ETV Bharat / state

ಗೃಹ ಸಚಿವರ ಪ್ರೀತಿಯ ಶ್ವಾನ ಸಾವು.. 'ಸನ್ನಿ'ಗೆ ಬೊಮ್ಮಾಯಿ ಕುಟುಂಬದಿಂದ ಕಣ್ಣೀರ ವಿದಾಯ

author img

By

Published : Jul 12, 2021, 12:35 PM IST

Updated : Jul 12, 2021, 12:43 PM IST

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಮನೆಯ ಶ್ವಾನ ಇಂದು ಮೃತಪಟ್ಟಿದ್ದು, ಮನೆಯವರು ಕಣ್ಣೀರಿನೊಂದಿಗೆ ವಿದಾಯ ಹೇಳಿದರು.

Basavraj Bommai dog dies
ಗೃಹ ಸಚಿವರ ಮನೆಯ ಶ್ವಾನ ಸಾವು

ಬೆಂಗಳೂರು: ಗೃಹ ಸಚಿವ ಬಸವರಾಜ ಬೊಮ್ಮಾಯಿವರಿಗೆ ಶ್ವಾನ ಎಂದರೆ ಎಲ್ಲಿಲ್ಲದ ಪ್ರೀತಿ. ಹಾಗಾಗಿಯೇ ಮನೆಯಲ್ಲಿ ನಾಯಿಯೊಂದನ್ನು ಬಲು ಪ್ರೀತಿಯಿಂದ ಸಾಕಿದ್ದರು. 'ಸನ್ನಿ' ಎಂಬ ಹೆಸರಿನ ಶ್ವಾನ ಕುಟುಂಬ ಸದಸ್ಯರಂತೆ ಗೃಹ ಸಚಿವರ ಮನೆಯಲ್ಲಿತ್ತು. ಆದರೆ, ಇಷ್ಟು ದಿನ ಮನೆಯವರೊಂದಿಗೆ ಬೆರೆತು ತುಂಟಾಟ ಆಡುತ್ತಿದ್ದ ಸನ್ನಿ ಇಂದು ಮೃತಪಟ್ಟಿದೆ.

Basavraj Bommai dog dies
ಗೃಹ ಸಚಿವರ ಪ್ರೀತಿಯ ಶ್ವಾನ ಸಾವು

ವಯೋಸಹಜವಾಗಿ ಗೃಹ ಸಚಿವರ ಪ್ರೀತಿಯ ಶ್ವಾನ ಮೃತಪಟ್ಟಿದ್ದು, ಬೊಮ್ಮಾಯಿ ಕುಟುಂಬ ಕಣ್ಣೀರಿನೊಂದಿಗೆ ಪ್ರೀತಿಯ ಸನ್ನಿಗೆ ವಿದಾಯ ಹೇಳಿತು. ಈ ಕುರಿತು ಟ್ವೀಟ್ ಮಾಡಿ ಸಚಿವ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

HM Basavraj Bommai's Dog died
ಪ್ರೀತಿಯ ಶ್ವಾನದ ಸಾವಿಗೆ ಕಣ್ಣೀರು ಹಾಕಿದ ಸಚಿವ ಬೊಮ್ಮಾಯಿ ಕುಟುಂಬ

"ಇಂದು ನಮ್ಮ ಮನೆಯ ಮುದ್ದಿನ ನಾಯಿ "ಸನ್ನಿ" ವಯೋಸಹಜದಿಂದ ಸಾವನ್ನಪ್ಪಿದ್ದು ತೀವ್ರ ದುಃಖ ತಂದಿದೆ. ಕುಟುಂಬದ ಓರ್ವ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಮನೆಯ ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು. ಓಂ ಶಾಂತಿಃ" ಎಂದು ಸಚಿವ ಬೊಮ್ಮಾಯಿ ಟ್ವೀಟ್​ ಮಾಡಿದ್ದಾರೆ.

  • ಇಂದು ನಮ್ಮ ಮನೆಯ ಮುದ್ದಿನ ನಾಯಿ "ಸನ್ನಿ" ವಯೋಸಹಜ ದಿಂದ ಸಾವನ್ನಪ್ಪಿದ್ದು ತೀವ್ರ ದುಃಖ ತಂದಿದ್ದು ಕುಟುಂಬದ ಓರ್ವ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಮನೆಯ ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು.

    ಓಂ ಶಾಂತಿಃ... pic.twitter.com/PszIOoMsTO

    — Basavaraj S Bommai (@BSBommai) July 12, 2021 " class="align-text-top noRightClick twitterSection" data=" ">
Last Updated : Jul 12, 2021, 12:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.