ETV Bharat / state

ಡಿಕೆಶಿ ಪುತ್ರಿಯ ಮದುವೆ ಸಂಭ್ರಮ : ಅರಿಶಿಣದಲ್ಲಿ ಮಿಂದೆದ್ದ ಐಶ್ವರ್ಯ

author img

By

Published : Feb 11, 2021, 3:40 PM IST

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಪುತ್ರಿಯ ವಿವಾಹ ಸಮಾರಂಭ ಫೆಬ್ರವರಿ 14 ರಂದು ನೆರವೇರಲಿದ್ದು, ಇಂದು ಅರಿಶಿನ ಶಾಸ್ತ್ರ ನಡೆಯಿತು.

Haldi Ceremony of DKS 's daughter held at Bengaluru
ಡಿಕೆಶಿ ಪುತ್ರಿಯ ಮದುವೆ ಸಂಭ್ರಮ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಪುತ್ರಿ ಐಶ್ವರ್ಯ ವಿವಾಹ ಸಂಭ್ರಮ ಗರಿಗೆದರಿದ್ದು, ಇಂದು ಅರಿಶಿಣ ಶಾಸ್ತ್ರ ನಡೆದಿದೆ.

ಫೆಬ್ರವರಿ 14 ರಂದು ವಿವಾಹ ಕಾರ್ಯಕ್ರಮ ನೆರವೇರಲಿದ್ದು, ಇದಕ್ಕೂ ಮುಂಚಿನ ಶಾಸ್ತ್ರಗಳು ಫೆಬ್ರವರಿ 1 ರಿಂದಲೇ ಆರಂಭವಾಗಿವೆ. ಸಂಪ್ರದಾಯದ ಪ್ರಕಾರ ಇಂದು ಅರಿಶಿನ ಶಾಸ್ತ್ರ ನೆರವೇರಿದೆ.

Haldi Ceremony of DKS 's daughter held at Bengaluru
ಕುಟುಂಬದೊಂದಿಗೆ ವಧು ಐಶ್ವರ್ಯ

ಓದಿ : ಅಮಾರ್ಥ್ಯ-ಐಶ್ವರ್ಯ ಕಲ್ಯಾಣ: ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಕಳೆಗಟ್ಟಿದ ಮದುವೆ ಸಂಭ್ರಮ

ಡಿ.ಕೆ. ಶಿವಕುಮಾರ್ ಅವರ ಸದಾಶಿವ ನಗರ ನಿವಾಸದಲ್ಲಿ ನಡೆದ ಅರಿಶಿನ ಶಾಸ್ತ್ರದಲ್ಲಿ ಸಮೀಪದ ಬಂಧುಗಳು, ಕುಟುಂಬ ಸದಸ್ಯರು ಭಾಗಿಯಾಗಿದ್ದರು.
ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ದಾರ್ಥ ಪುತ್ರ ಅಮರ್ತ್ಯ ಜೊತೆಗೆ ಐಶ್ವರ್ಯ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.