ETV Bharat / state

ಕಲಬುರಗಿ ಬಸ್ ದುರಂತ: ಸಿಎಂ ಬೊಮ್ಮಾಯಿ, ಸಾರಿಗೆ ಸಚಿವ ಬಿ. ಶ್ರೀರಾಮುಲು ಸಂತಾಪ

author img

By

Published : Jun 3, 2022, 12:31 PM IST

Updated : Jun 3, 2022, 1:33 PM IST

ಕಲಬುರಗಿ ಖಾಸಗಿ ಬಸ್ ದುರಂತಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಮಾಹಿತಿ ನೀಡಿದ್ದಾರೆ..

minister b shriramulu
ಸಚಿವ ಬಿ ಶ್ರೀರಾಮುಲು

ಬೆಂಗಳೂರು: ಕಲಬುರಗಿ ಹೊರವಲಯ ಕಮಲಾಪುರ ಬಳಿ ಇಂದು ಭೀಕರ ಅಪಘಾತ ನಡೆದು ಬಸ್​​ನಲ್ಲಿದ್ದ 7 ಪ್ರಯಾಣಿಕರು ಸಜೀವ ದಹನರಾಗಿ, ಹಲವರು ಗಾಯಗೊಂಡಿರುವ ಘಟನೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುವುದಾಗಿ ಸಿಎಂ ಟ್ವೀಟ್ ಮಾಡಿದ್ದಾರೆ.

ತನಿಖೆ ನಡೆಯುತ್ತಿದೆ: ಕಲಬುರಗಿ ಖಾಸಗಿ ಬಸ್ ದುರಂತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ವರದಿ ಬಂದ ಬಳಿಕ ಸಂಪೂರ್ಣ ವಿವರ ನೀಡುವುದಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾಸಗಿ ಬಸ್ ದುರಂತದಲ್ಲಿ ಏಳು ಜನರು ಮೃತಪಟ್ಟಿದ್ದಾರೆ. ಬಸ್​ನಲ್ಲಿ ಸುಮಾರು 35 ಪ್ರಯಾಣಿಕರಿದ್ದರು. ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿದ್ದೇನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತನಿಖಾ ವರದಿ ಪೂರ್ಣಗೊಂಡ ಬಳಿಕ ಏನಾಗಿದೆಯೆಂದು ಹೇಳುತ್ತೇನೆ ಎಂದರು.

  • ಕಲಬುರಗಿ ಹೊರವಲಯದ ಕಮಲಾಪುರ ಬಳಿ ಇಂದು ಭೀಕರ ಅಪಘಾತ ನಡೆದು ಬಸ್‌ನಲ್ಲಿದ್ದ 7 ಪ್ರಯಾಣಿಕರು ಸಜೀವ ದಹನರಾಗಿ, ಹಲವರು ಗಾಯಗೊಂಡಿರುವ ವಿಷಯ ತಿಳಿದು ದುಃಖಿತನಾಗಿದ್ದೇನೆ.

    ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.

    — Basavaraj S Bommai (@BSBommai) June 3, 2022 " class="align-text-top noRightClick twitterSection" data=" ">

ಖಾಸಗಿ ಬಸ್ ಆಗಿರುವ ಕಾರಣ ಪರಿಹಾರಕ್ಕೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಜೊತೆ ಮಾತಾಡುತ್ತೇನೆ. ಅಪಾಯ ಇರುವ ಕಡೆ ರಸ್ತೆ ಸುರಕ್ಷತಾ ಅನುದಾನವನ್ನು ಬಳಕೆ ಮಾಡಿ, ಅಪಘಾತಗಳನ್ನ ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ.

ಆದರೆ, ಈಗ ಮಾಡ್ತಿರುವ ಕೆಲಸಗಳನ್ನ ಸಾಲುತ್ತಿಲ್ಲ. ಇನ್ನೂ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿದೆ. ಖಾಸಗಿ ಬಸ್​ಗಳು ನಿಯಮ ಉಲ್ಲಂಘನೆ ಮಾಡಿದ ವೇಳೆ ಕ್ರಮ ತೆಗೆದುಕೊಳ್ಳುವ ಕೆಲಸವೂ ಆಗುತ್ತಿದೆ ಎಂದರು.

ಸಚಿವ ಬಿ ಶ್ರೀರಾಮುಲು

ಇದನ್ನೂ ಓದಿ: ಕಲಬುರಗಿಯಲ್ಲಿ ಭೀಕರ ಅಪಘಾತ : ಹೊತ್ತಿ ಉರಿದ ಬಸ್​ನಲ್ಲಿ 7 ಜನ ಸಜೀವ ದಹನ‌ ಶಂಕೆ!

ಮೃತರಲ್ಲಿ ಇಬ್ಬರು ಮಕ್ಕಳು. ಒಂದೇ ಕುಟುಂಬದವರು ಪ್ರಯಾಣ ಮಾಡುತ್ತಿದ್ದರು. ಟೆಂಪೋ ಟ್ರಾವೆಲರ್ ಮುಂದೆ ಬಂದಾಗ ಅಪಘಾತ ತಪ್ಪಿಸಲು‌ ಹೋಗಿ ಈ‌ ಅಪಘಾತವಾಗಿದೆ. ಪಾವಗಡ ಅಪಘಾತ ಸಂದರ್ಭದಲ್ಲಿ ರೋಡ್ ಸೇಫ್ಟಿ ಅನುದಾನ ಬಳಕೆ ಮಾಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಖಾಸಗಿ ವಾಹನಗಳು ನಿಯಮ ಮೀರಿ ನಡೆದರೆ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದರು.

Last Updated : Jun 3, 2022, 1:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.