ETV Bharat / state

High court: ಸಬ್​ ರಿಜಿಸ್ಟ್ರಾರ್​ ಕಚೇರಿ ಅವ್ಯವಸ್ಥೆ ಸರಿಪಡಿಸಲು ಅಗತ್ಯ ಕ್ರಮ- ಸರ್ಕಾರ

author img

By

Published : Jun 26, 2023, 9:37 PM IST

ಹುದ್ದೆಯೇ ಇಲ್ಲದ ಕಡೆಯಲ್ಲಿ ಕೆಲಸ ಮಾಡಿ ಸಂಬಳ ಪಡೆದಿರುವ ಸಬ್​ ರಿಜಿಸ್ಟ್ರಾರ್ ಅಧಿಕಾರಿಗಳ ವಿರುದ್ದ ಆರೋಪ ಮಾಡಿ ಪ್ರಕರಣ ದಾಖಲಾಗಿತ್ತು.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು : ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಡೆಯುತ್ತಿರುವ ಅವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಕಂದಾಯ ಸಚಿವರ ಜೊತೆ ಕಂದಾಯ ಇಲಾಖೆಯ ಕಾರ್ಯದರ್ಶಿ ಚರ್ಚಿಸಿ ಸರಿಪಡಿಸುವುದಕ್ಕಾಗಿ ಪ್ರಯತ್ನ ಮಾಡಲಿದ್ದಾರೆ ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಈ ಕುರಿತು
ಬೆಂಗಳೂರಿನ ಶಾಂತಿನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಬ್​ ರಿಜಿಸ್ಟ್ರಾರ್ ವೈ.ಎಚ್. ಸರೋಜ, ಎಂ ಶ್ರೀಹರಿ ಐದು ಅರ್ಜಿಗಳನ್ನು ದಾಖಲಿಸಿದ್ದರು. ಈ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಿ.ನರೇಂದರ್ ಮತ್ತು ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ವಿಚಾರಣೆಯಲ್ಲಿ ರಾಜ್ಯ ಅಡ್ವೋಕೇಟ್​ ಜನರಲ್​ ಶಶಿಕಿರಣ್​ ಶೆಟ್ಟಿ ವಾದ ಮಂಡಿಸಿ, ಸರ್ಕಾರ ಬದಲಾಗಿದ್ದು, ನೂತನ ಕಾರ್ಯದರ್ಶಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿನ ಅವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸೂಕ್ತ ಯೋಜನೆಯೊಂದನ್ನು (ಮೆಕ್ಯಾನಿಸಮ್) ನ್ಯಾಯಾಲಯದ ಗಮನಕ್ಕೆ ತರಲಿದ್ದಾರೆ. ಇದಕ್ಕಾಗಿ ಎರಡು ವಾರಗಳ ಕಾಲ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿ, ನ್ಯಾಯಾಲಯದ ಆದೇಶವನ್ನು ಸೂಕ್ತ ರೀತಿಯಲ್ಲಿ ಕಂದಾಯ ಇಲಾಖೆಯ ಕಾರ್ಯದರ್ಶಿ ಸ್ವೀಕರಿಸಿದ್ದು, ಯೋಜನೆಯ ಜಾರಿಗೆ ಸಂಬಂಧಿತ ಸಚಿವರ ಮುಂದೆ ಎಲ್ಲ ವಿಚಾರಗಳನ್ನು ಚರ್ಚೆ ನಡೆಸಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ : ವ್ಯಕ್ತಿಯ ವೃಷಣ ಹಿಸುಕಿ ಗಾಯಗೊಳಿಸಿದ ಪ್ರಕರಣ.. ಆರೋಪಿಗೆ ವಿಧಿಸಿದ್ದ ಶಿಕ್ಷೆ ಇಳಿಕೆ ಮಾಡಿದ ಹೈಕೋರ್ಟ್

ಪ್ರಕರಣದ ಹಿನ್ನೆಲೆ : ಶಾಂತಿನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಬ್​ ರಿಜಿಸ್ಟ್ರಾರ್ ವೈ.ಎಚ್. ಸರೋಜ, ಎಂ. ಶ್ರೀಹರಿ ಅವರು ಹುದ್ದೆಯೇ ಇಲ್ಲದ ಕಡೆಯಲ್ಲಿ ಕೆಲಸ ಮಾಡಿ, ಸಂಬಳ ಪಡೆದಿರುವ ಆರೋಪದ ಮೇಲೆ ಬೆಂಗಳೂರಿನ ಬಿಟಿಎಂ ಲೇಔಟ್​ನ ಸಬ್ ರಿಜಿಸ್ಟ್ರಾರ್ ಎಲ್. ಸುಮಲತಾ, ಕೆಂಗೇರಿ ಸಬ್ ರಿಜಿಸ್ಟ್ರಾರ್ ಕೆ.ಪಿ. ನಂಜೇಶ್, ವರ್ತೂರು ಸಬ್ ರಿಜಿಸ್ಟ್ರಾರ್ ಎ. ಸುರೇಶ್ ವಿರುದ್ಧ ಕಂದಾಯ ಇಲಾಖೆ (ಮುದ್ರಾಂಕ ಮತ್ತು ನೋಂದಣಿ) ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದರು.

ಈ ಅರ್ಜಿಗಳಲ್ಲಿ ಹಾಲಿ ಸಬ್ ರಿಜಿಸ್ಟ್ರಾರ್ ಹುದ್ದೆಯಿಂದ ವರ್ಗಾವಣೆ ಮಾಡಿರುವ ಸರ್ಕಾರದ ಆದೇಶವನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸಿ ತಡೆ ಪಡೆದುಕೊಳ್ಳಲಾಗಿದೆ. ತಮಗೆ ವರ್ಗಾವಣೆ ಮಾಡಿದರೂ ಹುದ್ದೆ ತೋರಿಸಿಲ್ಲ. ಹಿರಿಯ ಸಬ್​ ರಿಜಿಸ್ಟ್ರಾರ್​ಗೆ ಮೀಸಲಾಗಿರುವ ಹುದ್ದೆಗಳಿಗೆ ಸಬ್ ರಿಜಿಸ್ಟ್ರಾರ್‌ಗಳನ್ನು ನೇಮಕ ಮಾಡಲಾಗಿದೆ.

ಹಿರಿಯ ಅಧಿಕಾರಿ ಸ್ಥಾನಕ್ಕೆ ಕಿರಿಯ ಅಧಿಕಾರಿ ನೇಮಕವಾದರೆ ಅವರು ಸಹಿ ಮಾಡುವ ದಾಖಲೆಗೆ ಮಾನ್ಯತೆ ಇರುವುದಿಲ್ಲ. ಸರ್ಕಾರಿ ಅಧಿಕಾರಿಯು ಉದ್ಯೋಗಕ್ಕೆ ಕಾಯುವಂತಿಲ್ಲ ಎಂದು ಸರ್ಕಾರದ ಸುತ್ತೋಲೆ ಇದೆ. ಇಲ್ಲವಾದಲ್ಲಿ ಯಾವ ಕಾರಣಕ್ಕಾಗಿ ಅವರಿಗೆ ಹುದ್ದೆ ನೀಡಿಲ್ಲ ಎಂಬುದನ್ನು ವಿವರಿಸಬೇಕು. ಒಂದೇ ಕಚೇರಿಯಲ್ಲಿ ಎರಡೆರಡು ಹುದ್ದೆ ಸೃಷ್ಟಿಸಲಾಗಿದೆ. ಇದಕ್ಕೆ ಅನುಮತಿ ಇಲ್ಲದಿದ್ದರೂ ಇದನ್ನು ಮಾಡಲಾಗಿದೆ ಎಂಬುದು ಅರ್ಜಿದಾರರ ತಮ್ಮ ಅರ್ಜಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ : ಬಾಲಕಿಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ: ಅಪರಾಧಿಗೆ 25 ವರ್ಷ ಜೈಲು ಶಿಕ್ಷೆ ವಿಧಿಸಿ ಗದಗ ಜಿಲ್ಲಾ ನ್ಯಾಯಾಲಯ ತೀರ್ಪು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.