ETV Bharat / state

HIGH COURT: ಮೆಟ್ರೋ ಕಾಮಗಾರಿಗೆ 203 ಮರಗಳ ತೆರವು, 45 ಮರಗಳ ಸ್ಥಳಾಂತರಕ್ಕೆ ಹೈಕೋರ್ಟ್ ಅನುಮತಿ

author img

By

Published : Jun 9, 2023, 9:21 AM IST

ಮೆಟ್ರೋ ಮಾರ್ಗದ ಕಾಮಗಾರಿಗೆ ಸಂಬಂಧಿಸಿದಂತೆ ಮರಗಳ ತೆರವು ಹಾಗೂ ಸ್ಥಳಾಂತರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.

HIGH COURT
ಮೆಟ್ರೋ ಕಾಮಗಾರಿಗೆ ಹೈಕೋರ್ಟ್ ಅನುಮತಿ

ಬೆಂಗಳೂರು: ನಗರದ ದೂರವಾಣಿ ನಗರದಿಂದ ಕೆಂಪಾಪುರದವರೆಗಿನ ಮೆಟ್ರೋ ಮಾರ್ಗದ ಕಾಮಗಾರಿಗಾಗಿ 203 ಮರಗಳನ್ನು ತೆರವುಗೊಳಿಸುವುದು, 45 ಮರಗಳನ್ನು ಸ್ಥಳಾಂತರ ಮಾಡುವುದಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಟಿ. ದತ್ತಾತ್ರೇಯ ದೇವರು ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಮತ್ತು ಎಂ.ಜೆ.ಎಸ್ ಕಮಲ್ ಅವರಿದ್ದ ಪೀಠ, ಮರ ಅಧಿಕಾರಿಗೆ ಅನುಮತಿ ನೀಡಿ ಆದೇಶಿಸಿದೆ.

ಮೆಟ್ರೋ ಕಾಮಗಾರಿ ನಡೆಯುವ ಪ್ರದೇಶಗಳ ಸುತ್ತಲ ಪ್ರದೇಶಗಳಲ್ಲಿ ಸಣ್ಣ ಕಾಡುಗಳ ನಿರ್ಮಾಣ ಮಾಡುವುದಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರ ಕೋರಿಕೆ ತಿರಸ್ಕರಿಸಿದ ನ್ಯಾಯಪೀಠ, ನಗರ ಪ್ರದೇಶದಲ್ಲಿ ಈ ರೀತಿಯ ಅರಣ್ಯ ಮಾಡುವಷ್ಟು ಸ್ಥಳಾವಕಾಶವಿಲ್ಲ ಎಂದು ತಿಳಿಸಿದೆ. ವಿಚಾರಣೆ ವೇಳೆ ಬಿಎಂಆರ್‌ಸಿಎಲ್ ಪರ ವಕೀಲರು, ಮೆಟ್ರೋ ರೈಲು ಯೋಜನೆ ದೊಡ್ಡ ಮಟ್ಟದ ಸಾರ್ವಜನಿಕ ಹಿತಾಸಕ್ತಿ ಹೊಂದಿದೆ. ಕೆಲ ಕಾರಣಗಳಿಂದ ಕಾಮಗಾರಿಗಳು ವಿಳಂಬವಾಗಿತ್ತು. ಮತ್ತೆ ವಿಳಂಬವಾದರೆ ಸಾರ್ವಜನಿಕರಿಗೆ ದೊಡ್ಡ ಸಮಸ್ಯೆ ಆಗಲಿದೆ. ಆದ್ದರಿಂದ ಕಾಮಗಾರಿಯ ವೇಗ ಹೆಚ್ಚಳ ಮಾಡುವುದಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಪೀಠಕ್ಕೆ ವಿವರಿಸಿದರು.

ಮೆಟ್ರೋ ಯೋಜನೆ ಅತ್ಯಂತ ದಕ್ಷ ಮತ್ತು ಪರಿಸರ ಸ್ನೇಹಿಯಾಗಿದೆ. ಯೋಜನೆಯಿಂದ ಜನರ ಪ್ರಯಾಣದ ಸಮಯ ಉಳಿಯಲಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲಿದ್ದು, ವಾಹನಗಳ ಸುಗಮ ಸಂಚಾರಕ್ಕೆ ನೆರವಾಗಲಿದೆ. ಜೊತೆಗೆ, ಆರ್ಥಿಕವಾಗಿ ಲಾಭದಾಯಕವಾಗಿದೆ. ಆದ್ದರಿಂದ ಈ ಯೋಜನೆಗಾಗಿ ಅಗತ್ಯವಿರುವ ಮರಗಳನ್ನು ತೆರವು ಮಾಡುವುದಕ್ಕೆ ಅವಕಾಶ ನೀಡಬೇಕು ಎಂದು ಕೋರಿದರು.

ಪ್ರಕರಣದ ಹಿನ್ನೆಲೆ: ಮೆಟ್ರೋ ಕಾಮಗಾರಿಗಾಗಿ ಅಧಿಕಾರಿಗಳು ಮರಗಳ ತೆರವಿಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ನಡೆಸಬೇಕು. ಅನಗತ್ಯವಾಗಿ ಮರಗಳ ತೆರವಿಗೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಸರಿಯಾದ ಕಾರಣ ನೀಡಿ ಅರ್ಜಿದಾರರ ವಿರುದ್ಧದ ತೀರ್ಮಾನ ಕೈಗೊಂಡಿದೆ.

ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಭೂಮಿ ರದ್ದಾಗುವುದಿಲ್ಲ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಪ್ರಾಧಿಕಾರದಿಂದ ರಸ್ತೆಗಾಗಿ ಭೂ ಮಾಲೀಕರಿಬ್ಬರು ತಮ್ಮ ಜಮೀನನ್ನು ಮೀಸಲಿಟ್ಟಿದ್ದರು. ಆದರೆ, ಮೀಸಲಿಟ್ಟು19 ವರ್ಷಗಳಾದರೂ ಯೋಜನೆ ಪ್ರಾರಂಭವಾಗದೇ ಇದ್ದುದರಿಂದ ಭೂ ಮಾಲೀಕರು ಮೀಸಲಿಟ್ಟ ಅವರ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿಕೊಳ್ಳಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಸರ್ಕಾರ ಅದಾಗಲೇ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಇರುವುದರಿಂದ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತ್ತು.

ಇದನ್ನು ಪ್ರಶ್ನಿಸಿ ಭೂಮಾಲೀಕರು ಹೈಕೋರ್ಟ್​ ಮೆಟ್ಟಿಲೇರಿದ್ದರು. ಅಲ್ಲಿ ಈ ಕುರಿತು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯ ಪೀಠ ರಸ್ತೆಗಳು ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕಾಗಿ ಮಾಸ್ಟ್‌ರ್ ಪ್ಲಾನ್‌ನಲ್ಲಿ ಮೀಸಲಿಟ್ಟ ಭೂಮಿಯು ಯೋಜನೆ ಘೋಷಣೆ ಮಾಡಿ ಐದು ವರ್ಷದ ಕಳೆದರೂ ರದ್ದಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.

ಇದನ್ನೂ ಓದಿ: HIGH COURT: ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಭೂಮಿ 5 ವರ್ಷ ಕಳೆದರೂ ಆ ಯೋಜನೆ ರದ್ದಾಗುವುದಿಲ್ಲ: ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.