲಿಸಲು, ಪ್ರಚಾರಕ್ಕೆಂದು ಎರಡೇ ದಿನ ಅಲ್ಲಿಗೆ ಹೋಗಿದ್ದು. ಆದರೂ ಅಲ್ಲಿನ ಜನ ನನ್ನ ಕೈ ಹಿಡಿದರು ಎಂದು ಭಾವುಕವಾಗಿ ಹೇಳಿದರು.

ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ರು

ನಾನು ಚಾಮುಂಡೇಶ್ವರಿಯಲ್ಲಿ ಐದು ಬಾರಿ ಸ್ಪರ್ಧಿಸಿದ್ದವನು. ನನ್ನನ್ನ ಎಲ್ಲರೂ ಸೇರಿ ಅಲ್ಲಿ ಸೋಲಿಸಿದ್ರು. ಅಲ್ಲಿ ನನ್ನನ್ನ ಸೋಲಿಸಿದ್ದು ಬೇರೆಯೇ ಮಾತು ಎಂದರು.

ಬಾದಾಮಿಯಿಂದಲೇ ಸ್ಪರ್ಧಿಸುತ್ತೇನೆ

ಶಾಸಕನಾದವನು ಪ್ರತಿನಿತ್ಯ ಜನರ ಸಮಸ್ಯೆ ಆಲಿಸಬೇಕು. ಅದು ನನಗೆ ಅಲ್ಲಿ ಕಷ್ಟವಾಗ್ತಿದೆ. ನಿಮ್ಮ ಕಷ್ಟ-ಸುಖಗಳಲ್ಲಿ ನಾನು ಭಾಗಿಯಾಗಬೇಕಲ್ವಾ? ನೀವು ಏನೇ ಹೇಳಬಹುದು ನನ್ನ ಅಂತಃಕರಣ ಕೇಳಬೇಕಲ್ಲ. ನಾನು ನಿಮ್ಮನ್ನು ಖುಷಿ ಪಡಿಸೋಕೆ ಈ ಮಾತು ಹೇಳ್ತಿಲ್ಲ. ನಾನು ಶಾಸಕನಾಗಿ ಏನು ಮಾಡಬೇಕೋ ಅದೆಲ್ಲವನ್ನು ಮಾಡಿದ್ದೇನೆ. ಇನ್ನೂ ಎರಡು ವರ್ಷ ಸಮಯವಿದೆ.

ಅಲ್ಲಿಯವರೆಗೆ ಹಲವು ಅಭಿವೃದ್ಧಿ ಮಾಡ್ತೇನೆ. ನಾನು ಹಲವು ಕೆಲಸ ಮಾಡಿರಬಹುದು. ಒಬ್ಬ ಶಾಸಕನಾಗಿಯಷ್ಟೇ ಮಾಡಿದ್ದೇನೆ. ಅದರಲ್ಲಿ ದೊಡ್ಡಸ್ಥಿಕೆಯೇನೂ ಇಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ 10 ತಿಂಗಳು ಬಾಕಿಯಿದೆ. ನಾನು ಅಸೆಂಬ್ಲಿಯಲ್ಲೂ ಹೇಳಿದ್ದೇನೆ. ಬಾದಾಮಿಯಿಂದಲೇ ಸ್ಪರ್ಧಿಸುತ್ತೇನೆ ಎಂದು. ಅವತ್ತು ಹೇಳಿದ ಮಾತೇ ಇವತ್ತಿಗೂ ಇದೆ. ನಾನು ಬಾದಾಮಿ ಶಾಸಕ. ನಿಮ್ಮ ಇಚ್ಛೆಯಂತೆ ಬಾದಾಮಿಯಲ್ಲೇ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಬರೋದ್ ಬೇಡ ಅಂದಿದ್ದೆ

ನಾನು ಭಾನುವಾರ ಬಾದಾಮಿಗೆ ಬರ್ತೇನೆ. ಅಲ್ಲೇ ನಿಮ್ಮನ್ನೆಲ್ಲ ಭೇಟಿ ಮಾಡುತ್ತೇನೆ. ನೀವೇನು ಹೆದರಬೇಡಿ ಎಂದಿದ್ದೇನೆ. ನಾನು ಇವರು ಬರುವುದನ್ನು ನಿರೀಕ್ಷೆ ಮಾಡಲಿಲ್ಲ. ನಿನ್ನೆ ಗೊತ್ತಾಯ್ತು, ಪಾಪಾ ಯಾಕೆ ಬರ್ತಿದ್ದಾರೆ ಅಂತಾ ಕೇಳಿದೆ. ಇಲ್ಲ, 2023ರಲ್ಲಿ ಬಾದಾಮಿಯಿಂದಲೇ ಸ್ಪರ್ಧೆ ಮಾಡಲು ಒತ್ತಾಯ ಮಾಡಲು ಬರ್ತಿದ್ದಾರೆ ಅಂದರು. ನಾನು ಖರ್ಚು ಮಾಡಿಕೊಂಡು ಬರುವುದು ಬೇಡ ಅಂತಾ ಹೇಳಿದ್ದೆ ಎಂದರು.

ರಾಜ್ಯಪಾಲರಿಗೆ ಸ್ವಾಗತ

ರಾಜ್ಯಪಾಲರ ಅವಧಿ ಮುಗಿದರೂ ಕಳೆದ ಎರಡು ವರ್ಷದಿಂದ ವಿ.ಆರ್.ವಾಲಾ ಅವರೇ ಮುಂದುವರಿದಿದ್ದರು. ಈಗ ಹೊಸ ರಾಜ್ಯಪಾಲರ ನೇಮಕವಾಗಿದೆ. ಅದರಲ್ಲಿ ವಿಶೇಷ ಏನೂ ಇಲ್ಲ, ಅವರನ್ನು ಸ್ವಾಗತಿಸುತಿಸುತ್ತೇನೆ ಎಂದರು.

ಇದನ್ನೂ ಓದಿ : ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.