ETV Bharat / state

ಬಿಬಿಎಂಪಿ ವಿಭಜನೆ ಸಮಿತಿ ಪುನರ್‌ರಚಿಸಿ ರಾಜ್ಯ ಸರ್ಕಾರ ಆದೇಶ

author img

By

Published : Jun 12, 2023, 11:00 PM IST

ಬಿಬಿಎಂಪಿ ವಿಭಜನೆ ವಿಚಾರ ಸದ್ಯ ಮರುಜೀವ ಪಡೆದುಕೊಂಡಿದ್ದು, ಈ ಕುರಿತು ನೇಮಿಸಲಾಗಿದ್ದ ಸಮಿತಿ‌ಯನ್ನು ಪುನರ್ ರಚಿಸಲು ರಾಜ್ಯ ಸರ್ಕಾರ ಆದೇಶ ನೀಡಿದೆ.

BBMP
ಬಿಬಿಎಂಪಿ ವಿಭಜನೆ ಸಮಿತಿಯನ್ನು ಪುನರ್‌ರಚಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಬೆಂಗಳೂರು ‌ಮಹಾನಗರ ಪಾಲಿಕೆ ವಿಭಜನೆ ವಿಚಾರ ಇದೀಗ ಮರುಜೀವ ಪಡೆದಿದೆ. ಈ ಸಂಬಂಧ ನೇಮಿಸಲಾಗಿದ್ದ ಸಮಿತಿ‌ಯನ್ನು ಪುನರ್ ರಚಿಸಲು ಸರ್ಕಾರ ಆದೇಶ ಹೊರಡಿಸಿದೆ. ಬಿಬಿಎಂಪಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಪುನರ್ ರಚನೆ ಸಂಬಂಧ ಅಧ್ಯಯನ ನಡೆಸಲು ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಬಿಬಿಎಂಪಿ ‌ನಿವೃತ್ತ ಆಯುಕ್ತ ಸಿದ್ದಯ್ಯ, ರವಿಚಂದರ್ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ.

ಇದನ್ನೂ ಓದಿ: Mysugar factory : ರಾಜ್ಯ ಸರ್ಕಾರದಿಂದ ಮೈಶುಗರ್ ಕಾರ್ಖಾನೆಗೆ 50ಕೋಟಿ ಬಿಡುಗಡೆ ; ಸಚಿವ ಚೆಲುವರಾಯಸ್ವಾಮಿ

ಈ‌ ಮುಂಚೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತದ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸುವುದು ಸೂಕ್ತವೆಂದು ಪರಿಗಣಿಸಲಾಗಿತ್ತು. ವಿಭಜನೆ ಮುನ್ನ ತಜ್ಞರ ಸಮಿತಿಯನ್ನು ನೇಮಿಸಲು ನಿರ್ಧರಿಸಲಾಗಿತ್ತು. ತಜ್ಞರ ಸಮಿತಿಯಿಂದ ನಿಗದಿತ ಕಾಲಮಿತಿಯೊಳಗೆ ವರದಿಯನ್ನು ಪಡೆದು, ವರದಿ ಆಧಾರದ ಮೇಲೆ ಸಾರ್ವಜನಿಕ ಸಲಹೆಯನ್ನು ಪಡೆದು ಸೂಕ್ತ ನಿರ್ಧಾರವನ್ನು ತೆಗೆದುಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡುವ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಲು ಸರ್ಕಾರ ತೀರ್ಮಾನಿಸಿತ್ತು. ಅದರಂತೆ ಬಿ.ಎಸ್. ಪಾಟೀಲ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು 2014ರ ಸೆಪ್ಟೆಂಬರ್​ನಲ್ಲೇ ರಚಿಸಲಾಗಿತ್ತು.

ಇದನ್ನೂ ಓದಿ: ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ ಕುರಿತು ಸಿಎಂ, ಡಿಸಿಎಂ ಜೊತೆ ಚರ್ಚೆ: ಕೃಷಿ ಸಚಿವ ಚೆಲುವರಾಯಸ್ವಾಮಿ

ಯಾವೆಲ್ಲಾ ಅಂಶಗಳ ಬಗ್ಗೆ ನಡೆಯುತ್ತೆ ಅಧ್ಯಯನ?:

  • ಬೆಂಗಳೂರು ಆಡಳಿತ ಹಾಗೂ ಬಿಬಿಎಂಪಿ, ನಗರಾಭಿವೃದ್ಧಿ, ಬಿಡಿಎ, ಜಲಂಮಡಳಿ, ಬಿಎಂಆರ್​ಡಿಎ, ಡಿಯುಎಲ್‌ಟಿ, ನಗರ ಪೊಲೀಸ್ ಆಯುಕ್ತರು, ಅಗ್ನಿ ಶಾಮಕದಳ, ಕೊಳೆಗೇರಿ ಮಂಡಳಿ ಸೇರಿದಂತೆ ಬಿಎಂಟಿಸಿ, ಬೆಸ್ಕಾಂ, ಬಿಎಂಆರ್ ಸಿಎಲ್ ಹಾಗೂ ಉಪನಗರ ರೈಲುಗಳನ್ನೊಳಪಟ್ಟು ಆಡಳಿತಕ್ಕೆ ಮರು ರೂಪ ನೀಡುವ ಸಂಬಂಧ ಅಧ್ಯಯನ.
  • ಬೆಂಗಳೂರು ಜನರ ಜೀವನ ಮಟ್ಟ ಸುಧಾರಣೆ ನಿಟ್ಟಿನಲ್ಲಿ ಸರ್ಕಾರದ ಅನುಮೋದನೆಗೆ ಒಳಪಟ್ಟ ಶಿಫಾರಸುಗಳ ಅನುಷ್ಟಾನ ಸಂಬಂಧ ಅಧ್ಯಯನ
  • ಬ್ರಾಂಡ್ ಬೆಂಗಳೂರನ್ನು ಸದೃಢಗೊಳಿಸುವುದು.
  • ವಾರ್ಡ್ ಮಟ್ಟದಲ್ಲಿ ವಿಕೇಂದ್ರೀಕರಣ ಮಾಡುವ ಬಗ್ಗೆ ಪರಿಶೀಲನೆ.
  • ಉತ್ತಮ ನಾಗರೀಕ ಕೇಂದ್ರಿತ ಸೇವೆಗಳ ಆಡಳಿತ ಸುಧಾರಣೆಗೆ ಪರಿಶೀಲನೆ.

ಇದನ್ನೂ ಓದಿ: Free Bus: ಮಹಿಳೆಯರು ಗುರುತಿನ ಚೀಟಿಗಳ ನಕಲು ಪ್ರತಿ ತೋರಿಸಿ ಪ್ರಯಾಣಿಸಲು ಅನುಮತಿ

ಇದನ್ನೂ ಓದಿ: Toll Charges: ಬೆಂಗಳೂರು - ಮೈಸೂರು ಹೆದ್ದಾರಿ ಟೋಲ್ ಸುಂಕ ಹೆಚ್ಚಳ: ಸಂಚಾರ ಮತ್ತಷ್ಟು ದುಬಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.