ETV Bharat / state

ಹೊಸ ವರ್ಷಾಚರಣೆ ಹಿನ್ನೆಲೆ ಮಾದಕ ವಸ್ತು ಸಾಗಣೆ: 60 ಲಕ್ಷ ಮೌಲ್ಯದ ಗಾಂಜಾ ಜಪ್ತಿ

author img

By ETV Bharat Karnataka Team

Published : Dec 30, 2023, 5:08 PM IST

Ganja seized: ಹೊಸ ವರ್ಷಾಚರಣೆ ಹಿನ್ನೆಲೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ರೈಲಿನಲ್ಲಿ ಸಾಗಲಿಸಲಾಗುತ್ತಿದ್ದ ಮಾದಕ ವಸ್ತುವನ್ನು ರೈಲ್ವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Ganja seized
Ganja seized

ಗಾಂಜಾ ಜಪ್ತಿ ಬಗ್ಗೆ ರಾಜ್ಯ ರೈಲ್ವೆ ಡಿಸಿಪಿ ಡಾ.ಸೌಮ್ಯಲತಾ ಎಸ್.ಕೆ ಮಾಹಿತಿ

ಬೆಂಗಳೂರು: ಹೊಸ ವರ್ಷಾಚರಣೆಗೂ ಮುನ್ನ ಕರ್ನಾಟಕ ರಾಜ್ಯಕ್ಕೆ ಅನ್ಯ ರಾಜ್ಯಗಳಿಂದ ಸರಬರಾಜಾಗುವ ಮಾದಕವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ರಾಜ್ಯ ರೈಲ್ವೇ ಪೊಲೀಸರು ಐದು ಪ್ರಕರಣಗಳಿಂದ 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಒಡಿಶಾ ಮೂಲದ ನಿತ್ಯಾನಾನದ್ ದಾಸ್ (37), ನಿಕೇಶ್ ರಾಣಾ (23), ಜಲಂಧರ್ ಕನ್ಹರ್ (18), ಬೈಕುಂಟಾ ಕನ್ಹರ್ (20), ಸಾಗರ್ ಕನ್ಹರ್ (19), ತ್ರಿಪುರಾ ಮೂಲದ ರಾಜೇಶ್ ದಾಸ್ (25) ಹಾಗೂ ಬಿಹಾರ ಮೂಲದ ಅಮರ್‌ಜಿತ್ ಕುಮಾರ್ (23) ಬಂಧಿತ ಆರೋಪಿಗಳು. ಬಂಧಿತರಿಂದ ಅಂದಾಜು 60 ಲಕ್ಷ ಮೌಲ್ಯದ ಒಟ್ಟು 60.965 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ರಾಜ್ಯಕ್ಕೆ ರೈಲುಗಳ ಮೂಲಕ ಸಾಗಣೆಯಾಗುವ ಮಾದಕ ಪದಾರ್ಥಗಳ ವಿರುದ್ಧ ಡಿಸೆಂಬರ್ 22 ರಿಂದ ರೈಲ್ವೇ ಪೊಲೀಸರು ವಿಶೇಷ ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆ ನಡೆಸಿದ್ದರು.

ಈ ಸಂದರ್ಭದಲ್ಲಿ ಒಡಿಶಾ, ಬಿಹಾರ, ಪಶ್ಚಿಮ ಬಂಗಾಳದಿಂದ ಬರುವ ರೈಲುಗಳ ಮೇಲೆ ಹೆಚ್ಚು ನಿಗಾವಣೆ ವಹಿಸಿ ಮಾದಕವಸ್ತುಗಳನ್ನು ಪತ್ತೆ ಮಾಡಲಾಗಿದೆ. ಬೆಂಗಳೂರು ನಗರ ರೈಲ್ವೇ ಪೊಲೀಸ್ ಠಾಣೆಯಲ್ಲಿ 1, ಬೈಯಪ್ಪನಹಳ್ಳಿ ರೈಲ್ವೇ ಪೊಲೀಸ್ ಠಾಣೆಯಲ್ಲಿ 2, ಬೆಂಗಳೂರು ಗ್ರಾಮಾಂತರ ರೈಲ್ವೇ ಪೊಲೀಸ್ ಠಾಣೆಯಲ್ಲಿ 1 ಮತ್ತು ಹುಬ್ಬಳ್ಳಿ ರೈಲ್ವೇ ಪೊಲೀಸ್ ಠಾಣೆಯಲ್ಲಿ 1 ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಹಣ ಡಬಲ್ ಮಾಡುವ ಆಮಿಷವೊಡ್ಡಿ ವಂಚನೆ: ಖತರ್ನಾಕ್ ಗ್ಯಾಂಗ್ ಬಂಧನ

ಪ್ರತ್ಯೇಕ ಪ್ರಕರಣ: ಬೆಳಗಾವಿಯ ಕಾಕತಿ ಪೊಲೀಸರು ಹಣ ಡಬಲ್ ಮಾಡುವ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ಲಪಟಾಯಿಸುತ್ತಿದ್ದ ಗ್ಯಾಂಗ್ ಅನ್ನು ಹೆಡೆಮುರಿ ಕಟ್ಟಿದ್ದಾರೆ. ಗೋಕಾಕ್ ಪಟ್ಟಣದ ಸಿದ್ದನಗೌಡ ಬಿರಾದಾರ ಇವರಿಂದ ವಂಚನೆಗೆ ಒಳಗಾಗಿದ್ದರು. ದೀಪಾ ಅವಟಗಿ, ಶಿವಾನಂದ ಮಠಪತಿ, ಅಪ್ಪಯ್ಯ ಪೂಜಾರಿ, ಸುನಿಲ್ ವಿಭೂತಿ, ಸಚಿನ್ ಕುಮಾರ ಅಂಬಲಿ, ಭರತೇಶ್ ಅಗಸರ ಹಾಗೂ ಶಶಿಕುಮಾರ್ ದೊಡ್ಡನವರ ಬಂಧಿತ ಆರೋಪಿಗಳು.

ಬಂಧಿತರಿಂದ ಎರಡು ವಾಹನ ಹಾಗೂ 11 ಲಕ್ಷ ರೂ. ನಗದು ಸೇರಿದಂತೆ 22 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಡಿ.18 ರಂದು ಸಿದ್ದನಗೌಡ ಬಿರಾದಾರ ಅವರು 25 ಲಕ್ಷ ರೂ. ಕಳೆದುಕೊಂಡಿರುವ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಹಣ ಪಡೆದ ದಿನಗಳ ಸಿಸಿಟಿವಿ ದೃಶ್ಯವನ್ನು ಬಳಸಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಜೈಲಿನೊಳಗೆ ಗಾಂಜಾ, ಮೊಬೈಲ್ ಎಸೆಯಲು ಯತ್ನ, ಇಬ್ಬರ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.