ETV Bharat / state

ರಾಜ್ಯದಲ್ಲಿಂದು 1,286 ಮಂದಿಗೆ ಕೋವಿಡ್ ಸೋಂಕು: ಮೂವರು ಸಾವು

author img

By

Published : Aug 25, 2022, 9:46 PM IST

karnataka-covid-report
ರಾಜ್ಯದಲ್ಲಿಂದು 1,286 ಮಂದಿಗೆ ಕೋವಿಡ್ ಸೋಂಕು : ಮೂವರು ಸಾವು

ಬೆಂಗಳೂರಿನಲ್ಲಿ 796 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. 1,784 ಮಂದಿ ಚೇತರಿಸಿಕೊಂಡಿದ್ದಾರೆ. ರಾಜಧಾನಿಯಲ್ಲಿ 5,936 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು: ರಾಜ್ಯದಲ್ಲಿ ಇಂದು 27,668 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 1,286 ಜನರಿಗೆ ಕೊರೊನಾ ಸೋಂಕು ತಗುಲಿದೆ. 2,358 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ. 8,700 ಕೋವಿಡ್​​ ಸಕ್ರಿಯ ಪ್ರಕರಣಗಳು ಇವೆ.

ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ. 4.64, ವಾರದ ಸೋಂಕಿತರ ಪ್ರಮಾಣ ಶೇ. 4.96 ಹಾಗೂ ವಾರದ ಸಾವಿನ ಪ್ರಮಾಣ ಶೇ. 0.25 ಇದೆ. ವಿಮಾನ ನಿಲ್ದಾಣದಿಂದ ಯಾರೊಬ್ಬರೂ ತಪಾಸಣೆಗೆ ಒಳಪಟ್ಟಿಲ್ಲ.

ಬೆಂಗಳೂರಿನಲ್ಲಿ 796 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. 1,784 ಮಂದಿ ಚೇತರಿಸಿಕೊಂಡಿದ್ದಾರೆ. ರಾಜಧಾನಿಯಲ್ಲಿ 5,936 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ಕೋವಿಡ್ ಸೋಂಕಿನಿಂದ 16,981 ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಐದು ವರ್ಷದೊಳಗಿನ ಮಕ್ಕಳಿಗೆ ಫೈಜರ್​ ಲಸಿಕೆ ಶೇ 73ರಷ್ಟು ಪರಿಣಾಮಕಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.