ETV Bharat / state

ಹೆಚ್​ಡಿಕೆ ರೈತರ ಬಾಯಿಗೆ ಮಣ್ಣು ಹಾಕಿದ್ದಾರೆ: ಕೋಡಿಹಳ್ಳಿ ವಾಗ್ದಾಳಿ

author img

By

Published : Dec 9, 2020, 1:06 PM IST

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ಕುಮಾರಸ್ವಾಮಿ ಅತೀ ಬುದ್ಧಿವಂತರು, ಅವರು ರೈತರ ಬಾಯಿಗೆ ಮಣ್ಣು ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ರೈಲ್ವೆ ನಿಲ್ದಾಣದ ಬಳಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಈ ವೇಳೆ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ರೈತರ ಹೆಸರು ಹೇಳಿಕೊಂಡು ಅಧಿಕಾರ ಅನುಭವಿಸಿದ್ದಾರೆ. ದೇವೇಗೌಡರು ಇವರನ್ನು ಕರೆದು ಬುದ್ಧಿ ಹೇಳಬೇಕಿತ್ತು. ಕುಮಾರಸ್ವಾಮಿ ಕೇವಲ ಕೆಳಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ

ಭೂಸ್ವಾಧೀನ ಕಾಯ್ದೆ ಮೊದಲ ಬಾರಿಗೆ ಕುಮಾರಸ್ವಾಮಿ ತಂದರು. ನೈಸ್ ಕಂಪನಿ ಹೋರಾಟ ವಿಚಾರದಲ್ಲೂ ರೈತರ ವಿರೋಧವಾಗಿ ನಡೆದುಕೊಂಡರು. ಈಗ ರೈತರ ಬಾಯಿಗೆ ಮಣ್ಣು ಹಾಕಿರುವ ನಿಮಗಿದು ಕಡೆಯ ರಾಜಕಾರಣ ಎಂದು ಕೋಡಿಹಳ್ಳಿ ಎಚ್ಚರಿಕೆ ನೀಡಿದರು.

ಓದಿ: ಕಾಂಗ್ರೆಸ್ ರೈತರ ಟವೆಲ್​ಗಳನ್ನು ಹಾಕಿಕೊಂಡು ಬೀದಿಗೆ ಬಂದಿದೆ: ಹೆಚ್​ಡಿಕೆ

ಸಿಎಂ ರೈತರನ್ನು ಮಾತುಕತೆಗೆ ಕರೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ನಿಜವಾಗಲೂ ರೈತರನ್ನು ಆಹ್ವಾನಿಸಿದ್ದಾರೆಯೇ? ನಾವು ಹೇಳಿದ್ರೆ ಕಾಯ್ದೆ ರದ್ದು ಮಾಡ್ತಾರಾ? ರದ್ದು ಮಾಡುವ ಭರವಸೆ ಕೊಟ್ಟರೆ ಮಾತಾಡಬಹುದು. ಇಲ್ಲದಿದ್ದರೆ ಮಾತುಕತೆಯಲ್ಲಿ ಅರ್ಥ ಇಲ್ಲ, ಕಾಯ್ದೆ ರದ್ದು ಮಾಡ್ತಾರೆ ಅಂತ ಸ್ಪಷ್ಟನೆ ಕೊಟ್ರೆ ಹೋಗ್ತೇವೆ ಎಂದರು.

ರೈತರ ಬಗ್ಗೆ ಕಾಳಜಿ ಇದ್ದಿದ್ದರೆ, ಚಳವಳಿ ನಡೆಯುವ ಸಂರ್ಭದಲ್ಲೇ ಭೂ ಸುಧಾರಣಾ ಕಾಯ್ದೆಗೆ ಅಂಗೀಕಾರ ಯಾಕೆ ಮಾಡಿದರು. ಇದರಲ್ಲಿ ಒಂದಿಂಚೂ ಹಿಂದೆ ಸರಿಯುವ ಕೆಲಸ ಮಾಡ್ತಿಲ್ಲ. ಸರ್ಕಾರ ಅವರ ವಾದವನ್ನು ಬಿಡುತ್ತಿಲ್ಲ. ಜೊತೆಗೆ ಪ್ರತಿಭಟನೆಗೆ ಬರುವ ರೈತರನ್ನು ಹಳ್ಳಿ ಹಳ್ಳಿಯಲ್ಲೂ ತಡೆಯುತ್ತಾ ಇದ್ದಾರೆ. ಸಣ್ಣಪುಟ್ಟ ವಾಹನಗಳನ್ನು ತಡೆದು ಧಮ್ಕಿ ಹಾಕಿ ಬೆದರಿಸುತ್ತಿದ್ದಾರೆ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಕೋಡಿಹಳ್ಳಿ ಆರೋಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.