ETV Bharat / state

ನಾಳೆ ಎಸ್​​​ಎಸ್​​ಎಲ್​​ಸಿ ಫಲಿತಾಂಶ ಪ್ರಕಟ ವಿಚಾರ ಸುಳ್ಳು: ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

author img

By

Published : Aug 6, 2020, 4:17 PM IST

ನಾಳೆ ಎಸ್​​​ಎಸ್​​ಎಲ್​​ಸಿ ಫಲಿತಾಂಶ ಪ್ರಕಟವಾಗಲಿದೆ ಎಂಬ ವದಂತಿ ಸತ್ಯವಲ್ಲ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

minister suresh kumar statement
ಸಚಿವ ಸುರೇಶ್ ಕುಮಾರ್

ಬೆಂಗಳೂರು: ನಾಳೆ ಎಸ್​​​ಎಸ್​​ಎಲ್​​ಸಿ ಫಲಿತಾಂಶ ಪ್ರಕಟವಾಗಲಿದೆ ಎಂಬ ವದಂತಿ ಹರಡುತ್ತಿದ್ದು, ಈ ಸುದ್ದಿ ಸತ್ಯವಲ್ಲ. ಇನ್ನೂ ದಿನಾಂಕ ನಿಶ್ಚಯವಾಗಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

minister suresh kumar statement
ಸಚಿವ ಸುರೇಶ್ ಕುಮಾರ್ ಫೇಸ್ ಬುಕ್ ಪೋಸ್ಟ್​

ಆಗಸ್ಟ್ ಮೊದಲ ವಾರದಲ್ಲಿ ಎಸ್​​​ಎಸ್​​ಎಲ್​​ಸಿ ರಿಸಲ್ಟ್ ಎಂದು ಈ ಹಿಂದೆ ಸಚಿವರು ಹೇಳಿಕೆ ನೀಡಿದ್ದರು. ಆದರೆ ಈ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಇಂದು ಸಂಜೆಯೂ ಈ ಕುರಿತು ಸಭೆ ನಡೆಯಲಿದೆ. ಆದ್ರೆ ಈವರೆಗೆ ಎಸ್​​​ಎಸ್​​ಎಲ್​​ಸಿ ಫಲಿತಾಂಶದ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.