ETV Bharat / state

ರಾಜ್ಯದಲ್ಲಿ ಯುವ ಜನರೇ ಹೆಚ್ಚಿನ ಕೋವಿಡ್​ ಭಾದಿತರು: ಮೈಮರತರೆ ಅಪಾಯ ತಪ್ಪಿದ್ದಲ್ಲ

author img

By

Published : Oct 16, 2020, 5:07 PM IST

ಹಿರಿಯರು ಮಕ್ಕಳಿಗಿಂತ ರಾಜ್ಯದಲ್ಲಿ ಯುವಜನರೇ ಹೆಚ್ಚಾಗಿ ಕೋವಿಡ್​ ಸೋಂಕಿಗೆ ತುತ್ತಾಗಿದ್ದು, ಶೇ. 60 ರಷ್ಟು ಸೋಂಕಿತರು 20 ರಿಂದ 50 ವಯೋಮಾನದವರಾಗಿದ್ದಾರೆ.

Most of the Covid infected are young people
ಕರ್ನಾಟದಲ್ಲಿ ಯುವಜನರಿಗೆ ಹೆಚ್ಚು ಕೋವಿಡ್​

ಬೆಂಗಳೂರು : ಕೊರೊನಾ ಸೋಂಕಿಗೆ 10 ವರ್ಷಕ್ಕಿಂತ ಕೆಳಗಿನ ಮಕ್ಕಳು ಮತ್ತು 60 ವರ್ಷಕ್ಕಿಂತ ಮೇಲಿನ ಹಿರಿಯರು ಹೆಚ್ಚಾಗಿ ತುತ್ತಾಗುತ್ಗಾರೆ ಎಂಬ ಮಾತಿದೆ. ಆದರೆ, ರಾಜ್ಯದಲ್ಲಿ ಇದು ಸುಳ್ಳಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರೇ ಸೋಂಕು ಬಾಧಿತರಾಗಿದ್ದಾರೆ.

ಮಾರ್ಚ್ 8 ರಂದು ರಾಜ್ಯದಲ್ಲಿ ಮೊದಲ ಕೊರೊನಾ ಸೋಂಕು ದೃಢಪಟ್ಟಿತ್ತು. ಅಲ್ಲಿಂದ‌ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 7 ಲಕ್ಷ ದಾಟಿದೆ. ಈ ಪೈಕಿ ಶೇ.60 ರಷ್ಟು ಸೋಂಕಿತರು 20 ರಿಂದ 50 ವರ್ಷದ ಒಳಗಿನವರಾಗಿದ್ದಾರೆ.

ವಯೋಮಾನದ ಕೊರೊನಾ ಸೋಂಕಿತರ ಸಂಖ್ಯೆ:

ಕ್ರ.ಸಂವಯಸ್ಸುಸೋಂಕಿತರು
100-058,637
205-1012,262
310-2042,109
420-301,24,947
530-41,31,865
640-50 1,07,678
750-60 89,590
860+69,924

ರಾಜ್ಯದಲ್ಲಿ ಶೇ. 80 ರಷ್ಟು ಕೊರೊನಾ ಸೋಂಕಿತರ ಪೈಕಿ ಶೇ. 60 ರಷ್ಟು ಯುವ ಜನರಿದ್ದಾರೆ. ಪುರುಷ ಸೋಂಕಿತರು ಶೇ. 52, ಮಹಿಳಾ ಸೋಂಕಿತರು ಶೇ. 32 ಮತ್ತು ಹಿರಿಯ ನಾಗರಿಕರು ಶೇ.13 ರಷ್ಟಿದ್ದಾರೆ. ಚಿತ್ರದುರ್ಗದಲ್ಲಿ ಪ್ರತಿ 27 ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣ ದ್ವಿಗುಣಗೊಳ್ಳುತ್ತಿದ್ದು, ಕಲಬುರಗಿ, ಬೀದರ್ ನಲ್ಲಿ 49 ದಿನಕ್ಕೆ ದ್ವಿಗುಣವಾಗುತ್ತಿದೆ. ಬೆಂಗಳೂರು ನಗರದಲ್ಲಿ 40 ದಿನಕ್ಕೆ ದ್ವಿಗುಣವಾಗುತ್ತಿದೆ.

ರಾಜ್ಯದ ಕೊರೊನಾ ಅಂಕಿ-ಅಂಶ :

ಒಟ್ಟು ಸೋಂಕಿತರುಸಕ್ರಿಯ ಪ್ರಕರಣಗುಣಮುಖಮರಣ
7,43,848 1,13,538 62,00081,0283

ರಾಜ್ಯದಲ್ಲಿ ಕೊರೊನಾ ತಪಾಸಣಾ ಸಾಮರ್ಥ್ಯ ಒಂದು ಲಕ್ಷಕ್ಕೆ ಹೆಚ್ಚಿಸಿಕೊಳ್ಳಲಾಗಿದ್ದು, ಆ್ಯಂಟಿಜೆನ್ ಮತ್ತು ಆರ್‌ಟಿಪಿಸಿಆರ್​ನಿಂದ ಪ್ರತಿದಿನ ಸರಾಸರಿ 1 ಲಕ್ಷ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಪ್ರತಿ 11.3 ತಪಾಸಣೆಗೆ ಒಂದು ಪಾಸಿಟಿವ್ ದೃಢಪಡುತ್ತಿದೆ.

ಹಿಂದಿನ 9 ದಿನದ ಮಾಹಿತಿ :

ಕ್ರ.ಸಂ ದಿನಾಂಕಆ್ಯಂಟಿಜೆನ್ಆರ್‌ಟಿಪಿಸಿಆರ್ಒಟ್ಟು
108.10.2020 51,22154,0271,052,48
209.10.202049,61860,3621,09,980
410.10.202048,40364,3671,12,770
511.10.202038,73161,19299,923
612.10.202023,56455,19378,757
713.10.202043,02363,2181,06,241
814.10.202039,11174,6601,13,771
915.10.202030,97773,8341,04,811
23,77,084 39,78,719 63,55,803
ETV Bharat Logo

Copyright © 2024 Ushodaya Enterprises Pvt. Ltd., All Rights Reserved.