ETV Bharat / state

ಬೆಂಗಳೂರಿನ ಈ ಪ್ರದೇಶಗಳಿಗೆ ನವೆಂಬರ್ 21 ರಂದು ಕಾವೇರಿ ನೀರು ಪೂರೈಕೆ ಸ್ಥಗಿತ

author img

By

Published : Nov 17, 2022, 10:31 PM IST

ನ.21ರಂದು ಬೆಳಗ್ಗೆ 5ರಿಂದ ಸಂಜೆ 6ರ ವರೆಗೆ ಕಾವೇರಿ 1ನೇ ಹಂತ 1ನೇ ಘಟ್ಟದಿಂದ ನೀರು ಸರಬರಾಜಾಗುವ ಪ್ರದೇಶಗಳಲ್ಲಿ ನೀರು ಪೂರೈಕೆ ಸ್ಥಗಿತಗೊಳ್ಳಲಿದ್ದು ಯಾವ ಬಡಾವಣೆಯಲ್ಲಿ ನೀರು ಪೂರೈಕೆ ಆಗಲ್ಲ ಎಂಬ ಮಾಹಿತಿ ಕೆಳಗಿದೆ.

Kn_bng
ನವೆಂಬರ್​ 21ಕ್ಕೆ ಕಾವೇರಿ ನೀರು ಪೂರೈಕೆ ಸ್ಥಗಿತ

ಬೆಂಗಳೂರು: ಕಾವೇರಿ 1ನೇ ಹಂತ 1ನೇ ಘಟ್ಟದಿಂದ ನೀರು ಸರಬರಾಜಾಗುವ ಪ್ರದೇಶಗಳಲ್ಲಿ ನವೆಂಬರ್ 21 ರಂದು, ಮುಂಜಾನೆ 5 ರಿಂದ ಸಂಜೆ 6 ರವರೆಗೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

ಬೆಂಗಳೂರು ಜಲಮಂಡಳಿಯು ಕಾವೇರಿ 4 ಹಂತದ ಘಟ್ಟದಡಿಯಲ್ಲಿ ಬರುವ ಕೆ.ಆರ್. ಪುರಂ ನಿಂದ ರೇಷ್ಮೆ ಸಂಸ್ಥೆಯ ಹೊರವರ್ತುಲ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ವಿವಿಧ ವ್ಯಾಸದ ನೀರು ಸರಬರಾಜು ಮಾಡುವ ಕೊಳವೆ ಮಾರ್ಗಗಳ ಬದಲಾವಣೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದರಿಂದ ನೀರು ಪೂರೈಕೆ ನಿಲ್ಲಿಸಲಾಗುತ್ತಿದೆ.

ಈ ಬಡಾವಣೆಗಳಲ್ಲಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ: ಪುಟ್ಟೇನಹಳ್ಳಿ, ಕೋಣನಕುಂಟೆ ಕ್ರಾಸ್, ಜರಗನಹಳ್ಳಿ, ಜೆ.ಪಿ.ನಗರ 4, 5, 6 ಮತ್ತು 7ನೇ ಹಂತ, ಚುಂಚಕಟ್ಟೆ ಮುಖ್ಯ ರಸ್ತೆ, ಕೊತ್ತನೂರು ದಿಣ್ಣೆ ಮುಖ್ಯ ರಸ್ತೆ, ದೊರೆಸಾನಿಪಾಳ್ಯ, ಬನ್ನೇರುಘಟ್ಟ ಮುಖ, ರಸ್ತೆ, ಜಯದೇವ ಆಸ್ಪತ್ರೆ, 4ನೇ 'ಟಿ' ಬ್ಲಾಕ್ ಪಾರ್ಟ್ 'ಎ', ತಿಲಕ್ ನಗರ, ವಿಜಯ ಬ್ಯಾಂಕ್ ಲೇಔಟ್, ಬಿಳ(ಕಹಳ್ಳಿ, ರೋಲೆ, ಕಾಲೋನಿ, ಕೋಡಿಚಿಕ್ಕನಹಳ್ಳಿ, ಬೊಮ್ಮನಹಳ್ಳಿ, ಹೊಂಗಸಂದ್ರ.

Kn_bng
ನವೆಂಬರ್​ 21ಕ್ಕೆ ಕಾವೇರಿ ನೀರು ಪೂರೈಕೆ ಸ್ಥಗಿತ

ಹೆಚ್‌.ಎಸ್.ಆರ್. ಲೇಔಟ್ 1 ರಿಂದ 7ನೇ ಹಂತ, ಮಂಗಮ್ಮನಪಾಳ್ಯ, ಹೊಸಪಾಳ್ಯ ಎಲೆಕ್ಟ್ರಾನಿಕ್ ಸಿಟಿ 1 ಮತ್ತು 2ನೇ ಹಂತ, 3ನೇ ಬ್ಲಾಕ್ ಕೋರಮಂಗಲ ಕುದುರೆ ಮುಖ ಕಾಲೋನಿ, ಮೇಸ್ತ್ರಿ ಪಾಳ್ಯ, 4ನೇ ಬ್ಲಾಕ್ ಕೋರಮಂಗಲ, ಎಸ್.ಟಿ.ಬೆಡ್, ಹೊಸ ಗುರಪ್ಪನ ಪಾಳ್ಯ, ಜಿ.ಪಾಳ್ಯ, ಕೆ.ಇ.ಬಿ.ಲೇಔಟ್, ಬಿಸ್ಮಿಲ್ಲಾ ನಗರ, ಮಾರುತಿ ಲೇಔಟ್, ನಾರಾಯಣಪ್ಪ ಗಾರ್ಡನ್, ಬಾಲಾಜಿ ನಗರ, ಭವಾನಿ ನಗರ, ಭಾರತಿ ಲೇಔಟ್, ಮೈಕೋ ಲೇಔಟ್, ಎನ್.ಎಸ್‌.ಪಾಳ್ಯ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಸ್ಥಗಿತಗೊಳ್ಳಲಿದೆ.

ಇದನ್ನೂ ಓದಿ: ಸಂಘ ಪರಿವಾರ ಯಾವತ್ತೂ ಅಂಬೇಡ್ಕರರ ಸಂವಿಧಾನ ಒಪ್ಪಿಕೊಂಡಿಲ್ಲ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.