ETV Bharat / state

ಮಹಾರಾಷ್ಟ್ರ ಮೀರಿಸುವತ್ತ ಕರ್ನಾಟಕ, ರಾಜ್ಯದಲ್ಲಿ ಅರ್ಧ ಲಕ್ಷ ಕೋವಿಡ್​ ಕೇಸ್​, 346 ಬಲಿ

author img

By

Published : May 5, 2021, 7:43 PM IST

Updated : May 5, 2021, 10:33 PM IST

Karnataka Covid-19 Update
Karnataka Covid-19 Update

19:40 May 05

ರಾಜ್ಯದಲ್ಲಿಂದು ಅರ್ಧ ಲಕ್ಷ ಜನರಿಗೆ ಕೊರೊನಾ ಸೋಂಕು

  • #COVID19 Karnataka reports 50,112 new positive cases, 26,841 recoveries and 346 deaths in the last 24 hours.

    Total cases: 17,41,046
    Total active cases: 4,87,288 pic.twitter.com/I0UODMGp5Y

    — ANI (@ANI) May 5, 2021 " class="align-text-top noRightClick twitterSection" data=" ">

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್​ ಎರಡನೇ ಅಲೆ ರಾಜ್ಯದಲ್ಲಿ ತೀವ್ರವಾಗಿ ಬೀಸುತ್ತಿದ್ದು, ಕಳೆದ 24 ಗಂಟೆಯಲ್ಲಿ ದಾಖಲೆಯ ಕೋವಿಡ್​ ಪ್ರಕರಣ ದಾಖಲಾಗಿವೆ.  

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಒಂದೇ ದಿನ 50,112 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 17,41,046ಕ್ಕೇರಿಕೆ ಆಗಿದೆ. ಇದರ ಜತೆಗೆ ಕೋವಿಡ್​ನಿಂದಲೇ ಕಳೆದ 24ಗಂಟೆಯಲ್ಲಿ 346 ಸೋಂಕಿತರು ಮೃತಪಟ್ಟಿದ್ದಾರೆ. ಇದೀಗ ರಾಜ್ಯದಲ್ಲಿನ ಸಾವಿನ ಸಂಖ್ಯೆ 16,884ಕ್ಕೆ ಏರಿಕೆ ಆಗಿದೆ.

ರಾಜ್ಯದಲ್ಲಿಂದು 26,841 ಮಂದಿ ಗುಣಮುಖರಾಗಿದ್ದು, ಈ ತನಕ 12,36,854 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 4,87,288 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಸೋಂಕಿತ ಪ್ರಕರಣಗಳ ಶೇಕಡಾವಾರು 32.28 ರಷ್ಟಿದ್ದು, ಸಾವಿನ‌ ಶೇಕಡಾವಾರು ಪ್ರಮಾಣ 0.69ರಷ್ಟಿದೆ.  

ಇದನ್ನೂ ಓದಿ: ಕಳೆದ 24 ಗಂಟೆಗಳಲ್ಲಿ 3 ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್​ ದೃಢ: 3,780 ಮಂದಿ ಸಾವು

ಬೆಂಗಳೂರಿನಲ್ಲಿ ದಾಖಲೆಯ 23,106 ಪ್ರಕರಣ ಕಾಣಿಸಿಕೊಂಡಿದ್ದು, 161 ಮಂದಿ ಕೋವಿಡ್​ನಿಂದ ಬಲಿಯಾಗಿದ್ದಾರೆ. ಉಳಿದಂತೆ ಮೈಸೂರಿನಲ್ಲಿ 2,790 ಕೇಸ್​, ತುಮಕೂರಿನಲ್ಲಿ 2,335 ಪ್ರಕರಣ, ಉಡುಪಿಯಲ್ಲಿ 1,655, ಹಾಸನದಲ್ಲಿ 1,604 ಪ್ರಕರಣ ದಾಖಲಾಗಿವೆ. ರಾಜ್ಯದಲ್ಲಿ ನಿನ್ನೆ ಕೂಡ 44,631 ಜನರಿಗೆ ಮಹಾಮಾರಿ ದೃಢಗೊಂಡಿತ್ತು. ಆದರೆ ಇದೇ ಮೊದಲ ಸಲ ರಾಜ್ಯದಲ್ಲಿ 50 ಸಾವಿರ ಗಡಿ ದಾಟಿದೆ. 

Last Updated :May 5, 2021, 10:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.