ETV Bharat / state

ಉಪಚುನಾವಣೆ ತಯಾರಿ.. ಹುಟ್ಟುಹಬ್ಬಕ್ಕಾಗಿ ಜನರಿಗೆ ಬಿರಿಯಾನಿ ಊಟ, ಕಂಬಳಿ ಗಿಫ್ಟ್​ ಕೊಟ್ಟ ಎಂಟಿಬಿ

author img

By

Published : Oct 7, 2019, 7:49 AM IST

ಶಿವನಾಪುರ ಗ್ರಾಮದ ಜನರಿಗೆ ಎಂಟಿಬಿ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಎಂದು ಕಂಬಳಿ ಹಾಗೂ ಭರ್ಜರಿ ಬಿರಿಯಾನಿ ನೀಡಿದ್ದಾರೆ. ಕೂಪನ್​ ಹಿಡಿದು ಸಾಲು ಸಾಲಾಗಿ ನಿಂತಿದ್ದ ಜನರಿಗೆ ಸ್ವತಃ ನಾಗರಾಜ್​ರವರೆ ಮಹಿಳೆಯರಿಗೆ ಸೀರೆ ಮತ್ತು ಪುರುಷರಿಗೆ ಕಂಬಳಿಯನ್ನು ನೀಡಿದರು.

ಅನರ್ಹ ಶಾಸಕ ಎಂಟಿಬಿ ನಾಗರಾಜ್

ಹೊಸಕೋಟೆ: ಉಪಚುನಾವಣೆಯಲ್ಲಿ ಹೊಸ ಕೋಟೆ ಮತದಾರರನ್ನು ಸೆಳೆಯಲು ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, ದಸರಾ ಗಿಫ್ಟ್​ ನೀಡುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ತಾವರೆಕೆರೆ ಹಾಗೂ ಶಿವನಾಪುರ ಗ್ರಾಮದ ಜನರಿಗೆ ಎಂಟಿಬಿ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಕಂಬಳಿ ಹಾಗೂ ಬಿರಿಯಾನಿ ನೀಡಿದ್ದಾರೆ. ಕೂಪನ್​ ಹಿಡಿದು ಸಾಲು ಸಾಲಾಗಿ ನಿಂತಿದ್ದ ಜನರಿಗೆ ಸ್ವತಃ ನಾಗರಾಜ್​ರವರೆ ಮಹಿಳೆಯರಿಗೆ ಸೀರೆ ಮತ್ತು ಪುರುಷರಿಗೆ ಕಂಬಳಿಯನ್ನು ನೀಡಿದರು. ಇತ್ತ ಸೀರೆ, ಕಂಬಳಿಯನ್ನ ಪಡೆಯಲು ಮುಗಿಬಿಳುತ್ತಿದ್ದ ಜನರನ್ನು ಪೊಲೀಸರು ನಿಯಂತ್ರಿಸಲು ಹರಸಹಾಸ ಪಟ್ಟರು.

ಮತದಾರರಿಗೆ ಎಂಟಿಬಿ ಭರ್ಜರಿ ದಸರಾ ಗಿಪ್ಟ್

ಅನರ್ಹ ಶಾಸಕ ಎಂಟಬಿ ನಾಗರಾಜ್ ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಕೈಹಿಡಿದಿರೋ ಹಿನ್ನಲೆ ಕ್ಷೇತ್ರಾದ್ಯಂತ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ಅದರಲ್ಲೂ ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಉಪಚುನಾವಣೆ ದಿನಾಂಕ ನಿಗದಿ ಮಾಡಿದ್ದು, ನೀತಿ ಸಂಹಿತೆ ಜಾರಿಯಾಗುವ ಮುನ್ನ ಕ್ಷೇತ್ರದ ಮತದಾರರಿಗೆ ಎಂಟಿಬಿ ಹುಟ್ಟು ಹಬ್ಬದ ನೆಪದಲ್ಲಿ ಭರ್ಜರಿ ದಸರಾ ಗಿಪ್ಟ್ ನೀಡುತ್ತ ಸೈಲೆಂಟಾಗಿ ಪ್ರಚಾರ ನಡೆಸುತ್ತಿದ್ದಾರೆ, ಅನ್ನೊ ಮಾತು ರಾಜ್ಯ ರಾಜಕೀಯ ವಲಯದಲ್ಲಿ ಕೇಳಿಬಂದಿದೆ.

ಹೀಗೆ ದಸರಾ ಗಿಫ್ಟ್​ ನಿಡ್ತಿರೋ ಎಂಟಿಬಿ ನಾಗರಾಜ್ ಉಪಚುನಾವಣೆಯಲ್ಲಿ ಮತದಾರರಿಗೆ ಹತ್ತಿರವಾಗಲು ಈ ರೀತಿಯ ಆಮಿಷ ಒಡ್ಡುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಸೀರೆ ಕಂಬಳಿಗಳನ್ನ ವಿತರಿಸಿದ ನಂತರ ಮಾತನಾಡಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಪ್ರತಿವರ್ಷ ನನ್ನ ಹುಟ್ಟು ಹಬ್ಬಕ್ಕೆ ಸೀರೆ ಹಾಗೂ ಕಂಬಳಿಯನ್ನ ವಿತರಿಸುತ್ತಿದ್ದೆ. ಆದ್ರೆ ಕಳೆದ ವರ್ಷ ಹುಟ್ಟು ಹಬ್ಬಕ್ಕೆ ವಿತರಿಸಲಿಲ್ಲ. ಹೀಗಾಗಿ ಈ ವರ್ಷ ಇಲ್ಲಿಗೆ ಆಗಮಿಸಿ ಸೀರೆ ಕಂಬಳಿ ವಿತರಿಸುತ್ತಿದ್ದೇನೆ ಎಂದರು.

ಒಟ್ಟಾರೆ ಪ್ರತಿಷ್ಠೆಯ ಕಣವಾಗಿರುವ ಹೊಸಕೋಟೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಲು ಬಯಸಿರೋ ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡರನ್ನ ಮಣಿಸಲು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಈಗಿನಿಂದಲೇ ಭರ್ಜರಿ ತಯಾರಿ ಮಾಡಿಕೊಳ್ತಿದ್ದಾರೆ. ಇನ್ನೂ ಉಪಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದಯ ಹಠಕ್ಕೆ ಬಿದ್ದಿರುವ ಎಂಟಿಬಿ ಹುಟ್ಟು ಹಬ್ಬ ಹಾಗೂ ದಸರಾ ನೆಪದಲ್ಲಿ ಮತದಾರರಿಗೆ ಆಮಿಷ ಒಡ್ಡುತ್ತಿರೋದು ಸಾರ್ವಜನೀಕರ ಟೀಕೆಗೆ ಗುರಿಯಾಗಿದೆ.

Intro:ಹೊಸಕೋಟೆ:


ಕ್ಷೇತ್ರದ ಮತದಾರರಿಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್‌ರಿಂದ ಭರ್ಜರಿ ದಸರಾ ಗಿಪ್ಟ್

ಹುಟ್ಟು ಹಬ್ಬದ ನೆಪದಲ್ಲಿ ಸೀರೆ, ಕಂಬಳಿ ಮತ್ತು ಬಿರಿಯಾನಿ ವಿತರಣೆ


ರಾಜ್ಯದಲ್ಲಿ ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆಯನ್ನ ಕೇಂದ್ರ ಚುನಾವಣಾ ಆಯೋಗ ಡಿಸೆಂಬರ್‌ನಲ್ಲಿ ಮರು ನಿಗದಿ ಮಾಡಿ ಆದೇಶಿಸಿದೆ. ಇದರ ಬೆನ್ನಲೇ ಅನರ್ಹ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೀಗಾಗಲೇ ಮತದಾರರನ್ನ ಸೆಳೆಯಲು ಪುಲ್ ಅಲರ್ಟ್ ಹಾಗಿದ್ದಾರೆ. ಅದರಲ್ಲೂ ರಾಜ್ಯದ ಗಮನ ಸೆಳೆದಿರೋ ಹೊಸಕೋಟೆ ಕ್ಷೇತ್ರದಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತದಾರರನ್ನ ತಮ್ಮತ್ತ ಸೆಳೆಯಲು ಭರ್ಜರಿ ದಸರಾ ಗಿಪ್ಟ್ ನೀಡುತ್ತಿದ್ದಾರೆ.


ಹೀಗೆ ಟೋಕನ್ ಹಿಡಿದು ಸೀರೆ, ಕಂಬಳಿಗಳಿಗಾಗಿ ನಾ ಮುಂದು ತಾ ಮುಂದು ಅಂತಾ ಸಾಲು ಗಟ್ಟಿ ನಿಂತಿರೋ ಜನ....... ಬಿರಿಯಾನಿಗಾಗಿ ಮುಗಿಬಿದ್ದಿರೋ ಮತದಾರರು..... ಪ್ರತಿಯೊಬ್ಬರಿಗೂ ದಸರಾ ಗಿಪ್ಟ್ ನೀಡ್ತಿರೋ ಅನರ್ಹ ಶಾಸಕ ಎಂಟಿಬಿ ನಾಗರಾಜ್.... ಈ ಎಲ್ಲಾ ದೃಶ್ಯಗಳು ಇಂದು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ತಾವರೆಕೆರೆ ಹಾಗೂ ಶಿವನಾಪುರ ಗ್ರಾಮದಲ್ಲಿ. ಅಂದಹಾಗೆ ಅನರ್ಹ ಶಾಸಕ ಎಂಟಬಿ ನಾಗರಾಜ್ ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಕೈಹಿಡಿದಿರೋ ಹಿನ್ನಲೆ ಕ್ಷೇತ್ರಧಾಧ್ಯಂತ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ಅದರಲ್ಲೂ ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಉಪಚುನಾವಣೆ ದಿನಾಂಕ ನಿಗದಿ ಮಾಡಿದ್ದು, ನೀತಿ ಸಂಹೀತೆ ಜಾರಿಯಾಗುವ ಮುನ್ನಾ ಕ್ಷೇತ್ರದ ಮತದಾರರಿಗೆ ಎಂಟಿಬಿ ಹುಟ್ಟು ಹಬ್ಬದ ನೆಪದಲ್ಲಿ ಭರ್ಜರಿ ದಸರಾ ಗಿಪ್ಟ್ ನೀಡ್ತಾ ಸೈಲೆಂಟಾಗಿ ಪ್ರಚಾರ ನಡೆಸುತ್ತಿದ್ದಾರೆ. ಇನ್ನೂ ಮಹಿಳಾ ಮತದಾರರಿಗೆ ಸೀರೆ ಹಾಗೂ ಪುರುಷ ಮತದಾರರಿಗೆ ಕಂಬಳಿಯನ್ನ ಸ್ವತಃ ಎಂಟಬಿ ನಾಗರಾಜ್ ನಿಂತುಕೊಂಡೇ ಪ್ರತಿಯೊಬ್ಬರಿಗೂ ವಿತರಿಸಿದ್ರು. ಇತ್ತ ಸೀರೆ, ಕಂಬಳಿಯನ್ನ ಪಡೆಯಲು ಮುಗಿಬಿಳುತ್ತಿದ್ದ ಮತದಾರರನ್ನ ಪೊಲೀಸರು ನಿಯಂತ್ರಿಸಲು ಹರಸಹಾಸ ಪಟ್ಟರು.


Body:ಎಂಟಿಬಿ ನಾಗರಾಜ್ ಗ್ರಾಮಕ್ಕೆ ಬರುವುದಕ್ಕೂ ಮುಂಚೆ ಪ್ರತೊಯೊಬ್ಬರಿಗೂ ಎಂಟಿಬಿ ಸಿಂಬಲ್ ಇರೋ ಟೋಕನ್ ವಿತರಿಸಲಾಗಿತ್ತು. ಹೀಗಾಗಿ ಅನರ್ಹ ಶಾಸಕ ನಾಗರಾಜ್ ಸ್ಥಳಕ್ಕೆ ಬರುತ್ತಿದ್ದಂತೆ ಟೋಕನ್ ಪಡೆದಿದ್ದ ಮತದಾರರು ಶಾಮಿಯಾನ ಕೆಳಗಡೆ ಸಾಲುಗಟ್ಟಿನಿಂತಿದ್ದರು. ಅಲ್ಲದೆ ಸೀರೆ ಕಂಬಳಿಯನ್ನ ಪಡೆದ ಮತದಾರರು ಶಾಮಿಯಾನ ಹಿಂಭಾಗ ವ್ಯವಸ್ಥೆ ಮಾಡಲಾಗಿದ್ದ ಭರ್ಜರಿ ಚಿಕನ್ ಬಿರಿಯಾನಿಗೆ ಮುಗಿಬಿದ್ರು. ಜತೆಗೆ ಮನೆಗೂ ಸ್ವಲ್ಪ ಇರಲಿ ಅಂತಾ ತಟ್ಟೆಗಳಲ್ಲಿ ಬಿರಿಯಾನಿ ಇಡಿದುಕೊಂಡು ಜನ ಹೋಗ್ತಿದ್ದಿದ್ದು ಸಾಮಾನ್ಯವಾಗಿತ್ತು. ಹೀಗೆ ದಸರಾ ಗಿಪ್ಟ್ ನಿಡ್ತಿರೋ ಎಂಟಿಬಿ ನಾಗರಾಜ್ ಉಪಚುನಾವಣೆಯಲ್ಲಿ ಮತದಾರರಿಗೆ ಹತ್ತಿರವಾಗಲು ಈ ರೀತಿಯ ಆಮಿಷವನ್ನ ಒಡ್ಡುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಸೀರೆ ಕಂಬಳಿಗಳನ್ನ ವಿತರಿಸಿದ ನಂತರ ಮಾತನಾಡಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಪ್ರತಿವರ್ಷ ನನ್ನ ಹುಟ್ಟು ಹಬ್ಬಕ್ಕೆ ಸೀರೆ ಹಾಗೂ ಕಂಬಳಿಯನ್ನ ವಿತರಿಸುತ್ತಿದ್ದೆ. ಆದ್ರೆ ಕಳೆದ ವರ್ಷ ಹುಟ್ಟು ಹಬ್ಬಕ್ಕೆ ವಿತರಿಸಲಿಲ್ಲ. ಹೀಗಾಗಿ ಈ ವರ್ಷ ಇಲ್ಲಿಗೆ ಆಗಮಿಸಿ ಸೀರೆ ಕಂಬಳಿ ವಿತರಿಸುತ್ತಿದ್ದೇನೆ ಎಂದ್ರು.



Conclusion:ಒಟ್ಟಾರೇ ಪ್ರತಿಷ್ಠೆಯ ಹೊಸಕೋಟೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಲು ಬಯಸಿರೋ ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡರನ್ನ ಮಣಿಸಲು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೀಗಿನಿಂದಲೇ ಭರ್ಜರಿ ತಯಾರಿ ಮಾಡಿಕೊಳ್ತಿದ್ದಾರೆ. ಇನ್ನೂ ಉಪಚುನಾವಣೆಯಲ್ಲಿ ಗೆಲ್ಲಲೇಬೇಕು ಅಂತಾ ಹಠಕ್ಕೆ ಬಿದ್ದಿರೋ ಎಂಟಿಬಿ ನಾಗರಾಜ್ ಹುಟ್ಟು ಹಬ್ಬ ಹಾಗೂ ದಸರಾ ನೆಪದಲ್ಲಿ ಮತದಾರರಿಗೆ ಆಮಿಷ ಹೊಡ್ಡುತ್ತಿರೋದು ಸಾರ್ವಜನೀಕರ ಟೀಕೆಗೆ ಗುರಿಯಾಗಿದೆ.

ಬೈಟ್: ಎಂಟಿಬಿ ನಾಗರಾಜ್, ಅನರ್ಹ ಶಾಸಕ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.