ETV Bharat / state

ಬೆಂಗಳೂರು ಟೆಕ್ ಸಮ್ಮಿಟ್: ಇನ್ಫೋಸಿಸ್, ಇಂಟೆಲ್ ಪಾಲಾದ ಕರ್ನಾಟಕ ಐಟಿ ರತ್ನ ಪ್ರಶಸ್ತಿ

author img

By ETV Bharat Karnataka Team

Published : Dec 1, 2023, 10:42 PM IST

ಬೆಂಗಳೂರು ಟೆಕ್ ಸಮ್ಮಿಟ್ ಸಮಾರೋಪ ಸಮಾರಂಭ
ಬೆಂಗಳೂರು ಟೆಕ್ ಸಮ್ಮಿಟ್ ಸಮಾರೋಪ ಸಮಾರಂಭ

ಬೆಂಗಳೂರು ಟೆಕ್ ಸಮ್ಮಿಟ್ ನ ಸಮಾರೋಪ ಸಮಾರಂಭದಲ್ಲಿ ಎಸ್‌ಟಿಪಿಐ-ಐಟಿ ಎಕ್ಸ್‌ಪೊರ್ಟ್‌ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಬೆಂಗಳೂರು : ಮೂರು ದಿನಗಳ ಕಾಲ ನಡೆದ ಬೆಂಗಳೂರು ಟೆಕ್ ಸಮ್ಮಿಟ್​ಗೆ ತೆರೆ ಬಿದ್ದಿದ್ದು, ಸಮ್ಮಿಟ್​ನಲ್ಲಿ ಎಸ್‌ಟಿಪಿಐ ವತಿಯಿಂದ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಐಟಿ ಕಂಪನಿಗಳಿಗೆ 2022-23ನೇ ವರ್ಷದ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಯಿತು. ಇದರಲ್ಲಿ ಕರ್ನಾಟಕದ ಪ್ರತಿಷ್ಠಿತ ಐಟಿ ರತ್ನ ಪ್ರಶಸ್ತಿ ಇನ್ಫೋಸಿಸ್ ಮತ್ತು ಇಂಟೆಲ್ ಕಂಪನಿಗೆ ನೀಡಲಾಯಿತು.

ನಗರದ ಅರಮನೆ ಆವರಣದಲ್ಲಿ ನಡೆದ ಬೆಂಗಳೂರು ಟೆಕ್ ಸಮ್ಮಿಟ್ ನ ಸಮಾರೋಪ ಸಮಾರಂಭದಲ್ಲಿ ಎಸ್‌ಟಿಪಿಐ-ಐಟಿ ಎಕ್ಸ್‌ಪೊರ್ಟ್‌ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರತಿಷ್ಠಿತ ಐಟಿ ರತ್ನ ಪ್ರಶಸ್ತಿಯು ಇನ್ಫೋಸಿಸ್ ಮತ್ತು ಇಂಟೆಲ್ ಕಂಪನಿ ಪಾಲಾಯಿತು. ಇತರ ಕೆಲವು ಪ್ರಶಸ್ತಿಗಳ ವಿಭಾಗಗಳಲ್ಲಿ, ಐಟಿ ಪ್ರೈಡ್‌ ಆಫ್‌ ಕರ್ನಾಟಕ ಪ್ರಶಸ್ತಿ, ಹೈ ಗ್ರೋಥ್‌ ಇನ್‌ ಐಟಿ, ಬೆಸ್ಟ್‌ ಪರ್ಫಾರ್ಮೆನ್ಸ್‌ ಇನ್‌ ಟಯರ್‌ II ಆಂಡ್‌ ಟಯರ್‌ III, ಎಲೆಕ್ಟ್ರಾನಿಕ್‌ ಹಾರ್ಡ್‌ವೇರ್‌, ಎಕ್ಸ್‌ಪೋರ್ಟ್‌ ಪರ್‌ ಎಂಪ್ಲಾಯಿ ಅಂಡ್​ ಎಂಪ್ಲಾಯ್ಮೆಂಟ್‌, ಹೈಯೆಸ್ಟ್‌ ನ್ಯೂ ಜಾಬ್‌ ಕ್ರಿಯೇಟರ್‌, ಹೈಯೆಸ್ಟ್‌ ಪರ್‌ ಎಂಪ್ಲಾಯಿ ಮತ್ತು ಹೈಯೆಸ್ಟ್‌ ಗ್ರೋಥ್‌ ಇನ್‌ ವುಮೆನ್‌ ಎಂಪ್ಲಾಯಿ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಯಿತು.

ಸ್ಮಾರ್ಟ್ ಬಯೋ ಅವಾರ್ಡ್ಸ್: ಸ್ಮಾರ್ಟ್ ಬಯೋ ಅವಾರ್ಡ್ಸ್ ಅನ್ನು ಬಯೋಟೆಕ್ನಾಲಜಿ ವೀಭಾಗದಲ್ಲಿ ಅತ್ಯುತ್ತಮ ನಾಯಕರನ್ನು ಗುರುತಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಸ್ಮಾರ್ಟ್ ಬಯೋ ಪ್ರಶಸ್ತಿಗಳನ್ನು ಐದು ವಿಭಿನ್ನ ವಿಭಾಗಗಳಲ್ಲಿ ಕಂಪನಿಗಳು ಮತ್ತು ಸಂಸ್ಥೆಗಳಿಗೆ ನೀಡಲಾಯಿತು.

1. ಇನ್ನೋವೇಟರ್ ಆಫ್‌ ದಿ ಇಯರ್‌- ಇಮ್ಯುನಿಟಾಸ್ಬಯೋ ಪ್ರೈವೇಟ್ ಲಿಮಿಟೆಡ್
2. ಸ್ಟಾರ್ಟ್ಅಪ್ ಆಫ್‌ ದಿ ಇಯರ್‌ - ಕ್ಯಾಂಬ್ರಿಯನ್ ಬಯೋವರ್ಕ್ಸ್ ಪ್ರೈವೇಟ್ ಲಿಮಿಟೆಡ್
3. ವರ್ಷದ ಅತ್ಯುತ್ತಮ ಮಹಿಳಾ ಉದ್ಯಮಿ- AAARNA ಥೆರಪ್ಯೂಟಿಕ್ಸ್ ಪ್ರೈವೇಟ್ ಲಿಮಿಟೆಡ್
4. ವರ್ಷದ ಅತ್ಯುತ್ತಮ ಸ್ಟಾರ್ಟ್ಅಪ್ (ಬೆಂಗಳೂರು ಆಚೆಗೆ)- ಕಾಸ್ಮಾಸ್ ಬಯೋ ಪ್ರೈವೇಟ್ ಲಿಮಿಟೆಡ್
5. ಸ್ಟಾರ್ಟ್‌ ಆಫ್‌ ದಿ ಇಯರ್‌ (ಕ್ಯಾಂಪಸ್)- ಪೇಪರ್ಸೆನ್ಸ್ ಪ್ರೈವೇಟ್ ಲಿಮಿಟೆಡ್
6. ಅತ್ಯುತ್ತಮ ಸಾಮಾಜಿಕ ಉದ್ಯಮ- ನಿರ್ಲಕ್ಷಿತ ರೋಗ ಸಂಶೋಧನೆಯ ಫೌಂಡೇಶನ್ (FNDR)

ಟಿಸಿಎಸ್ ಗ್ರಾಮೀಣ ಐಟಿ ಪ್ರಶಸ್ತಿಗಳು: ಗ್ರಾಮೀಣ ಐಟಿ ರಸಪ್ರಶ್ನೆಯು ಸಂಸ್ಥೆಯು ನಡೆಸಿದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್ ಇಲಾಖೆ, ಐಟಿ, ಬಿಟಿ ಮತ್ತು ಎಸ್ & ಟಿ, ಬಿಟಿಎಸ್ ಕಾರ್ಯಕ್ರಮದ ಭಾಗವಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್​) ಸಹಭಾಗಿತ್ವದಲ್ಲಿ ಈ ರಸಪ್ರಶ್ನೆ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ 2000 ದಿಂದ ಇದುವರೆಗೆ 18 ಮಿಲಿಯನ್ ವಿದ್ಯಾರ್ಥಿಗಳನ್ನು ತಲುಪಿದ್ದು, ವಿವಿಧ ರಾಜ್ಯಗಳಿಂದ ಸ್ಪರ್ಧಾರ್ಥಿಗಳು ಭಾಗವಹಿಸಿ, ಮೊದಲ ಮತ್ತು ಎರಡನೇ ಬಹುಮಾನ ಪಡೆಯಲಿದ್ದಾರೆ.

ಬಯೋ ರಸಪ್ರಶ್ನೆ : ಬಿಟಿಎಸ್ ನಲ್ಲಿ ಭಾರತ ಬಯೋ ರಸ ಪ್ರಶ್ನೆ ಆಯೋಜಿಸಲಾಗಿತ್ತು. ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಭಾರತದ ಅತಿದೊಡ್ಡ ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆ ಇದಾಗಿತ್ತು. ರಸಪ್ರಶ್ನೆ ಉದ್ದೇಶವು ಜೈವಿಕ ತಂತ್ರಜ್ಞಾನ ಮತ್ತು ಪ್ರಪಂಚದ ಬಗ್ಗೆ ಜಾಗೃತಿ ಮೂಡಿಸುವುದು
ಅಹೋಲಿಸ್ಟಿಕ್ ರೀತಿಯಲ್ಲಿ ವಿಷಯವನ್ನು ಆಳವಾಗಿ ಅಧ್ಯಯನ ಮಾಡಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಾಗಿತ್ತು. ಇದು ವೇಗವಾಗಿ ಬೆಳೆಯುತ್ತಿರುವ ಲೈಫ್ ಸೈನ್ಸ್ ಕ್ಷೇತ್ರದಲ್ಲಿ ನಮ್ಮ ದೇಶದ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಲು ಒಂದು ಅವಕಾಶವಾಗಿದೆ.
ವಿಜೇತರು : ಬೆವನ್ ಮ್ಯಾಥ್ಯೂ
ರನ್ನರ್-ಅಪ್ : ಸಂಚೇತಿ ಕಲ್ಯಾಣಿ

ಇದನ್ನೂ ಓದಿ : ಗ್ರಾಮೀಣ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಸಿಎಸ್ಆರ್ ನಿಧಿ ಮೀಸಲಿಡಿ: ಉದ್ಯಮಿಗಳಿಗೆ ಡಿಕೆಶಿ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.