ETV Bharat / state

ದಾವೋಸ್​​​ನಲ್ಲಿ ಇನ್ವೆಸ್ಟ್ ಕರ್ನಾಟಕ ಪೆವಿಲಿಯನ್ ಉದ್ಘಾಟನೆ !

author img

By

Published : Jan 20, 2020, 7:35 PM IST

cm news
ಕರ್ನಾಟಕ ಪೆವಿಲಿಯನ್​ಗೆ ಸದ್ಗುರು ಜಗ್ಗಿವಾಸುದೇವ್ ಭೇಟಿ ನೀಡಿ ಮುಖ್ಯ ಮಂತ್ರಿಗಳೊಂದಿಗೆ ಚರ್ಚೆ

ದಾವೋಸ್​ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗದಲ್ಲಿ ಇನ್ವೆಸ್ಟ್​​ ಕರ್ನಾಟಕ ಪೆವಿಲಿಯನ್ ಉದ್ಘಾಟನೆ ಸಮಾರಂಭ ನಡೆಯಿತು.

ಬೆಂಗಳೂರು: ಸ್ವಿಟ್ಜರ್ಲೆಂಡ್​ನ ದಾವೋಸ್​​​​​ನಲ್ಲಿ ವಿಶ್ವ ಆರ್ಥಿಕ ಶೃಂಗ ಆರಂಭಗೊಂಡಿದ್ದು, ಮೊದಲ ದಿನದ ಶೃಂಗದಲ್ಲಿ ಇನ್ವೆಸ್ಟ್ ಕರ್ನಾಟಕ ಪೆವಿಲಿಯನ್ ಸಮಾರಂಭ ನಡೆಯಿತು.

cm news
ಕರ್ನಾಟಕ ಪೆವಿಲಿಯನ್​ಗೆ ಸದ್ಗುರು ಜಗ್ಗಿವಾಸುದೇವ್ ಭೇಟಿ ನೀಡಿ ಮುಖ್ಯ ಮಂತ್ರಿಗಳೊಂದಿಗೆ ಚರ್ಚೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ , ವಿಶ್ವ ಆರ್ಥಿಕ ಶೃಂಗದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಬ್ಲ್ಯೂ ಇ ಎಫ್ ನ ಸೆಂಟರ್ ಫಾರ್ ಫೋರ್ತ್ ಇಂಡಸ್ಟ್ರಿಯಲ್ ರೇವೋಲ್ಯೂಷನ್​ನ ಮುಖ್ಯಸ್ಥರಾದ ಮೂರಟ್ ಸೋನ್ ಮೇಜ್ ಭಾಗಿಯಾಗಿದ್ದರು.

ಕರ್ನಾಟಕ ಪೆವಿಲಿಯನ್​ಗೆ ಸದ್ಗುರು ಜಗ್ಗಿವಾಸುದೇವ್ ಭೇಟಿ ನೀಡಿ ಮುಖ್ಯ ಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದು, ವಿಶೇಷವಾಗಿತ್ತು. ನವೆಂಬರ್​ನಲ್ಲಿ ಇನ್ವೆಸ್ಟ್ ಕರ್ನಾಟಕ ಹೆಸರಿನಲ್ಲಿ ವಿಶ್ವ ಹೂಡಿಕೆದಾರರ ಸಮ್ಮೇಳನ ನಡೆಯಲಿದ್ದು, ಅದರ ಪೂರ್ವಭಾವಿ ಸಮಾರಂಭ ಇದಾಗಿದೆ. ಹೂಡಿಕೆದಾರರನ್ನು ರಾಜ್ಯಕ್ಕೆ ಆಹ್ವಾನ ನೀಡಿ ಸವಲತ್ತು ಕಲ್ಪಿಸುವ ಆಶ್ವಾಸನೆ ನೀಡಿ ಉದ್ದಿಮೆ ಆರಂಭಕ್ಕೆ ಮಾತುಕತೆ ನಡೆಸಲಿದ್ದಾರೆ.

Intro:Body:

ಫೋಟೋ ಕ್ಯಾಪ್ಶನ್:

ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗದಲ್ಲಿ ಇನ್ ವೆಸ್ಟ್ ಕರ್ನಾಟಕ ಪೆವಿಲಿಯನ್ ಉದ್ಘಾಟನೆಯ ಸಂದರ್ಭ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ವಿಶ್ವ ಆರ್ಥಿಕ ಶೃಂಗದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಬ್ಲ್ಯೂ ಇ ಎಫ್ ನ ಸೆಂಟರ್ ಫಾರ್ ಫೋರ್ತ್ ಇಂಡಸ್ಟ್ರಿಯಲ್ ರೇವೋಲ್ಯೂಷನ್  ನ ಮುಖ್ಯಸ್ಥರಾದ ಮೂರಟ್ ಸೋನ್ ಮೇಜ್ (Mr Murat Sonmez)  ಚಿತ್ರದಲ್ಲಿದ್ದಾರೆ. ಕರ್ನಾಟಕ ಪೆವಿಲಿಯನ್ ಗೆ ಸದ್ಗುರು ಜಗ್ಗಿ ವಾಸುದೇವ್ ಭೇಟಿ ನೀಡಿ ಮುಖ್ಯ ಮಂತ್ರಿಗಳೊಂದಿಗೆ ಚರ್ಚೆ ನಡೆಸಿದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.